ಗುಜರಾತ್ ಸಿಎಂ ವಿಜಯ್ ರುಪಾನಿ ವಿರುದ್ಧ ಬಿಹಾರದಲ್ಲಿ ದಾಖಲಾಗಲಿದೆ ಎಫ್ಐಆರ್!

ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಮತ್ತು ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ವಿರುದ್ಧ ಎಫ್ಐಆರ್ ದಾಖಲಾಗಲಿದೆ.

Last Updated : Jan 23, 2019, 11:35 AM IST
ಗುಜರಾತ್ ಸಿಎಂ ವಿಜಯ್ ರುಪಾನಿ ವಿರುದ್ಧ ಬಿಹಾರದಲ್ಲಿ ದಾಖಲಾಗಲಿದೆ ಎಫ್ಐಆರ್! title=
File Image

ಮುಜಾಫರ್ ಪುರ: ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಮತ್ತು ಕಾಂಗ್ರೆಸ್ ನಾಯಕ ಅಲ್ಪೇಶ್ ಠಾಕೂರ್ ವಿರುದ್ಧ ಎಫ್ಐಆರ್ ದಾಖಲಿಸಲು ಬಿಹಾರ ನ್ಯಾಯಾಲಯ ಆದೇಶಿಸಿದೆ.

ಮುಜಫರ್ ಪುರ್ ನ್ಯಾಯಾಲಯ, ನ್ಯಾಯಾಂಗ ಮ್ಯಾಜಿಸ್ಟ್ರೇಟ್ (ವೆಸ್ಟ್) ಸಬ್ಬಾ ಆಲಂ, ಅರ್ಜಿದಾರರಾದ ಸಾಮಾಜಿಕ ಕಾರ್ಯಕರ್ತ ತಮನ್ನಾ ಹಶ್ಮಿ ಅವರ ಅರ್ಜಿ ವಿಚಾರಣೆ ಬಳಿಕ, ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಮತ್ತು ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ವಿರುದ್ಧ ಎಫ್ಐಆರ್ ದಾಖಲಿಸಲು ಕಿಂಟಿ ಪೊಲೀಸ್ ಠಾಣೆಯ ಉಸ್ತುವಾರಿಗೆ ಆದೇಶಿಸಿದರು.

ಗುಜರಾತ್ ಮುಖ್ಯಮಂತ್ರಿ ವಿಜಯ್ ರುಪಾನಿ ಮತ್ತು ಕಾಂಗ್ರೆಸ್ ಶಾಸಕ ಅಲ್ಪೇಶ್ ಠಾಕೂರ್ ವಿರುದ್ಧ ಎಫ್ಐಆರ್ ದಾಖಲಿಸಲು ನ್ಯಾಯಾಲಯ ಪೊಲೀಸ್ ಠಾಣೆಗೆ ಆದೇಶಿಸಿದ್ದು, ತನಿಖೆ ಮಾಡುವಂತೆ ಸೂಚಿಸಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 9 ರಂದು ಬಿಹಾರಿಗಳನ್ನು ಗುಜರಾತ್ನಿಂದ ಬಲವಂತವಾಗಿ ಹೊರಹಾಕಿ ವಿಜಯ್ ರುಪಾನಿ ಮತ್ತು ಅಲ್ಪೇಶ್ ಠಾಕೋರ್ ಬಿಹಾರಿಗಳನ್ನು ಅವಮಾನ ಮಾಡಿದ್ದಾರೆ ಎಂಬ ಆರೋಪಿಸಿ ಹಶ್ಮಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಇದು ದೇಶ ಒಡೆಯುವ ಕ್ರಿಯೆ ಎಂದು ವಿಮೋಚನಾ ಪತ್ರದಲ್ಲಿ ಹೇಳಲಾಗಿದೆ.  ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153, 295, 504 ಅನ್ನು ಈ ದಾಖಲೆಯಲ್ಲಿ ವಿಧಿಸಲಾಗಿದೆ.

ಗಮನಾರ್ಹವಾಗಿ, ಗುಜರಾತ್ನಲ್ಲಿ ಹುಡುಗಿಯನ್ನು ಅತ್ಯಾಚಾರ ಮಾಡಿದ ಘಟನೆಯ ನಂತರ, ಸ್ಥಳೀಯರು ಉತ್ತರ ಭಾರತೀಯರನ್ನು ಗುರಿಯಾಗಿಸಲು ಪ್ರಾರಂಭಿಸಿದರು. ಬಿಹಾರದ ಜನರು ತಮ್ಮ ರಕ್ಷಣೆಗಾಗಿ ಅಲ್ಲಿಂದ ಪಲಾಯನ ಆರಂಭಿಸಿದರು.  ಈ ಘಟನೆಯ ನಂತರ ಬಿಹಾರಿಗಳು ಮಾತ್ರವಲ್ಲದೆ ಯುಪಿ ಮತ್ತು ಜಾರ್ಖಂಡ್ ಜನರು ಕೂಡ ಪಲಾಯನ ಮಾಡಿದ್ದರು.

ಗುಜರಾತ್ನಲ್ಲಿ, ಉತ್ತರ ಭಾರತೀಯರು ರಾಜ್ಯದಿಂದ ಪಲಾಯನ ಮಾಡುವಂತೆ ಬೆದರಿಕೆ ಹಾಕುತ್ತಿದ್ದಾರೆ. ರಾಜ್ಯ ಬಿಡದಿದವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂಬ ಸುದ್ದಿ ಹರಡಿತ್ತು.

Trending News