"ಕಾಂಡೋಮ್ ಗಳನ್ನು ಹೆಚ್ಚು ಬಳಸುತ್ತಿರುವುದು ಮುಸ್ಲಿಮರೇ"

ಹೈದರಾಬಾದ್‌ನಲ್ಲಿ ನಡೆದ ಸಭೆಯ ವೀಡಿಯೊವನ್ನು ಟ್ವೀಟ್ ಮಾಡಿರುವ ಅವರು, "ಮುಸ್ಲಿಮರ ಜನಸಂಖ್ಯೆಯು ಹೆಚ್ಚಾಗುತ್ತಿಲ್ಲ, ಬದಲಿಗೆ ಅದು ಕ್ಷೀಣಿಸುತ್ತಿದೆ. ಮುಸ್ಲಿಮರಲ್ಲಿ ಮಕ್ಕಳ ನಡುವಿನ ಅಂತರವೂ ಹೆಚ್ಚುತ್ತಿದೆ. ಕಾಂಡೋಮ್ ಹೆಚ್ಚು ಯಾರು ಬಳಸುತ್ತಿದ್ದಾರೆ? ಅದು ನಾವು” ಎಂದು ಹೇಳಿದರು.

Written by - Bhavishya Shetty | Last Updated : Oct 9, 2022, 03:42 PM IST
    • ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಿರುವುದು ಮುಸ್ಲಿಮರೇ
    • ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಹೇಳಿಕೆ
    • ಜನಸಂಖ್ಯೆ ನಿಯಂತ್ರಣದ ಕುರಿತು ಆರೆಸ್ಸೆಸ್ ಮುಖ್ಯಸ್ಥ ನೀಡಿದ ಹೇಳಿಕೆಗೆ ಪ್ರತ್ಯುತ್ತರ
"ಕಾಂಡೋಮ್ ಗಳನ್ನು ಹೆಚ್ಚು ಬಳಸುತ್ತಿರುವುದು ಮುಸ್ಲಿಮರೇ"  title=
Asaduddin Owaisi

ಹೈದರಾಬಾದ್: ದೇಶದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿಲ್ಲ. ಕಾಂಡೋಮ್‌ಗಳನ್ನು ಹೆಚ್ಚು ಬಳಸುತ್ತಿರುವುದು ಮುಸ್ಲಿಮರೇ ಎಂದು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಜನಸಂಖ್ಯೆ ನಿಯಂತ್ರಣದ ಕುರಿತು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಇತ್ತೀಚಿನ ಹೇಳಿಕೆಗೆ ಪ್ರತಿಯಾಗಿ ಹೇಳಿದ್ದಾರೆ.

ಹೈದರಾಬಾದ್‌ನಲ್ಲಿ ನಡೆದ ಸಭೆಯ ವೀಡಿಯೊವನ್ನು ಟ್ವೀಟ್ ಮಾಡಿರುವ ಅವರು, "ಮುಸ್ಲಿಮರ ಜನಸಂಖ್ಯೆಯು ಹೆಚ್ಚಾಗುತ್ತಿಲ್ಲ, ಬದಲಿಗೆ ಅದು ಕ್ಷೀಣಿಸುತ್ತಿದೆ. ಮುಸ್ಲಿಮರಲ್ಲಿ ಮಕ್ಕಳ ನಡುವಿನ ಅಂತರವೂ ಹೆಚ್ಚುತ್ತಿದೆ. ಕಾಂಡೋಮ್ ಹೆಚ್ಚು ಯಾರು ಬಳಸುತ್ತಿದ್ದಾರೆ? ಅದು ನಾವು” ಎಂದು ಹೇಳಿದರು.

 

 

ಇದನ್ನೂ ಓದಿ: Astrology : ಈ ಜನರು ನಾಯಿ ಸಾಕುವುದು ಶುಭವಲ್ಲ, ಜೀವನದಲ್ಲಿ ತುಂಬಾ ತೊಂದರೆ ಎದುರಿಸಬೇಕಾಗುತ್ತೆ!

ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಆರ್‌ಎಸ್‌ಎಸ್‌ನ ಮುಖ್ಯಸ್ಥ ಮೋಹನ್ ಭಾಗವತ್ ಅವರು ಭಾರತಕ್ಕೆ ಜನಸಂಖ್ಯೆ ನಿಯಂತ್ರಣಕ್ಕಾಗಿ "ಎಲ್ಲರಿಗೂ ಸಮಾನವಾಗಿ ಅನ್ವಯಿಸುವ" ನೀತಿಯ ಅಗತ್ಯವಿದೆ ಎಂದು ಇತ್ತೀಚೆಗೆ ಹೇಳಿಕೆಯೊಂದನ್ನು ನೀಡಿದ್ದರು.

"ಜನಸಂಖ್ಯೆ ನಿಯಂತ್ರಣದ ಜೊತೆಗೆ, ಧಾರ್ಮಿಕ ಆಧಾರದ ಮೇಲೆ ಸಮತೋಲನವನ್ನು ನಿರ್ಲಕ್ಷಿಸಲಾಗುವುದಿಲ್ಲ" ಎಂದು ಅವರು ಒತ್ತಿ ಹೇಳಿದರು.

ಇನ್ನು ಓವೈಸಿ ಮಾತನಾಡುವ ಸಂದರ್ಭದಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ - 5 ಅನ್ನು ಉಲ್ಲೇಖಿಸಿದ್ದಾರೆ. ಜೊತೆಗೆ ಮುಸ್ಲಿಮರ ಒಟ್ಟು ಫಲವತ್ತತೆ ದರ (ಟಿಎಫ್ಆರ್) ಅತ್ಯಧಿಕ ಕುಸಿತವನ್ನು ಕಂಡಿದೆ ಎಂದು ಹೇಳಿದರು.

ಕಾಣೆಯಾದ ಹಿಂದೂ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಿ ಎಂದು ಎಐಎಂಐಎಂ ನಾಯಕ ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಸವಾಲು ಹಾಕಿದರು. "ನಾನು ಮೋಹನ್ ಭಾಗವತ್ ಅವರನ್ನು ಕೇಳಲು ಬಯಸುತ್ತೇನೆ. 2000 ರಿಂದ 2019 ರವರೆಗೆ ನಮ್ಮ ಹಿಂದೂ ಸಹೋದರಿಯರ ಲಕ್ಷಾಂತರ ಹೆಣ್ಣು ಮಕ್ಕಳು ಕಾಣೆಯಾಗಿದ್ದಾರೆ. ಇದು ಸರ್ಕಾರದ ಅಂಕಿಅಂಶವಾಗಿದೆ. ಆದರೆ ಅವರು ಅದರ ಬಗ್ಗೆ ಮಾತನಾಡುವುದಿಲ್ಲ" ಎಂದು ಅವರು ಹೇಳಿದರು.

"ನೆನಪಿಡಿ, ಹಿಂದೂ ರಾಷ್ಟ್ರವು ಭಾರತೀಯ ರಾಷ್ಟ್ರೀಯತೆಗೆ ವಿರುದ್ಧವಾಗಿದೆ. ಅದು ಭಾರತದ ವಿರುದ್ಧವಾಗಿದೆ" ಎಂದು ಓವೈಸಿ ಹೇಳಿದರು.

ಇದನ್ನೂ ಓದಿ: Viral News: ಕೇವಲ 6 KM ಸಂಚಾರಕ್ಕೆ 32 ಲಕ್ಷ ರೂ. ಶುಲ್ಕ ವಿಧಿಸಿದ ಊಬರ್!

ಇದೇ ಸಂದರ್ಭದಲ್ಲಿ ಎಐಎಂಐಎಂ ನಾಯಕ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇತ್ತೀಚಿನ ಹೇಳಿಕೆಯ ಮೇಲೆ ವಾಗ್ದಾಳಿ ನಡೆಸಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News