Gas Leak Incident: ಲುಧಿಯಾನಾದಲ್ಲಿ ಗ್ಯಾಸ್ ಸೋರಿಕೆಯಿಂದ ದುರ್ಘಟನೆ, 9 ಸಾವು 10 ಜನರಿಗೆ ಗಾಯ

Punjab Gas Leak Incident: ಲೂಧಿಯಾನದಲ್ಲಿ ಅನಿಲ ಸೋರಿಕೆಯಿಂದ ಭಾರಿ ಆತಂಕ ಸೃಷ್ಟಿಯಾಗಿದೆ. ಈ ಅವಘಡದಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ. ಅನೇಕ ಜನರು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  

Written by - Nitin Tabib | Last Updated : Apr 30, 2023, 11:23 AM IST
  • ಗ್ಯಾಸ್ ಸೋರಿಕೆಯಾಗಿ 9 ​​ಮಂದಿ ಪ್ರಾಣ ಕಳೆದುಕೊಂಡಿರುವ ಕಾರಣ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ.
  • ಈ ಘಟನೆ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ. ಕೆಲವರು ಪ್ರಾಣ ಉಳಿಸಿಕೊಳ್ಳಲು ಮನೆ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.
  • ಅವರು ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗುತ್ತಿದೆ.
Gas Leak Incident: ಲುಧಿಯಾನಾದಲ್ಲಿ ಗ್ಯಾಸ್ ಸೋರಿಕೆಯಿಂದ ದುರ್ಘಟನೆ, 9 ಸಾವು 10 ಜನರಿಗೆ ಗಾಯ title=
ಚಿತ್ರ ಕೃಪೆ- ಎಎನ್ಐ

Gas Leak: ಪಂಜಾಬ್‌ನ ಲುಧಿಯಾನದಲ್ಲಿ ಅನಿಲ ಸೋರಿಕೆಯಿಂದ ಭಾರೀ ಅವಘಡ ಸಂಭವಿಸಿದೆ. ಲೂಧಿಯಾನದ ಗ್ಯಾಸ್ ಪುರದಲ್ಲಿ ಅನಿಲ ಸೋರಿಕೆಯಾಗಿದ್ದು, ಅದರ ಹಿಡಿತದಿಂದ 9 ಜನರು ಸಾವನ್ನಪ್ಪಿದ್ದಾರೆ. ಇದಲ್ಲದೇ ಅನಿಲ ಸೋರಿಕೆಯಿಂದ 10 ಮಂದಿ ಗಾಯಗೊಂಡಿದ್ದಾರೆ. ಅಪಘಾತದ ಬಗ್ಗೆ ಮಾಹಿತಿ ತಿಳಿದ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಇಡೀ ಪ್ರದೇಶವನ್ನು ಸೀಲ್ ಮಾಡಿದೆ. ಇದಲ್ಲದೇ ಅಗ್ನಿಶಾಮಕ ದಳದ ತಂಡ ಕೂಡ ಸ್ಥಳಕ್ಕೆ ಆಗಮಿಸಿದೆ. ಗಾಯಾಳುಗಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲಾಗಿದೆ. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ದುರಂತದ ಬಳಿಕ ಈ 9 ಸಾವಿಗೆ ಹೊಣೆ ಯಾರು ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ಯಾರ ನಿರ್ಲಕ್ಷ್ಯದಿಂದ ಗ್ಯಾಸ್ ಸೋರಿಕೆಯಾಗಿದೆ ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಲುಧಿಯಾನದ ವಸತಿ ಪ್ರದೇಶದಲ್ಲಿ ಅನಿಲ ಸೋರಿಕೆ
ನಗರದ ವಸತಿ ಪ್ರದೇಶದಲ್ಲಿರುವ ಕಾರ್ಖಾನೆಯಿಂದ ಅನಿಲ ಸೋರಿಕೆಯಾಗಿ ಕನಿಷ್ಠ 9 ಜನರು ಸಾವನ್ನಪ್ಪಿದ್ದಾರೆ ಎಂದು ಲುಧಿಯಾನ ಪೊಲೀಸರು ತಿಳಿಸಿದ್ದಾರೆ. ಗ್ಯಾಸ್ ಸೋರಿಕೆಯಿಂದ ಹಲವರು ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಮುಂದುವರಿದಿದೆ. ಅನಿಲ ಸೋರಿಕೆಯ ನಂತರ, ಅನೇಕ ಜನರು ಉಸಿರಾಟದ ತೊಂದರೆಯ ಕುರಿತು ದೂರಿದ್ದಾರೆ.

ಇದನ್ನೂ ಓದಿ-New Rule: ಹೆಡ್ ಫೋನ್ ಇಲ್ಲದೆ ವಿಡಿಯೋ ನೋಡಿದ್ರೆ ರೂ.5000 ದಂಡ! ಈ ವಾರದಿಂದ ಹೊಸ ನಿಯಮ ಜಾರಿ

10 ಜನರ ಸ್ಥಿತಿ ಚಿಂತಾಜನಕವಾಗಿದೆ
ಪ್ರಸ್ತುತ ಇಡೀ ಪ್ರದೇಶವನ್ನು ಸೀಲ್ ಮಾಡಲಾಗಿದ್ದು, ಸ್ಥಳೀಯ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮನವಿ ಮಾಡಲಾಗಿದೆ  ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ 10 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಗ್ಯಾಸ್ ಪೀಡಿತರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಇದನ್ನೂ ಓದಿ-Kissing Viral Video: ಚಲಿಸುತ್ತಿರುವ ಸ್ಕೂಟಿ ಮೇಲೆ ಹುಡುಗ-ಹುಡುಗಿ ರೋಮ್ಯಾನ್ಸ್, ಬಾಯ್ ಫ್ರೆಂಡ್ ನನ್ನು ತಬ್ಬಿ ಮುತ್ತು ಕೊಡುತ್ತಿದ್ದಾಳೆ ಹುಡುಗಿ

9 ಜನರ ಸಾವಿನಿಂದ ಕಂಬನಿ ಮಿಡಿದಿದೆ
ಗ್ಯಾಸ್ ಸೋರಿಕೆಯಾಗಿ 9 ​​ಮಂದಿ ಪ್ರಾಣ ಕಳೆದುಕೊಂಡಿರುವ ಕಾರಣ ಪ್ರದೇಶದಲ್ಲಿ ಭಾರಿ ಆತಂಕ ಸೃಷ್ಟಿಯಾಗಿದೆ. ಈ ಘಟನೆ ಸ್ಥಳೀಯ ಜನರಲ್ಲಿ ಆತಂಕ ಮೂಡಿಸಿದೆ. ಕೆಲವರು ಪ್ರಾಣ ಉಳಿಸಿಕೊಳ್ಳಲು ಮನೆ ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಬೇರೆ ಕಡೆ ಸ್ಥಳಾಂತರಗೊಂಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News