ನವದೆಹಲಿ: ಕರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆ ಪರಿಹಾರ ಸುದ್ದಿ ಹೊರಬಿದ್ದಿದೆ. ಸುದ್ದಿ ಸಂಸ್ಥೆ ರಾಯಿಟರ್ಸ್ ಪ್ರಕಾರ ಕರೋನಾ ಲಸಿಕೆಯ ಸಂಪೂರ್ಣ ವೆಚ್ಚ ಭರಿಸಲು ಮೋದಿ ಸರ್ಕಾರ (Modi government) ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಬಗ್ಗೆ ಸಾಮಾನ್ಯ ಬಜೆಟ್ನಲ್ಲಿ ಘೋಷಿಸುವ ನಿರೀಕ್ಷೆಯಿದ್ದು ವ್ಯಾಕ್ಸಿನೇಷನ್ ಫೆಬ್ರವರಿ ಅಂತ್ಯದಿಂದ ಲಭ್ಯವಾಗಬಹುದು ಎಂದು ನಂಬಲಾಗಿದೆ.
ಕೊರೊನಾವೈರಸ್ (Coronavirus) ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಸರ್ಕಾರವು ಕಾಳಜಿ ವಹಿಸುತ್ತಿದೆ ಮತ್ತು ಅದನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಈ ಅನುಕ್ರಮದಲ್ಲಿ ಕೇಂದ್ರ ಸರ್ಕಾರ ವ್ಯಾಕ್ಸಿನೇಷನ್ನ ಸಂಪೂರ್ಣ ವೆಚ್ಚವನ್ನು ಭರಿಸಲು ಯೋಜನೆಯನ್ನು ಸಿದ್ಧಪಡಿಸುತ್ತಿದೆ. ಈ ನಿಟ್ಟಿನಲ್ಲಿ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಅದನ್ನು ಬಜೆಟ್ನಲ್ಲಿ ಘೋಷಿಸಬಹುದು ಎಂದು ಹೇಳಲಾಗುತ್ತಿದೆ.
ಯಾವಾಗ ಬೇಕಾದರೂ ಕೊರೊನಾ ಲಸಿಕೆ ಬರಬಹುದು: ಪ್ರಧಾನ ಮಂತ್ರಿ ನರೇಂದ್ರ ಮೋದಿ
ಸಿದ್ಧವಾಗಿದೆ ಪೂರ್ಣ ಯೋಜನೆ :-
ಮೂಲಗಳ ಪ್ರಕಾರ ಈ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣ ಯೋಜನೆಯನ್ನು ಸಿದ್ಧಪಡಿಸಿದೆ. ಅಂದಾಜಿನ ಪ್ರಕಾರ, ದೇಶದಲ್ಲಿ ಓರ್ವ ಪ್ರಜೆಗೆ ಕರೋನಾ ಲಸಿಕೆ (Corona Vaccine) ನೀಡಲು $ 6-7, ಅಂದರೆ 500 ರೂಪಾಯಿಗಳಿಗಿಂತ ಹೆಚ್ಚು ವೆಚ್ಚವಾಗಲಿದೆ. ಹಾಗಾಗಿಯೇ 130 ಕೋಟಿ ಜನರಿಗೆ ಕರೋನಾ ಲಸಿಕೆ ನೀಡಲು ಸರ್ಕಾರ 500 ಬಿಲಿಯನ್ ರೂಪಾಯಿಗಳ ಬಜೆಟ್ ನಿಗದಿಪಡಿಸಲು ಮುಂದಾಗಿದೆ.
ನಿಮ್ಮ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಈ ರೀತಿ ಪಡೆಯಿರಿ ಸಹಾಯ
ದೇಶದ ಪ್ರತಿ ನಾಗರೀಕನಿಗೂ ಲಸಿಕೆ ಲಭ್ಯ:
ಕರೋನಾ ಲಸಿಕೆ ಬಂದ ಬಳಿಕ ದೇಶದ ಪ್ರತಿಯೊಬ್ಬ ನಾಗರಿಕರಿಗೂ ಲಸಿಕೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸ್ಪಷ್ಟಪಡಿಸಿದ್ದಾರೆ. ಹೆಚ್ಚುತ್ತಿರುವ ಕರೋನ ಪ್ರಕರಣಗಳಿಗೆ ಸಂಬಂಧಿಸಿದಂತೆ ಪಿಎಂ ಮೋದಿ ಅವರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿ ಪರಿಸ್ಥಿತಿಯ ಬಗ್ಗೆ ಸಮಾಲೋಚನೆ ನಡೆಸಿದರು. ಅದೇ ಸಮಯದಲ್ಲಿ ಕರೋನಾ ವಿರುದ್ಧದ ಹೋರಾಟದಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ರಾಜ್ಯಗಳಿಗೆ ಸಲಹೆ ನೀಡಿದರು. ಮುಖ್ಯಮಂತ್ರಿಗಳೊಂದಿಗಿನ ಚರ್ಚೆಯ ಸಮಯದಲ್ಲಿ ಪ್ರಧಾನಮಂತ್ರಿ ಆರ್ಟಿ-ಪಿಸಿಆರ್ ಪರೀಕ್ಷೆಯ ಅನುಪಾತವನ್ನು ಹೆಚ್ಚಿಸಲು ಸಲಹೆ ನೀಡಿದರಲ್ಲದೆ, ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್-19 (Covid 19) ರೋಗಿಗಳನ್ನು ಸಹ ಉತ್ತಮವಾಗಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ ಎಂದು ಹೇಳಿದರು.
ಮೋದಿ ಸರ್ಕಾರದ ಭರ್ಜರಿ ತಯಾರಿ: ನಿಮ್ಮೂರ ಅಂಗನವಾಡಿ, ಶಾಲೆ, ಪಂಚಾಯ್ತಿಯಲ್ಲೂ ಸಿಗಲಿದೆ ಕರೋನಾ ಲಸಿಕೆ