ಈಗ ಆಂಧ್ರಪ್ರದೇಶದಲ್ಲೂ ಮರುನಾಮಕರಣ ರಾಜಕೀಯಕ್ಕೆ ಸಿಎಂ ಜಗನ್ ನಾಂದಿ

ಉತ್ತರ ಪ್ರದೇಶದ ನಂತರ ಈಗ ಆಂಧ್ರಪ್ರದೇಶದಲ್ಲಿನ ಜಗನ್ ರೆಡ್ಡಿ ನೇತೃತ್ವದ ಸರ್ಕಾರ ಮರುನಾಮಕರಣ ರಾಜಕೀಯಕ್ಕೆ ನಾಂದಿ ಹಾಡಿದೆ.

Last Updated : Nov 5, 2019, 02:50 PM IST
ಈಗ ಆಂಧ್ರಪ್ರದೇಶದಲ್ಲೂ ಮರುನಾಮಕರಣ ರಾಜಕೀಯಕ್ಕೆ ಸಿಎಂ ಜಗನ್ ನಾಂದಿ title=
file photo

ನವದೆಹಲಿ: ಉತ್ತರ ಪ್ರದೇಶದ ನಂತರ ಈಗ ಆಂಧ್ರಪ್ರದೇಶದಲ್ಲಿನ ಜಗನ್ ರೆಡ್ಡಿ ನೇತೃತ್ವದ ಸರ್ಕಾರ ಮರುನಾಮಕರಣ ರಾಜಕೀಯಕ್ಕೆ ನಾಂದಿ ಹಾಡಿದೆ.

ಡಾ. ಎಪಿಜೆ ಅಬ್ದುಲ್ ಕಲಾಮ್ ಅವರ ಹೆಸರಿನಲ್ಲಿ ನೀಡಲಾಗುತ್ತಿದ್ದ ಪ್ರತಿಭಾ ಪುರಸ್ಕಾರವನ್ನು ಈಗ ಆಂಧ್ರಪ್ರದೇಶದ ಸರ್ಕಾರ ವೈಎಸ್ಆರ್ ವಿದ್ಯಾ ಪುರಸ್ಕಾರ ಎಂದು ಮರು ನಾಮಕರಣ ಮಾಡಿದೆ. ಆದರೆ ಈ ನಿರ್ಧಾರವನ್ನು ರಾಜ್ಯದ ವಿರೋಧ ಪಕ್ಷಗಳಾದ ತೆಲುಗು ದೇಶಂ ಪಕ್ಷ ಮತ್ತು ಭಾರತೀಯ ಜನತಾ ಪಕ್ಷ ಖಂಡಿಸಿವೆ. ಎಸ್‌ಎಸ್‌ಸಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಈ ಹಿಂದೆ ಸರ್ಕಾರ ಈ ವಿದ್ಯಾರ್ಥಿಗಳನ್ನು ರಾಜ್ಯದಾದ್ಯಂತ ಆಯ್ಕೆ ಮಾಡುತ್ತಿತ್ತು, ಆದರೆ ಈಗ ಸರ್ಕಾರವು ಮಾರ್ಗಸೂಚಿಗಳನ್ನು ಬದಲಾಯಿಸಿದೆ ಮತ್ತು ಪ್ರಶಸ್ತಿಗಳನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಮಾತ್ರ ನೀಡಲಾಗುತ್ತಿದೆ.

ಸರ್ಕಾರದ ನಿರ್ಧಾರವನ್ನು ಖಂಡಿಸಿ ಟ್ವೀಟ್ ಮಾಡಿರುವ ಚಂದ್ರಬಾಬು ನಾಯ್ಡು 'ಡಾ. ಕಲಾಂ ಅವರು ತಮ್ಮ ಸ್ಪೂರ್ತಿದಾಯಕ ಜೀವನದಿಂದ ರಾಷ್ಟ್ರಕ್ಕಾಗಿ ಸಾಕಷ್ಟು ಸಾಧನೆ ಮಾಡಿದ್ದಾರೆ. ವೈ.ಎಸ್.ಜಗನ್ ಅವರ ಸರ್ಕಾರವು 'ಎಪಿಜೆ ಅಬ್ದುಲ್ ಕಲಾಂ ಪ್ರತಿಭಾ ಪುರಸ್ಕಾರವನ್ನು ವೈಎಸ್ಆರ್ ವಿದ್ಯಾ ಪುರಸ್ಕಾರ ಎಂದು ಬದಲಾಯಿಸುವುದು ಪೂಜ್ಯನೀಯ ವ್ಯಕ್ತಿಯನ್ನು ಅಗೌರವದಿಂದ ಕಾಣುವ ನಡೆಯಾಗಿದೆ ಎಂದು ಹೇಳಿದ್ದಾರೆ.  

Trending News