NIA Riad: ಕರ್ನಾಟಕ & ಮಹರಾಷ್ಟ್ರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ NIA ದಾಳಿ, 13 ಶಂಕಿತ ಉಗ್ರರ ಬಂಧನ!

ISIS terror conspiracy case: ಐಸಿಸ್ ಭಯೋತ್ಪಾದನೆ ಸಂಚಿನ ಪ್ರಕರಣ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಶನಿವಾರ ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. 

Written by - Puttaraj K Alur | Last Updated : Dec 9, 2023, 11:08 AM IST
  • ಐಸಿಸ್ ಭಯೋತ್ಪಾದನೆ ಸಂಚಿನ ಪ್ರಕರಣ ಸಂಬಂಧ NIA ಅಧಿಕಾರಿಗಳ ದಾಳಿ
  • ಕರ್ನಾಟಕ ಮತ್ತು ಮಹಾರಾಷ್ಟ್ರದ 44 ಸ್ಥಳಗಳಲ್ಲಿ ಶನಿವಾರ ಬೆಳಗ್ಗೆ ದಾಳಿ
  • 13 ಶಂಕಿತ ಉಗ್ರರನ್ನು ಬಂಧಿಸಿರುವ NIA ಅಧಿಕಾರಿಗಳು
NIA Riad: ಕರ್ನಾಟಕ & ಮಹರಾಷ್ಟ್ರದ 40ಕ್ಕೂ ಹೆಚ್ಚು ಸ್ಥಳಗಳಲ್ಲಿ NIA ದಾಳಿ, 13 ಶಂಕಿತ ಉಗ್ರರ ಬಂಧನ!  title=
13 ಶಂಕಿತ ಉಗ್ರರ ಬಂಧನ!

ಬೆಂಗಳೂರು: ಐಸಿಸ್ ಭಯೋತ್ಪಾದನೆ ಸಂಚಿನ ಪ್ರಕರಣಕ್ಕೆ ಸಂಬಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಶನಿವಾರ (ಡಿ.09) ಬೆಳ್ಳಂಬೆಳಗ್ಗೆ ಕರ್ನಾಟಕ ಮತ್ತು ಮಹಾರಾಷ್ಟ್ರದ  44 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ ಎಂದು ಸುದ್ದಿಸಂಸ್ಥೆ ANI ವರದಿ ಮಾಡಿದೆ. 

ಕರ್ನಾಟಕದ 1, ಪುಣೆಯ 2, ಥಾಣೆ ಗ್ರಾಮಾಂತರದಲ್ಲಿ 31, ಥಾಣೆಯ 9 ಮತ್ತು ಭಾಯಂದರ್‌ನಲ್ಲಿ 1 ಸ್ಥಳಗಳಲ್ಲಿ NIA ಅಧಿಕಾರಿಗಳು ಶೋಧ ನಡೆಸಿದ್ದಾರೆ. ಐಸಿಸ್ ಭಯೋತ್ಪಾದನೆ ಸಂಚು ಪ್ರಕರಣ ಸಂಬಂಧ ಇದುವರೆಗೆ 13 ಮಂದಿ ಶಂಕಿತ ಉಗ್ರರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಸೂರ್ಯನ ಸಂಪೂರ್ಣ ಫೋಟೋ ಕ್ಲಿಕ್ಕಿಸಿದ ಆದಿತ್ಯ L1: ಹತ್ತಿರದಿಂದ ನೋಡಿ ‘ನೇಸರ’ನ ಅಂದ-ಚಂದವ…

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಉರ್ದು ಶಾಲೆ ನಡೆಸುತ್ತಿದ್ದ ಶಂಕಿತ ಉಗ್ರನನ್ನು ಸಹ NIA ಅಧಿಕಾರಿಗಳು ಬಂಧಿಸಿದ್ದಾರೆ. ಈ ಶಂಕಿತ ಉಗ್ರನಿಂದ 16.42 ಲಕ್ಷ ರೂ. ನಗದು ಜಪ್ತಿ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ಶಂಕಿತ ಉಗ್ರ ಬೆಂಗಳೂರಿನಲ್ಲಿ ಡಾಟಾ ಕನ್ಸಲ್‌ಟೆಂಟ್‌ ಆಗಿ ಕೆಲಸ ಮಾಡುತ್ತಿದ್ದನು.

ದೇಶದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರ ಹರಡುವ ಭಯೋತ್ಪಾದಕ ಸಂಘಟನೆಗಳ ಯೋಜನೆಗಳನ್ನು ವಿಫಲಗೊಳಿಸಲು NIA ವ್ಯಾಪಕ ತನಿಖೆ ನಡೆಸುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಅನೇಕ ಸ್ಥಳಗಳ ಮೇಲೆ ದಿಢೀರ್‌ ದಾಳಿ ನಡೆಸಿದೆ.

ಇದನ್ನೂ ಓದಿ: ಕಾಶ್ಮೀರ, ಚೀನಾ ವಿಚಾರದಲ್ಲಿ ಜವಾಹರಲಾಲ್ ನೆಹರು ತಪ್ಪು ನಿರ್ಧಾರಗಳಿಗೆ ಕಾರಣ ಬೇರೆಯೇ ಇದೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News