ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ದೆಹಲಿ ಸರ್ಕಾರಕ್ಕೆ 25 ಕೋಟಿ ರೂ.ದಂಡ!

25 ಕೋಟಿ ರೂ.ದಂಡ ವಿಧಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ.

Last Updated : Dec 4, 2018, 12:00 PM IST
ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ದೆಹಲಿ ಸರ್ಕಾರಕ್ಕೆ 25 ಕೋಟಿ ರೂ.ದಂಡ! title=

ನವದೆಹಲಿ: ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ವಿಫಲವಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 25 ಕೋಟಿ ರೂ.ದಂಡ ವಿಧಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ವಾಯುಮಾಲಿನ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಎನ್​ಜಿಟಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜೊತೆ ಸೇರಿ ದೆಹಲಿ ಸರ್ಕಾರ 25 ಕೋಟಿ ರೂ. ದಂಡ ಪಾವತಿಸುವಂತೆ ಆದೇಶಿಸಿದೆ.

ಮಾಲಿನ್ಯ ಹೆಚ್ಚಾಗಲು ಕಾರಣರಾಗುತ್ತಿರುವವರಿಗೆ ಸೂಕ್ತ ದಂಡ ವಿಧಿಸಿ ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ಇಷ್ಟು ಉಲ್ಬಣವಾಗುತ್ತಿರಲಿಲ್ಲ ಎಂದು ಆಕ್ಷೇಪಿಸಿರುವ ಎನ್​ಜಿಟಿ ಚೇರ್ಮನ್ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ನ್ಯಾಯಪೀಠ, ದೆಹಲಿ ಸರ್ಕಾರದ ಉದ್ಯೋಗಿಗಳು ಮತ್ತು ಮಾಲಿನ್ಯಕ್ಕೆ ಕಾರಣರಾಗುತ್ತಿರುವವರಿಂದ ಜುಲ್ಮಾನೆ ಮೊತ್ತವನ್ನು ಕಡಿತಗೊಳಿಸಿ, ಪಾವತಿಸುವಂತೆ  ಸೂಚಿಸಿದೆ. 

ಒಂದು ವೇಳೆ ದೆಹಲಿ ಸರ್ಕಾರ ಈ ದಂಡ ನೀಡಲು ವಿಫಲವಾದರೆ ಪ್ರತಿ ತಿಂಗಳು 10 ಕೋಟಿ ರೂಪಾಯಿ ಹೆಚ್ಚುವರಿ ದಂಡ ನೀಡಬೇಕೆಂದು ಎನ್​ಜಿಟಿ  ಹೇಳಿದೆ. 

Trending News