ವಿದ್ಯಾರ್ಥಿಗಳಿಗೆ ಮೋದಿ ಕೊಟ್ಟ ಪರೀಕ್ಷಾ ಟಿಪ್ಸ್ ಗಳೇನು ? ಹಾಗಾದ್ರೆ ಓದಿ ಇಲ್ಲಿ

      

Last Updated : Feb 16, 2018, 03:38 PM IST
ವಿದ್ಯಾರ್ಥಿಗಳಿಗೆ ಮೋದಿ ಕೊಟ್ಟ ಪರೀಕ್ಷಾ ಟಿಪ್ಸ್ ಗಳೇನು ? ಹಾಗಾದ್ರೆ ಓದಿ ಇಲ್ಲಿ  title=

ನವದೆಹಲಿ: ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳ ಒತ್ತಡ ನಿವಾರಣೆಗಾಗಿ ಪ್ರಧಾನಿ ಮೋದಿಯವರು ದೆಹಲಿಯ ತಲ್ಕಥಾ ಕ್ರೀಡಾಂಗಣದಲ್ಲಿನ 'ಪರೀಕ್ಷಾ ಪೆ ಚರ್ಚಾ' ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಟಿಪ್ಸ್ ನೀಡಿದರು.

 ಮೋದಿ ಈ ಸಂದರ್ಭದಲ್ಲಿ ಮಾತನಾಡಿದ್ದಿಷ್ಟು

*ಇಂದು ನಾನು ವಿದ್ಯಾರ್ಥಿ, ನೀವು ನನ್ನ ಮೌಲ್ಯಮಾಪಕರು ನೀವು ನನಗೆ 10 ಕ್ಕೆ ಎಷ್ಟು ಕೊಡುತ್ತಿರಾ ಎನ್ನುವುದನ್ನು ಆನಂತರ ಹೇಳಬಹುದು.ನೀವು ನನ್ನನ್ನು ಪ್ರಧಾನಿ ಎನ್ನುವುದರ ಬದಲಾಗಿ ಸ್ನೇಹಿತ ಎಂದು ಪರಿಗಣಿಸಿ. 

*ಪ್ರತಿಯೊಬ್ಬ ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳು ಚೆನ್ನಾಗಿ ಬೆಳೆಯಲಿ ಎಂದು ಕನಸು ಕಾಣುತ್ತಾರೆ.ಕೆಲವು ಸಂದರ್ಭದಲ್ಲಿ ತಂದೆ ತಾಯಿಗಳು ತಮ್ಮ ಇಚ್ಚೆಗಳೆಲ್ಲವನ್ನು ಮಕ್ಕಳ ಮೇಲೆ ಹೇರುತ್ತಾರೆ

*ಪೋಷಕರು ತಾವು ತಮ್ಮ ಜೀವನದಲ್ಲಿ ಸಾಧಿಸಲಾಗದೆ ಇರುವುದನ್ನು ಮಕ್ಕಳ ಮೂಲಕ ನೋಡಲು ಇಚ್ಚಿಸುತ್ತಾರೆ.

*ನೀವು ನಿಮ್ಮ ತಂದೆ ತಾಯಿಗಳ ಜೊತೆಗೆ ಮುಕ್ತವಾಗಿ ಮಾತನಾಡಿ.

*ಪೋಷಕರು ತಮ್ಮ ಮಕ್ಕಳಿಗೆ ಕೇವಲ ಅಂಕಗಳ ಆಧಾರದ ಮೇಲೆ ಅವರಿಗೆ ಪ್ರೋತ್ಸಾಹ ನೀಡಬೇಡಿ.

*ನಿಮ್ಮ ಮನೆಯಲ್ಲಿ ಮಕ್ಕಳಿಗೆ ಮಾನಸಿಕ ಒತ್ತಡ ಕಡಿಮೆ ಮಾಡುವ ಪ್ರಯತ್ನ ಮಾಡಿ.

*ನಿಮ್ಮ ಮಕ್ಕಳನ್ನು ಇತರ ವಿದ್ಯಾರ್ಥಿಗಳಿಗೆ ಹೋಲಿಸಬೇಡಿ. 

* ಪ್ರಾಮಾಣಿಕವಾಗಿ  ನಾವು ಪರೀಕ್ಷೆಗೆ ತಯಾರಾಗಿರುತ್ತೇವೆ ಆದರೆ ವಿಶ್ವಾಸದ ಕೊರತೆಯಿಂದಾಗಿ  ಕೊನೆಯ ಕ್ಷಣದಲ್ಲಿ ಎಲ್ಲವನ್ನು ಮರೆತು ಹೊಗುತ್ತೇವೆ. 

Trending News