ಜಾಹಿರಾತು ಪ್ರಚಾರಕ್ಕಾಗಿ 4,343 ಕೋಟಿ ರೂ. ಖರ್ಚು ಮಾಡಿದ ಮೋದಿ ಸರ್ಕಾರ : ಮಾಹಿತಿ ಹಕ್ಕು ವರದಿ

    

Last Updated : Jun 29, 2018, 02:54 PM IST
ಜಾಹಿರಾತು ಪ್ರಚಾರಕ್ಕಾಗಿ 4,343 ಕೋಟಿ ರೂ. ಖರ್ಚು ಮಾಡಿದ ಮೋದಿ ಸರ್ಕಾರ : ಮಾಹಿತಿ ಹಕ್ಕು ವರದಿ title=

ನವದೆಹಲಿ: ನರೇಂದ್ರ ಮೋದಿ ಸರಕಾರವು 2014 ರ ಮೇ ತಿಂಗಳಲ್ಲಿ ಅಧಿಕಾರಕ್ಕೆ ಬಂದ ನಂತರ  ಒಟ್ಟು 4,343 ಕೋಟಿ ರೂಪಾಯಿಗಳನ್ನು ಪ್ರಚಾರಕ್ಕೆ ಖರ್ಚು ಮಾಡಿದೆ ಎಂದು ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯಲ್ಲಿ ಉತ್ತರಿಸಿದೆ. 

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಮತ್ತು ಹೊರಾಂಗಣ ಪ್ರಚಾರದಲ್ಲಿ ಜಾಹೀರಾತುಗಳ ಮೇಲೆ ಸರ್ಕಾರ ಪ್ರಚಾರಕ್ಕಾಗಿ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರ್ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಎನ್ನುವವರು ಸಲ್ಲಿಸಿದ ಅರ್ಜಿಗೆ ಕೇಂದ್ರ ಸರ್ಕಾರವು ಪ್ರತಿಕ್ರಿಯೆ ನೀಡಿದೆ.

ಮಾಧ್ಯಮ ವೇದಿಕೆಗಳಲ್ಲಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲು 4,343.26 ಕೋಟಿ ರೂ. ಖರ್ಚು ಮಾಡಿದೆ ಎಂದು ಬ್ಯುರೊ ಆಫ್ ಔಟ್ರೀಚ್ ಸಂವಹನ ಸಚಿವಾಲಯ ತಿಳಿಸಿದೆ. ಮುದ್ರಣ ಮಾಧ್ಯಮದಲ್ಲಿ (ಜೂನ್ 1, 2014 ರಿಂದ ಡಿಸೆಂಬರ್ 7, 2017 ರವರೆಗೆ) ಮತ್ತು ವಿದ್ಯುನ್ಮಾನ ಮಾಧ್ಯಮದಲ್ಲಿ ರೂ. 2079.87 ಕೋಟಿ (ಜೂನ್ 1, 2014 ರಿಂದ ಮಾರ್ಚ್ 31, 2018 ವರೆಗೆ) 1732.15 ಕೋಟಿ ರೂ. 531.24 ಕೋಟಿ ರೂ. ಮೊತ್ತವನ್ನು ಹೊರಾಂಗಣ ಪ್ರಚಾರಕ್ಕಾಗಿ (ಜೂನ್ 2014 ರಿಂದ ಜನವರಿ 2018 ರವರೆಗೂ) ಖರ್ಚು ಮಾಡಲಾಗಿದೆ ಎಂದು  ತಿಳಿಸಿದೆ.

ಜೂನ್ 2014 ರಿಂದ ಪ್ರಚಾರದ ಮೇಲಿನ ಖರ್ಚು ವಿವರಗಳನ್ನು ಒದಗಿಸಿರುವ ಹಣಕಾಸು ಸಲಹೆಗಾರರಾದ ತಪನ್ ಸೂತ್ರಧರ್ ಅವರು ಪತ್ರಿಕೆಗಳು, ನಿಯತಕಾಲಿಕಗಳು, ವಿದ್ಯುನ್ಮಾನ ಮಾಧ್ಯಮಗಳು ಟಿವಿ, ಇಂಟರ್ನೆಟ್, ರೇಡಿಯೋ, ಡಿಜಿಟಲ್ ಸಿನಿಮಾ, ಎಸ್ಎಂಎಸ್ ಇತ್ಯಾದಿಗಳನ್ನು ಒಳಗೊಂಡಿದೆ. ಹೊರಾಂಗಣ ಪ್ರಚಾರದಲ್ಲಿ ಪೋಸ್ಟರ್ಗಳು, ಬ್ಯಾನರ್ಗಳು, ಡಿಜಿಟಲ್ ಪ್ಯಾನಲ್ಗಳು, ಸಂಗ್ರಹಣೆಗಳು, ರೈಲ್ವೆ ಟಿಕೆಟ್ ಮುಂತಾದವುಗಳು "ಎಂದು ಅವರು ಉತ್ತರಿಸಿದ್ದಾರೆ.

Trending News