COVID-19: ದೇಶದಲ್ಲಿ ಕೊರೊನಾ ವೈರಸ್‍ನ ಹೊಸ ಅಲೆಯ ಹಾವಳಿ..!

Coronavirus New Wave: ಭಾರತದಲ್ಲಿ ಮತ್ತೆ ಕೊರೊನಾ ವೈರಸ್‌ನ ಹೊಸ ಪ್ರಕರಣಗಳ ಹಾವಳಿ ಶುರುವಾಗಿದೆ. ಸೋಮವಾರ ದೇಶದಾದ್ಯಂತ 1573 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 4 ಜನರು ಸಾವನ್ನಪ್ಪಿದ್ದಾರೆ. ​

Written by - Puttaraj K Alur | Last Updated : Mar 28, 2023, 02:19 PM IST
  • ಭಾರತದಲ್ಲಿ ಮತ್ತೆ ಕೊರೊನಾ ವೈರಸ್‌ನ ಹೊಸ ಪ್ರಕರಣಗಳ ಹಾವಳಿ ಶುರುವಾಗಿದೆ
  • ಸೋಮವಾರ ದೇಶದಾದ್ಯಂತ 1573 ಹೊಸ ಪ್ರಕರಣ ವರದಿಯಾಗಿದ್ದು, 4 ಜನರು ಸಾವನ್ನಪ್ಪಿದ್ದಾರೆ
  • 14 ರಾಜ್ಯಗಳ 32 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರವು ಶೇ.10 ದಾಟಿದ್ದು, ಆತಂಕ ಹೆಚ್ಚಿಸಿದೆ
COVID-19: ದೇಶದಲ್ಲಿ ಕೊರೊನಾ ವೈರಸ್‍ನ ಹೊಸ ಅಲೆಯ ಹಾವಳಿ..! title=
ಕೊರೊನಾ ವೈರಸ್‌ನ ಹೊಸ ಅಲೆ!

ನವದೆಹಲಿ: ಭಾರತದಲ್ಲಿ ಮತ್ತೆ ಕೊರೊನಾ ವೈರಸ್‌ನ ಹೊಸ ಪ್ರಕರಣಗಳ ಹಾವಳಿ ಶುರುವಾಗಿದೆ. ಸೋಮವಾರ ದೇಶದಾದ್ಯಂತ 1573 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 4 ಜನರು ಸಾವನ್ನಪ್ಪಿದ್ದಾರೆ. 14 ರಾಜ್ಯಗಳ 32 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರವು ಶೇ.10ನ್ನು ದಾಟಿರುವುದರಿಂದ ಕೊರೊನಾ ಹೊಸ ಪ್ರಕರಣಗಳ ಹೆಚ್ಚಳದೊಂದಿಗೆ ಆತಂಕ ಸಹ ಹೆಚ್ಚಾಗಲಾರಂಭಿಸಿದೆ. ಕೊರೊನಾ ಹೊಸ ಅಲೆಯಿಂದ ಜನರು ಎಚ್ಚರಿಕೆಯಿಂದ ಇರಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ತಜ್ಞರು ಸಲಹೆ ನೀಡಿದ್ದಾರೆ.

2 ವಾರಗಳಲ್ಲಿ ಅಂಕಿ 3.5 ಪಟ್ಟು ಹೆಚ್ಚು

ದೇಶದ 32 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣವು ಶೇ.10ನ್ನು ದಾಟಿದೆ ಮತ್ತು ಈ ಅಂಕಿ ಅಂಶವು 2 ವಾರಗಳಲ್ಲಿ 3.5 ಪಟ್ಟು ಹೆಚ್ಚಾಗಿದೆ. ವರದಿಯ ಪ್ರಕಾರ 2 ವಾರಗಳ ಹಿಂದೆ ಕೇವಲ 9 ಜಿಲ್ಲೆಗಳು ಪಾಸಿಟಿವಿಟಿ ದರ ಶೇ.10ರಷ್ಟಿತ್ತು. 2 ವಾರಗಳ ಹಿಂದೆ 8 ರಾಜ್ಯಗಳ 15 ಜಿಲ್ಲೆಗಳಲ್ಲಿ ಪಾಸಿಟಿವಿ ಪ್ರಮಾಣವು 5 ರಿಂದ 10 ಪ್ರತಿಶತದಷ್ಟಿತ್ತು. ಈಗ ಅವುಗಳ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 63 ಜಿಲ್ಲೆಗಳಲ್ಲಿ ಪಾಸಿಟಿವಿಟಿ ಪ್ರಮಾಣವು 5 ರಿಂದ 10 ಪ್ರತಿಶತಕ್ಕೆ ಹೆಚ್ಚಾಗಿದೆ.

ಇದನ್ನೂ ಓದಿVideo: ಫುಟ್ಬಾಲ್ ಆಡುತ್ತಿರುವ ಮುದ್ದಾದ ಆನೆ ಮರಿ, ಕ್ಯೂಟ್‌ ವಿಡಿಯೋ ವೈರಲ್‌

ಕೊರೊನಾದ ಹೊಸ ರೂಪಾಂತರ XBB1.16 ಒತ್ತಡ ಹೆಚ್ಚಿಸಿದೆ

ಕೊರೊನಾ ವೈರಸ್ XBB1.16ನ ಹೊಸ ರೂಪಾಂತರವು ದೇಶದಲ್ಲಿ ವೇಗವಾಗಿ ಹರಡುತ್ತಿದ್ದು, ಇದುವರೆಗೆ 610 ಪ್ರಕರಣಗಳು ಕಂಡುಬಂದಿವೆ. ಕೊರೊನಾದ ಈ ಹೊಸ ರೂಪಾಂತರವು ಸೋಂಕಿನ ಪ್ರಕರಣಗಳ ಇತ್ತೀಚಿನ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ನಂಬಲಾಗಿದೆ. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG)ದ ಮಾಹಿತಿಯ ಪ್ರಕಾರ, ಈ ಎಲ್ಲಾ ಪ್ರಕರಣಗಳು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಂಡುಬಂದಿವೆ.

ಅಂಕಿಅಂಶಗಳ ಪ್ರಕಾರ XBB1.16 ಹೊಸ ರೂಪಾಂತರದ 610 ಪ್ರಕರಣಗಳು 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮಾದರಿಗಳಲ್ಲಿ ಕಂಡುಬಂದಿವೆ. ಈ ರೀತಿಯ ಗರಿಷ್ಠ ಪ್ರಕರಣಗಳು ಮಹಾರಾಷ್ಟ್ರದಲ್ಲಿ 164 ಮತ್ತು ಗುಜರಾತ್‌ನಲ್ಲಿ 164, ತೆಲಂಗಾಣದಲ್ಲಿ 93, ಕರ್ನಾಟಕದಲ್ಲಿ 86 ಕಂಡುಬಂದಿವೆ. INSACOG ಡೇಟಾ ಪ್ರಕಾರ, ಹೊಸ ರೂಪಾಂತರ 'XBB 1.16'ನ್ನು ಜನವರಿಯಲ್ಲಿ 2 ಮಾದರಿಗಳಲ್ಲಿ ದೃಢೀಕರಿಸಲಾಗಿದೆ.

ಈ ಲಕ್ಷಣಗಳು ಕಂಡು ಬಂದರೆ ಎಚ್ಚರ!

ವೈದ್ಯರ ಪ್ರಕಾರ ಕೊರೊನಾ ವೈರಸ್ XBB1.16ನ ಹೊಸ ರೂಪಾಂತರದ ಸೋಂಕಿತ ರೋಗಿಗಳು ಕೆಮ್ಮು, ಶೀತ ಮತ್ತು ಜ್ವರ ಒಳಗೊಂಡಿರುವ ಸಾಮಾನ್ಯ ರೋಗಲಕ್ಷಣಗಳನ್ನು ಹೊಂದಿರುತ್ತಾರೆ. ಕೆಲವು ಸಂದರ್ಭಗಳಲ್ಲಿ ಉಸಿರಾಟದ ತೊಂದರೆಯಂತಹ ಸಮಸ್ಯೆ ಸಹ ಕಂಡುಬರುತ್ತದೆ. ಆದರೆ ಸೋಂಕಿತ ರೋಗಿಗಳನ್ನು ಆಸ್ಪತ್ರೆಗೆ ಸೇರಿಸುವ ಸಾಧ್ಯತೆಗಳು ಕಡಿಮೆಯಾಗುತ್ತಿವೆ.

ಇದನ್ನೂ ಓದಿ: ಜನಸಾಮಾನ್ಯರಿಗೆ ಹಣದುಬ್ಬರದ ದೊಡ್ಡ ಹೊಡೆತ; ಅಗತ್ಯ ಔಷಧಿಗಳ ಬೆಲೆಗಳಲ್ಲಿ ಏರಿಕೆ!

ಕೇಂದ್ರದಿಂದ ರಾಜ್ಯಗಳಿಗೆ ಸೂಚನೆ

ದೇಶದಲ್ಲಿ ಕೋವಿಡ್ -19 ಹೊಸ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ, ಕೇಂದ್ರ ಸರ್ಕಾರವು ಆರ್‌ಟಿ-ಪಿಸಿಆರ್ ಪರೀಕ್ಷೆ ಮತ್ತು ಜಿನೋಮ್ ಸೀಕ್ವೆನ್ಸಿಂಗ್ ಹೆಚ್ಚಿಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಇದರಿಂದ ಹೊಸ ವ್ಯಕ್ತಿಗೆ ಹೊಸ ಸೋಂಕು ತಗುಲಿದರೆ ಅವನ ರಕ್ಷಣೆ ಮಾಡಬಹುದು. ಇದರೊಂದಿಗೆ ಏಪ್ರಿಲ್ 10 ಮತ್ತು 11ರಂದು ದೇಶಾದ್ಯಂತ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಸಿದ್ಧತೆ ಪರಿಶೀಲಿಸಲು ಅಣಕು ಡ್ರಿಲ್‌ಗಳನ್ನು ಸಹ ಆಯೋಜಿಸಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

Trending News