'ನನ್ನ ತಾಯಿ ಸಾಯುತ್ತಾರೆ': ಬ್ಲ್ಯೂ ವೇಲ್ ಬಲಿಪಶು ವಿವರಿಸಿದ ಭಯಾನಕ ಕಥೆ

ರಾಜಸ್ಥಾನದ ಜೋದಪುರದಲ್ಲಿ ಬ್ಲ್ಯೂ ವೇಲ್ ಆತ್ಮಹತ್ಯೆ ಸವಾಲನ್ನು ಮುಗಿಸಲು ಯತ್ನಿಸುತ್ತಿದ್ದ 17 ವರ್ಷ ವಯಸ್ಸಿನ ಹುಡುಗಿಯೊಬ್ಬಳು ಪೊಲೀಸರು ಮತ್ತು ಚಾಲಕರಿಂದ ರಕ್ಷಿಸಲ್ಪಟ್ಟಿದ್ದಾಳೆ.

Last Updated : Sep 5, 2017, 05:22 PM IST
'ನನ್ನ ತಾಯಿ ಸಾಯುತ್ತಾರೆ': ಬ್ಲ್ಯೂ ವೇಲ್ ಬಲಿಪಶು ವಿವರಿಸಿದ ಭಯಾನಕ ಕಥೆ title=
ಪ್ರಾತಿನಿಧಿಕ ಚಿತ್ರ

ನವದೆಹಲಿ: ರಾಜಸ್ಥಾನದ ಜೋಧ್ಪುರದಲ್ಲಿ ಬ್ಲ್ಯೂ ವೇಲ್ ಸವಾಲನ್ನು ಮುಗಿಸಲು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದ 17 ವರ್ಷ ವಯಸ್ಸಿನ ಹುಡುಗಿಯನ್ನು ಪೊಲೀಸರು ಮತ್ತು ಚಾಲಕರು ರಕ್ಷಿಸಿದ್ದಾರೆ.

ಎನ್ಡಿಟಿವಿ ವರದಿಯ ಪ್ರಕಾರ ಹುಡುಗಿಯು 'ಬ್ಲ್ಯೂ ವೇಲ್' ಅನ್ನು ತನ್ನ ತೋಳಿನೊಳಗೆ ಕೆತ್ತಿದ ಮತ್ತು ಬಂಡೆಯೊಂದನ್ನು ಸರೋವರದೊಳಗೆ ನೆಲಸಮ ಮಾಡಲು ಪ್ರಯತ್ನಿಸುತ್ತಿದ್ದಳು. ಈ ಘಟನೆಯು ಸೋಮವಾರ ರಾತ್ರಿ ನಡೆದಿದ್ದು, ಬಿಎಸ್ಎಫ್ ಸೈನಿಕನ ಮಗಳು ತಾನು ಮಾರುಕಟ್ಟೆಗೆ ಹೋಗುತ್ತಿದ್ದೆ ಎಂದು ಆಕೆಯ ಪೋಷಕರಿಗೆ ಸುಳ್ಳು ಹೇಳಿ ಮನೆಯಿಂದ ತೆರಳಿದ್ದಳು. ಅವಳು ಹಿಂತಿರುಗದ ಕಾರಣ, ಆಕೆಯ ಪೋಷಕರು ಅವಳಗೆ ಫೋನ್ ಮಾಡಿದರು, ಆದರೆ ಅಪರಿಚಿತ ವ್ಯಕ್ತಿಯು ಫೋನ್ ಎತ್ತಿದ್ದನ್ನು ತಿಳಿದ ಪೋಷಕರು ಗಾಬರಿಯಾಗಿ ಮಗಳನ್ನು ಹುಡುಕಲಾರಂಭಿಸಿದರು.

ಈ ಮಧ್ಯೆ, ಅದೇ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ ಓಂ ಪ್ರಕಾಶ್ ಎಂಬ ವ್ಯಕ್ತಿಯಿಂದ ಹುಡುಗಿಯು ಗುರುತಿಸಲ್ಪಟ್ಟು ಹುಡುಗಿಯನ್ನು ರಕ್ಷಿಸಲು ಮುಂದಾಗಿದ್ದಾರೆ.

ಎನ್ಡಿಟಿವಿಗೆ ಮಾತನಾಡಿದ ಓಂ ಪ್ರಕಾಶ್, "ಅವಳು ಅಳುತ್ತಿದ್ದಳು, ಅವಳು ಸರೋವರದೊಳಗೆ ಜಿಗಿಯಲು ಹೋಗುತ್ತಿದ್ದಳು, ನಾನು ಅವಳ ಹಿಂದೆ ಓಡಿ ಅವಳನ್ನು ನಿಲ್ಲಿಸಲು ಪ್ರಯತ್ನಿಸಿದೆ. ನಾನು ಅವಳೊಂದಿಗೆ ಮಾತನಾಡಲು ಪ್ರಾರಂಭಿಸಿದೆ ಆಗ ಅವಳು 'ನನ್ನ ತಾಯಿ ಸಾಯುತ್ತಾರೆ' ಎಂದು ಹೇಳಿದಳು. ನಿಮ್ಮ ತಾಯಿ ಏಕೆ ಸಾಯುತ್ತಾರೆ ಎಂದು ನಾನು ಕೇಳಿದಾಗ, ತಾನು ಬ್ಲ್ಯೂ ವೇಲ್ ಆಟದ ಅಂತ್ಯದಲ್ಲಿದ್ದು, ಅವಳು ತನ್ನ ಆಟವನ್ನು ಪೂರ್ಣಗೊಳಿಸದಿದ್ದರೆ ತಾಯಿ ಸಾಯುತ್ತಾರೆ" ಎಂದು ಅಳುತ್ತಿದ್ದಳು ಎಂದು ತಿಳಿಸಿದರು.

ಘಟನೆಯ ಬಗ್ಗೆ ಮಾತನಾಡಿದ ಲೆಖರಾಜ್ ಸಿಹಾಗ್ ಎಂಬ ಪೊಲೀಸ್ ಅಧಿಕಾರಿಯೊಬ್ಬರು, "ಕಳೆದ ರಾತ್ರಿ ಸುಮಾರು 11 ಗಂಟೆಗೆ ನಾವು ಹುಡುಗಿಯನ್ನು ಕಲ್ಯಾಣ ಸರೋವರದ ಸುತ್ತಲೂ ಹುಡುಕುತ್ತಿದ್ದೆವು ಮಾಡುತ್ತಿದ್ದೆವು ... ನಾವು ಆ ಸ್ಥಳವನ್ನು ತಲುಪುವ ಸಮಯದಲ್ಲೇ ಹುಡುಗಿ ಮತ್ತು ಓಂ ಪ್ರಕಾಶ್ ಹೊರಬಂದರು" ಎಂದು ತಿಳಿಸಿದರು.

ಅದೇ ರೀತಿ, ಯುವಕ ಬ್ಲ್ಯೂ ವೇಲ್ ಆತ್ಮಹತ್ಯೆ ಸವಾಲನ್ನು ಮುಗಿಸುವ ಬಗ್ಗೆ ಪುದುಚೇರಿಯಲ್ಲಿ 21 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ರಕ್ಷಿಸಲಾಯಿತು. ಮಹಿಳೆ ಬೆಳಿಗ್ಗೆ ಮುಂಜಾನೆ ಕಡಲ ತೀರದ ರಸ್ತೆಯಲ್ಲೇ ಗುರುತಿಸಲ್ಪತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Trending News