Budget 2025 Expectations: ಫೆಬ್ರವರಿ 01ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡನೆ ಮಾಡಲಿದ್ದಾರೆ. ಮೋದಿ ಸರ್ಕಾರದ ಈ ಬಜೆಟ್‌ನಿಂದ ಮಧ್ಯಮ ವರ್ಗದ ಜನರಿಗೆ ಭಾರೀ ನಿರೀಕ್ಷೆಗಳಿವೆ. 2025ರ ಬಜೆಟ್‌ನಲ್ಲಿ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆ ನಿರೀಕ್ಷೆಯಿದ್ದು ತೆರಿಗೆದಾರರು ಮತ್ತು ಮಧ್ಯಮ ವರ್ಗದ ಜನರಿಗೆ ಬಿಗ್ ರಿಲೀಫ್ ಸಿಗುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಹೌದು, 2025ರ ಬಜೆಟ್‌ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಆದಾಯ ತೆರಿಗೆ ಸ್ಲ್ಯಾಬ್‌ಗಳಲ್ಲಿ ಬದಲಾವಣೆಗೆ ಪರಿಗಣಿಸುತ್ತಿದ್ದಾರೆ. ವಾರ್ಷಿಕ 15-20 ಲಕ್ಷ ಆದಾಯದವರೆಗಿನ ಆದಾಯವನ್ನು ತೆರಿಗೆ ಮುಕ್ತ ಗೊಳಿಸುವ ನಿರೀಕ್ಷೆಯಿದ್ದು ತೆರಿಗೆದಾರರಿಗೆ ಬಿಗ್ ರಿಲೀಫ್ ಸಿಗುವ ನಿರೀಕ್ಷೆಯಿದೆ. ಇದರಿಂದ ಮಧ್ಯಮ ವರ್ಗದ ಜನರ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು ಕುಂಠಿತಗೊಂಡಿರುವ ಆರ್ಥಿಕತೆಗೆ ಹೊಸ ಶಕ್ತಿ ದೊರೆಯುತ್ತದೆ ಎಂದು ಊಹಿಸಲಾಗಿದೆ.
ಇದನ್ನೂ ಓದಿ- ಉಳಿತಾಯ ಖಾತೆಯಲ್ಲಿ ಹೆಚ್ಚು ಹಣ ಇಟ್ಟರೂ ಕಟ್ಟಬೇಕಾಗುತ್ತೆ ತೆರಿಗೆ! ಎಷ್ಟು ಹಣ ಇದ್ರೆ TAX ಇರಲ್ಲ ಗೊತ್ತಾ..!
ಮಾಧ್ಯಮ ವರದಿಗಳ ಪ್ರಕಾರ, ಕೇಂದ್ರ ಸರ್ಕಾರವು ಪ್ರಸ್ತುತ ಆದಾಯ ತೆರಿಗೆಯಲ್ಲಿ ಪರಿಹಾರ ನೀಡಲು ಎರಡು ಆಯ್ಕೆಗಳನ್ನು ಪರಿಗಣಿಸುತ್ತಿದೆ. ಮೊದಲನೆಯದಾಗಿ ವಾರ್ಷಿಕ 10 ಲಕ್ಷದವರೆಗಿನ ಆದಾಯವನ್ನು ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸುವುದು. ಎರಡನೆಯದಾಗಿ 15 ಲಕ್ಷದಿಂದ 20 ಲಕ್ಷವರೆಗಿನ ಆದಾಯವನ್ನು 25% ಹೊಸ ತೆರಿಗೆ ಸ್ಲ್ಯಾಬ್ ವ್ಯಾಪ್ತಿಗೆ ತರುವುದು. ಈ ಎರಡರಲ್ಲಿ ಸರ್ಕಾರ ಯಾವುದೇ ಆಯ್ಕೆಯನ್ನು ಪರಿಗಣಿಸಿದರೂ ತೆರಿಗೆದಾರರು ಮತ್ತು ಮಧ್ಯಮ ವರ್ಗದ ಜನತೆಗೆ ಪ್ರಯೋಜನವೇ ಆಗಲಿದೆ.
ಇದನ್ನೂ ಓದಿ- ಟ್ಯಾಕ್ಸ್ ಉಳಿಸಬೇಕೆಂದು ನಕಲಿ ಬಾಡಿಗೆ ರಸೀದಿ ಕೊಟ್ಟರೆ ಅಪಾಯ ಗ್ಯಾರಂಟಿ; ನಕಲಿ ಬಿಲ್‌ಗಳ ಮೇಲೆ ಐಟಿ ಹದ್ದಿನ ಕಣ್ಣು..!
ಗಮನಾರ್ಹವಾಗಿ, ಪ್ರಸ್ತುತ,15 ಲಕ್ಷ ರೂ. ಆದಾಯಕ್ಕೆ 30% ತೆರಿಗೆ ವಿಧಿಸಲಾಗುತ್ತಿದೆ. ಪ್ರಸ್ತುತ 75,000 ರೂ. ಸ್ಟ್ಯಾಂಡರ್ಡ್ ಡಿಡಕ್ಷನ್ ನೊಂದಿಗೆ 7.75 ಲಕ್ಷದವರೆಗಿನ ವಾರ್ಷಿಕ ಆದಾಯ ಹೊಂದಿರುವವರು ತೆರಿಗೆ ಪಾವತಿಯಿಂದ ಪರಿಹಾರ ಪಡೆಯಬಹುದಾಗಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.