2019 ರ ಚುನಾವಣೆ ನಂತರ ಮೋದಿ ಪ್ರಧಾನಿಯಾಗಿರಲ್ಲ- ಶರದ್ ಪವಾರ್

2019 ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಸರಕಾರದಲ್ಲಿ ಬದಲಾವಣೆಯುಂಟಾಗಲಿದೆ ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಇಂಡಿಯಾ ಟುಡೆ ಮುಂಬೈ ಮಂಥನ್ ಕಾರ್ಯಕ್ರಮದಲ್ಲಿ ತಿಳಿಸಿದರು. "ಮಹಾರಾಷ್ಟ್ರದಲ್ಲಿ 2019 ರಲ್ಲಿ ರಾಜಕೀಯ ಸಮೀಕರಣಗಳು ಒಂದೇ ಆಗಿರುತ್ತವೆ ಎಂದು ನನಗೆ ಅನಿಸುವುದಿಲ್ಲ ಮಹಾರಾಷ್ಟ್ರ ಮತ್ತು ನವದೆಹಲಿಗಳಲ್ಲಿಯೂ ಬದಲಾವಣೆಗಳಾಗಳಿವೆ ಎಂದು ಪವಾರ್ ತಿಳಿಸಿದರು. 

Last Updated : Oct 23, 2018, 01:44 PM IST
2019 ರ ಚುನಾವಣೆ ನಂತರ ಮೋದಿ ಪ್ರಧಾನಿಯಾಗಿರಲ್ಲ- ಶರದ್ ಪವಾರ್  title=

ನವದೆಹಲಿ:2019 ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಸರಕಾರದಲ್ಲಿ ಬದಲಾವಣೆಯುಂಟಾಗಲಿದೆ ಎಂದು ಎನ್ಸಿಪಿ ನಾಯಕ ಶರದ್ ಪವಾರ್ ಇಂಡಿಯಾ ಟುಡೆ ಮುಂಬೈ ಮಂಥನ್ ಕಾರ್ಯಕ್ರಮದಲ್ಲಿ ತಿಳಿಸಿದರು. "ಮಹಾರಾಷ್ಟ್ರದಲ್ಲಿ 2019 ರಲ್ಲಿ ರಾಜಕೀಯ ಸಮೀಕರಣಗಳು ಒಂದೇ ಆಗಿರುತ್ತವೆ ಎಂದು ನನಗೆ ಅನಿಸುವುದಿಲ್ಲ ಮಹಾರಾಷ್ಟ್ರ ಮತ್ತು ನವದೆಹಲಿಗಳಲ್ಲಿಯೂ ಬದಲಾವಣೆಗಳಾಗಳಿವೆ ಎಂದು ಪವಾರ್ ತಿಳಿಸಿದರು. 

"ಇಂದಿನ ರಾಜಕೀಯ ಪರಿಸ್ಥಿತಿ 2004 ರಲ್ಲಿದ್ದ ಹಾಗೆ ಇದೆ. 2019ರಲ್ಲಿ ಮತ್ತೆ ಏಕೈಕ ಪಕ್ಷ ಅಧಿಕಾರದಲ್ಲಿ ಉಳಿಯಲು ಸಾಧ್ಯವಾಗಿಲ್ಲ.ಯಾವುದೇ ಪಕ್ಷಕ್ಕೂ ಬಹುಮತ ಬರುವುದಿಲ್ಲ ಎಂದು ಶರದ್ ಪವಾರ್ ಹೇಳಿದರು. 2004 ರಲ್ಲಿ ಯಾವುದೇ ಪಕ್ಷ ಬಹುಮತಕ್ಕೆ ಬರದ ಕಾರಣ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ 10 ವರ್ಷಗಳ ಕಾಲ ಅಧಿಕಾರವನ್ನು ನಡೆಸಿತು ಎಂದು ತಿಳಿಸಿದರು.

ಅಟಲ್ ಬಿಹಾರಿ ವಾಜಪೇಯಿ 2004 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಪ್ರಧಾನಮಂತ್ರಿಯಾಗಿದ್ದರು. ಬಿಜೆಪಿ ಸಂಸದೀಯ ಚುನಾವಣೆಯಲ್ಲಿ  ಶೈನಿಂಗ್ ಇಂಡಿಯಾದೊಂದಿಗೆ ಚುನಾವಣೆಯ ಮೊರೆಹೋಯಿತು ಆದರೆ ಅದು ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ವಿಫಲವಾಯಿತು. 

ಶರದ್ ಪವಾರ್ 2019 ರ ಚುನಾವಣೆಗೆ "ಮೋದಿ ವಿರುದ್ಧ ಯಾರು" ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ "ಮನಮೋಹನ್ ಸಿಂಗ್ ಪ್ರಧಾನಿಯಾಗಲಿ ಎಂದು 2004 ರಲ್ಲಿ ಯಾರಾದರು ಯೋಚಿಸಿದ್ದರೆ? ರಾಜಕೀಯದಲ್ಲಿ ಪ್ರತಿಯೊಂದು ಪರಿಸ್ಥಿತಿಯೂ ನಾಯಕನನ್ನು ನಿರ್ಮಿಸುತ್ತದೆ ಎಂದು ತಿಳಿಸಿದರು.

 

Trending News