ಬಜೆಟ್ 2019: ರಾಷ್ಟ್ರೀಯ ಸಾರಿಗೆ ಕಾರ್ಡ್ ಘೋಷಿಸಿದ ಮೋದಿ ಸರ್ಕಾರ!

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ರಾಷ್ಟ್ರೀಯ ಸಾರಿಗೆ ಕಾರ್ಡ್ (ಎನ್‌ಟಿಸಿ) ಘೋಷಿಸಿದರು. ರೈಲು ಮತ್ತು ಬಸ್‌ನಲ್ಲಿ ಪ್ರಯಾಣಿಸಲು ಈ ಕಾರ್ಡ್ ಅನ್ನು ಬಳಸಲಾಗುತ್ತದೆ.

Last Updated : Jul 5, 2019, 12:45 PM IST
ಬಜೆಟ್ 2019: ರಾಷ್ಟ್ರೀಯ ಸಾರಿಗೆ ಕಾರ್ಡ್ ಘೋಷಿಸಿದ ಮೋದಿ ಸರ್ಕಾರ! title=

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ರಾಷ್ಟ್ರೀಯ ಸಾರಿಗೆ ಕಾರ್ಡ್ (ಎನ್‌ಟಿಸಿ) ಘೋಷಿಸಿದರು. ರೈಲು ಮತ್ತು ಬಸ್‌ನಲ್ಲಿ ಪ್ರಯಾಣಿಸಲು ಈ ಕಾರ್ಡ್ ಅನ್ನು ಬಳಸಲಾಗುತ್ತದೆ. ರೂಪೇಯ್(RuPay) ಕಾರ್ಡ್ ಸಹಾಯದಿಂದ ಎನ್‌ಟಿಸಿ(National Transport Card) ಚಾಲನೆಯಾಗಲಿದೆ. ಈ ಕಾರ್ಡ್ ಮೂಲಕ, ಬಸ್ ಟಿಕೆಟ್, ಪಾರ್ಕಿಂಗ್ ವೆಚ್ಚ, ರೈಲು ಟಿಕೆಟ್ ಎಲ್ಲವನ್ನೂ ಏಕಕಾಲದಲ್ಲಿ ಪಾವತಿಸಬಹುದು. ಅದೇ ಸಮಯದಲ್ಲಿ, ಎಂಆರ್‌ಒ ಸೂತ್ರವನ್ನು ಅಳವಡಿಸಿಕೊಳ್ಳಲು ಸರ್ಕಾರ ತಿಳಿಸಿದೆ. 

ರೈಲ್ವೆ ಅಭಿವೃದ್ಧಿ ಮತ್ತು ಪ್ರಯಾಣಿಕರ ಸೌಲಭ್ಯಗಳಿಗಾಗಿ ಪಿಪಿಪಿ ಮಾದರಿಯನ್ನು ಜಾರಿಗೆ ತರಲಾಗುವುದು ಎಂದು ಈ ಹಿಂದೆ ಹಣಕಾಸು ಸಚಿವರು ತಿಳಿಸಿದ್ದರು. ಈ ಹಿನ್ನಲೆಯಲ್ಲಿ ರೈಲು ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯವಿರುವ 50 ಲಕ್ಷ ಕೋಟಿ ರೂ.ಗಳನ್ನು ಪಿಪಿಪಿ(ಸಾರ್ವಜನಿಕ, ಖಾಸಗಿ ಸಹಭಾಗಿತ್ವ) ಅಡಿಯಲ್ಲಿ ಹೊಂದಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ವಿತ್ತ ಸಚಿವರು ತಿಳಿಸಿದರು.

ಇದಕ್ಕೂ ಮುನ್ನ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್ ಭಾಷಣವನ್ನು ಪ್ರಾರಂಭಿಸಿದ ಹಣಕಾಸು ಸಚಿವರು ಮೋದಿ ಸರ್ಕಾರದ ಎರಡನೇ ಅವಧಿಯ ಮೊದಲ ಬಜೆಟ್ ಮತ್ತು ಅವರ ಮೊದಲ ಬಜೆಟ್ ಭಾಷಣದಲ್ಲಿ  'ಕಾರ್ಯ ಪುರುಷ ಕಾರ್ಯೇನ ಲಕ್ಷಣಂ' ಎಂಬ ಚಾಣಕ್ಯ ನೀತಿಯನ್ನು ಪಠಿಸಿದರು. ಅಲ್ಲದೆ ಉರ್ದು ಭಾಷೆಯ ಸಾಲೊಂದನ್ನು ಉಲ್ಲೇಖಿಸಿದರು. ದೇಶದ ಜನ ಮತ್ತೊಮ್ಮೆ ಎನ್‌ಡಿಎ ಸರ್ಕಾರವನ್ನು ಆಯ್ಕೆ ಮಾಡುವ ಮೂಲಕ ನವ ಭಾರತ(ನ್ಯೂ ಇಂಡಿಯಾ) ನಿರ್ಮಾಣಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಿದರು. 
 

Trending News