ತಿರುವನಂತಪುರ: ಒಕ್ಹಿ ಚಂಡಮಾರುತದಿಂದ ಆಗುತ್ತಿರುವ ಅನಾಹುತಗಳಿಗೆ ವಿಪತ್ತು ನಿರ್ವಹಣಾ ಇಲಾಖೆಯೇ ಕಾರಣ ಎಂದು ಕೇರಳದ ಮುಖ್ಯಮಂತ್ರಿ ಪಿಣರೈ ವಿಜಯನ್ ಆರೋಪಿಸಿದ್ದಾರೆ. ಹೈದರಾಬಾದ್ನಿಂದ ಚಂಡಮಾರುತದ ಕುರಿತಾಗಿ ಸರ್ಕಾರಕ್ಕೆ ಸಕಾಲಕ್ಕೆ ಮುನ್ಸೂಚನೆ ನೀಡಲಾಗಿಲ್ಲ ಎಂದು ಶುಕ್ರವಾರ ಮುಖ್ಯಮಂತ್ರಿ ಹೇಳಿದ್ದಾರೆ.
ಚಂಡಮಾರುತವು ತೀವ್ರರೂಪ ತಾಳುವ ಮೂಲಕ ಶುಕ್ರವಾರ ಅರಬ್ಬಿ ಸಮುದ್ರಕ್ಕೆ ಅಪ್ಪಳಿಸಿದೆ. ನೌಕಾಪಡೆಯು ಎಂಟು ಮೀನುಗಾರರನ್ನು ನೀರಿನಿಂದ ರಕ್ಷಿಸಿದ್ದು, ಕಾಣೆಯಾಗಿರುವ 30 ಮೀನುಗಾರರ ಹುಡುಕಾಟದಲ್ಲಿದೆ. ತಮಿಳುನಾಡು ಮತ್ತು ಕೇರಳದಲ್ಲಿ ತಲಾ 4 ಮಂದಿ ಸಾವನ್ನಪ್ಪಿದ್ದು, ಚಂಡಮಾರುಟದ ತೀವ್ರತೆಯಿಂದಾಗಿ ಒಟ್ಟು 8 ಮಂದಿ ಸಾವನ್ನಪ್ಪಿದ್ದಾರೆ.
#WATCH: High tides seen at Lakshadweep coast #CycloneOckhi pic.twitter.com/sxUBC4geku
— ANI (@ANI) December 1, 2017
"ಒಕ್ಹಿ ಚಂಡಮಾರುತವು ತೀವ್ರ ಚಂಡಮಾರುತಕ್ಕೆ ತಿರುಗಿದ್ದು, ಈಶಾನ್ಯದಿಂದ ಸುಮಾರು 110ಕಿ.ಮೀ. ದೂರದಲ್ಲಿರುವ ಮಿನಿಕೋಯ್ (ದ್ವೀಪ) ತಲುಪಿದೆ. ಮುಂದಿನ 24 ಗಂಟೆಗಳಲ್ಲಿ ಲಕ್ಷದ್ವೀಪವನ್ನು ದಾಟುವ ಸಾಧ್ಯತೆಯಿದೆ" ಎಂದು ಭಾರತದ ಹವಾಮಾನ ಇಲಾಖೆ ಶುಕ್ರವಾರ ಹೇಳಿದೆ.
#WATCH: Water logging in Sthanumalayan Temple in Kanyakumari's Suchindram #CycloneOckhi pic.twitter.com/nDSjmpfXoz
— ANI (@ANI) December 1, 2017
ಗೇಲ್ ಗಾಳಿ ವೇಗವು 110-120 ಕಿ.ಮೀ.ನಿಂದ 130 ಕಿ.ಮೀ. ವೇಗದಲ್ಲಿ ತಲುಪಿದ್ದು, ಮುಂದಿನ 24 ಗಂಟೆಗಳ ಅವಧಿಯಲ್ಲಿ ಲಕ್ಷದ್ವೀಪವನ್ನು ಆವರಿಸಲಿದೆ. ಕೇರಳ ಮತ್ತು ಕರ್ನಾಟಕ ಕರಾವಳಿಯಲ್ಲಿ ಪ್ರದೇಶಗಳಲ್ಲಿ ಗಾಳಿ ವೇಗ ತೀವ್ರವಾಗಿದೆ.
ಮುಂದಿನ 24 ಗಂಟೆಗಳಲ್ಲಿ ಲಕ್ಷದ್ವೀಪ ಪ್ರದೇಶ ಸೇರಿದಂತೆ ಇತರ ಸ್ಥಳಗಳಲ್ಲಿ ಅತಿ ಹೆಚ್ಚು ಮಳೆ (20 ಸೇ.ಮೀ.ಗಿಂತ ಹೆಚ್ಚು) ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದಕ್ಷಿಣ ತಮಿಳುನಾಡಿನಲ್ಲಿ ತೀವ್ರ ಮಳೆಯಿಂದಾಗಿ ಜನಜೀವನ ಅಸ್ಥವ್ಯಸ್ಥವಾಗಿದ್ದು ಐದು ಜಿಲ್ಲೆಗಳಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.