ನವದೆಹಲಿ: ನೂತನ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಮುಂದುವರಿದಿರುವ ತೊಡಕುಗಳನ್ನು ವಿವರಿಸಲು ಹಣಕಾಸು ಸಚಿವಾಲಯವು ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪರೇಖ್ ಗೆ ಸಮನ್ಸ್ ಜಾರಿ ಮಾಡಿದೆ.ಜೂನ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಪಾರೇಖ್ ಮತ್ತು ಹಿರಿಯ ಕಾರ್ಯನಿರ್ವಾಹಕ ಪ್ರವೀಣ್ ರಾವ್ ಅವರಿಗೆ ಹೆಚ್ಚು ಮಾನವೀಯ ಮತ್ತು ಬಳಕೆದಾರ ಸ್ನೇಹಿ ಪೋರ್ಟಲ್ ಮಾಡಲು ಕೇಳಲಾಗಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಇದನ್ನೂ ಓದಿ : SBI Alert : ಡೆಬಿಟ್ ಕಾರ್ಡ್ ಗ್ರಾಹಕರೇ ಈ ವಿಷಯಗಳನ್ನು ತಪ್ಪದೇ ತಿಳಿಯಿರಿ
ಇನ್ಫೋಸಿಸ್ (Infosys) ಹೊಸ ಪೋರ್ಟಲ್ ಅನ್ನು ವಿನ್ಯಾಸಗೊಳಿಸಿದೆ, ಇದು ಜೂನ್ 7 ರಂದು ಸೇವೆಯನ್ನು ಆರಂಭಿಸಿದ ನಂತರ ಹಲವಾರು ತಾಂತ್ರಿಕ ಸಮಸ್ಯೆಗಳನ್ನು ಹೊಂದಿರುವುದನ್ನು ಕಂಡುಕೊಂಡಿದೆ,ಈ ವಿಚಾರವಾಗಿ ಬಳಕೆದಾರರು ಆಗಾಗ್ಗೆ ಸೈಟ್ನ ಸ್ಕ್ರೀನ್ಶಾಟ್ಗಳನ್ನು ಟ್ವೀಟ್ ಮಾಡುವುದಲ್ಲದೆ ಹಣಕಾಸು ಸಚಿವರನ್ನು ಟ್ಯಾಗ್ ಮಾಡಿದ್ದಾರೆ.
Ministry of Finance has summoned Sh Salil Parekh,MD&CEO @Infosys on 23/08/2021 to explain to hon'ble FM as to why even after 2.5 months since launch of new e-filing portal, glitches in the portal have not been resolved. In fact,since 21/08/2021 the portal itself is not available.
— Income Tax India (@IncomeTaxIndia) August 22, 2021
ಸಮಸ್ಯೆಯ ಪ್ರದೇಶಗಳು ಪ್ರೊಫೈಲ್ ಅಪ್‌ಡೇಟ್ ಅಥವಾ ಪಾಸ್‌ವರ್ಡ್‌ಗಳ ಬದಲಾವಣೆಯಂತಹ ಸರಳ ಕಾರ್ಯಗಳನ್ನು ಒಳಗೊಂಡಿವೆ.ಅನೇಕ ಬಳಕೆದಾರರು ಪೋರ್ಟಲ್ ಅತ್ಯಂತ ನಿಧಾನವಾಗಿದೆ ಮತ್ತು ಲಾಗಿನ್ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ಇದನ್ನೂ ಓದಿ : LIC Policy : ನಿತ್ಯ 199 ರೂ. ಹೂಡಿಕೆ ಮಾಡಿ 94 ಲಕ್ಷ ರೂಪಾಯಿ ಪಡೆಯಿರಿ !
ಇಲ್ಲಿಯವರೆಗೆ, ಇನ್ಫೋಸಿಸ್ ನ ಕಾರ್ಯನಿರ್ವಾಹಕೇತರ ಅಧ್ಯಕ್ಷ ನಂದನ್ ನಿಲೇಕಣಿ ಅವರು ವಾರಕ್ಕೊಮ್ಮೆ ಶ್ರೀಮತಿ ಸೀತಾರಾಮನ್ ಅವರಿಗೆ ವರದಿ ಮಾಡುತ್ತಿದ್ದರು.ತೊಂದರೆಗಳಿಗೆ ವಿಷಾದ ವ್ಯಕ್ತಪಡಿಸಿದ ಶ್ರೀ ನಿಲೇಕಣಿ ಅವರು ಕೆಲವೇ ದಿನಗಳಲ್ಲಿ ಅವುಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.ತೆರಿಗೆ ರಿಟರ್ನ್ಸ್‌ಗಳ ಇ-ಫೈಲಿಂಗ್‌ನಲ್ಲಿ ಸೈಟ್‌ನ ತೊಂದರೆ ಬಳಕೆದಾರರಿಗೆ ಸಮಸ್ಯೆಯನ್ನುಂಟು ಮಾಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ