ರೈತರ ವಿಶ್ವಾಸ ಮತದಲ್ಲಿ ಪ್ರಧಾನಿ ಮೋದಿ ಫೇಲ್ !

   

Last Updated : Jul 21, 2018, 07:08 PM IST
ರೈತರ ವಿಶ್ವಾಸ ಮತದಲ್ಲಿ ಪ್ರಧಾನಿ ಮೋದಿ ಫೇಲ್ !  title=
Photo courtesy:Facebook

ನವದೆಹಲಿ: ಶುಕ್ರವಾರಂದು ಪಾರ್ಲಿಮೆಂಟ್ ನಲ್ಲಿ ಪ್ರತಿಪಕ್ಷಗಳು ಮೋದಿ ಸರ್ಕಾರದ ವಿರುದ್ದ ಅವಿಶ್ವಾಸ ಮತ ಗೊತ್ತುವಳಿಯನ್ನು ಮಂಡಿಸುತ್ತಿದ್ದರೆ. ಇನ್ನೊಂದೆಡೆಗೆ ಅಖಿಲ ಭಾರತ ಕಿಸಾನ್ ಸಂಘರ್ಷ ಸಹಕಾರಿ ಸಮಿತಿಯ (AIKSCC) ನೇತೃತ್ವದಲ್ಲಿ ಎಲ್ಲ ರೈತ ಸಂಘಟನೆಗಳು ಸೇರಿ ಕಿಸಾನ್ ಅವಿಶ್ವಾಸ್ ಪ್ರಸ್ತಾವ ಸಭೆಯಲ್ಲಿ ಸರ್ಕಾರದ ವಿರುದ್ದ ಗೊತ್ತುವಳಿಯನ್ನು ಮಂಡಿಸಿದರು.

ಎಲ್ಲ ಸಂಘಟನೆಗಳು ಅವಿಶ್ವಾಸ ಮತ ಗೊತ್ತುವಳಿಯನ್ನು ಸರ್ಕಾರದ ವಿರುದ್ದ ಮಂಡಿಸಿದರು. ಈ ಸಂದರ್ಭದಲ್ಲಿ  ಮಾತನಾಡಿದ ಸ್ವರಾಜ್ ಇಂಡಿಯಾ ಪಕ್ಷದ ನಾಯಕ " ಈ ಸರ್ಕಾರ  ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ರೈತರಿಗೆ ನೀಡಿದ ಭರವಸೆಗಳನ್ನು ಇಡೆರಿಸುವಲ್ಲಿ ವಿಫಲವಾಗಿದೆ. ಇನ್ನು ಐತಿಹಾಸಿಕ ಎಂದು ಹೇಳುವ ಎಂಎಸ್ಪಿ ಬೆಲೆ ಏರಿಕೆ ಕೇವಲ ವಂಚನೆಯಾಗಿದೆ. ಈ ಹಿಂದಿನ ಮನಮೋಹನ್ ಸಿಂಗ್ ಮತ್ತು  ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕ ಹೆಚ್ಚಳವನ್ನು ನೀಡಿತ್ತು ಎಂದು ಸರ್ಕಾರದ ವಿರುದ್ದ ಕಿಡಿ ಕಾರಿದರು.

ರೈತರ ಅವಿಶ್ವಾಸ ಗೊತ್ತುವಳಿಗೆ ಮೇದಾ ಪಾಟ್ಕರ್, ರಾಷ್ಟ್ರೀಯ ಕಿಸಾನ್ ಮಜದೂರ್  ಪಾರ್ಟಿಯ ವಿ.ಎಂ.ಸಿಂಗ್, ಸ್ವಾಭಿಮಾನಿ ಶೆತ್ಕಾರಿ ಸಂಘಟನೆಯ ಸಂಸದ ರಾಜು ಶೆಟ್ಟಿ, ಜೆಡಿಯುನ  ಶರದ್ ಯಾದವ್  ಸಾಕ್ಷಿಯಾದರು.ಈ ಹೋರಾಟವು ಪಾರ್ಲಿಮೆಂಟ್ ದಿಂದ ಕೇವಲ ಒಂದು ಕಿಲೋ ಮೀಟರ್ ದೂರದಲ್ಲಿ ನಡೆಯಿತು.

Trending News