GST collection: ಆಗಸ್ಟ್ ನಲ್ಲಿ ಸಂಗ್ರಹವಾಗಿದ್ದ ವರಮಾನಕ್ಕೆ ಹೋಲಿಸಿದರೆ ಶೇ.10ರಷ್ಟು(1.47 ಲಕ್ಷ ಕೋಟಿ ರೂ.) ಏರಿಕೆ ಆಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 4ನೇ ಬಾರಿಗೆ GST ಕಲೆಕ್ಷನ್ 1.60 ಲಕ್ಷ ರೂ. ಗಡಿ ದಾಟಿದೆ.
Good News For LIC Agents: ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಉದ್ಯೋಗಿಗಳು ಮತ್ತು ಎಲ್ಐಸಿ ಏಜೆಂಟರುಗಳ ಬಹುಕಾಲದ ಒಂದು ಬೇಡಿಕೆಗೆ ಇಂದು ತೆರೆಬಿದ್ದಂತಾಗಿದೆ. ಹೌದು ದೇಶಾದ್ಯಂತ ಇರುವ ಲಕ್ಷಾಂತರ ಎಲ್ಐಸಿ ಏಜೆಂಟ್ ಹಾಗೂ ನೌಕರರಿಗೆ ಮೋದಿ ಸರ್ಕಾರ ಗೌರಿ ಗಣೇಶ ಹಬ್ಬದ ಬರ್ಜರಿ ಗಿಫ್ಟ್ ನೀಡಿದೆ. .
Tax Collected at Source: ಅಂತರರಾಷ್ಟ್ರೀಯ ಕ್ರೆಡಿಟ್ ಕಾರ್ಡ್ಗಳನ್ನು ಬಳಸುವ ಸಾಗರೋತ್ತರ ವೆಚ್ಚವನ್ನು ಉದಾರೀಕೃತ ರವಾನೆ ಯೋಜನೆ (ಎಲ್ಆರ್ಎಸ್) ಅಡಿಯಲ್ಲಿ ಸೇರಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್- ಪಿಪಿಎಫ್ ಹೂಡಿಕೆದಾರರಿಗೆ ಬಹುಮುಖ್ಯ ಮಾಹಿತಿ ಇದೆ. ಹಣಕಾಸು ಸಚಿವಾಲಯವು ಜುಲೈ-ಸೆಪ್ಟೆಂಬರ್ ತ್ರೈಮಾಸಿಕಕ್ಕೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರವನ್ನು ಪರಿಶೀಲಿಸಲಿದ್ದು, ಈ ಬಾರಿ ಪಿಪಿಎಫ್ನ ಬಡ್ಡಿ ದರ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.
ದೇಶದ ಸುಮಾರು 47.68 ಲಕ್ಷ ಕೇಂದ್ರ ನೌಕರರು ಮತ್ತು 68.62 ಲಕ್ಷ ಪಿಂಚಣಿದಾರರು ಹಣಕಾಸು ಸಚಿವಾಲಯದ ಪ್ರಕಟಣೆಯ ಲಾಭವನ್ನು ಪಡೆಯಲಿದ್ದಾರೆ. ಡಿಎ ಹೆಚ್ಚಳದ ಪ್ರಯೋಜನವನ್ನು ಜನವರಿ 2022 ರಿಂದ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತು.
ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಮುಂದುವರಿದಿರುವ ತೊಡಕುಗಳನ್ನು ವಿವರಿಸಲು ಹಣಕಾಸು ಸಚಿವಾಲಯವು ಇನ್ಫೋಸಿಸ್ ಮುಖ್ಯಸ್ಥ ಸಲೀಲ್ ಪರೇಖ್ ಗೆ ಸಮನ್ಸ್ ಜಾರಿ ಮಾಡಿದೆ.ಜೂನ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
7th Pay Commission: ವಿತ್ತ ಸಚಿವಾಲಯ (Ministry Of Finance) ಹಾಗೂ ಡಿಪಾರ್ಟ್ಮೆಂಟ್ ಆಫ್ ಪರ್ಸನಲ್ ಅಂಡ್ ಟ್ರೇನಿಂಗ್ (Department Of Personnel And Training) ಅಧಿಕಾರಿಗಳೊಂದಿಗಿನ ನ್ಯಾಷನಲ್ ಕೌನ್ಸಿಲ್ ಆಫ್ JCM (National Council Of JCM) ಯ ಸಭೆ ಮುಂದೂಡಲಾಗಿದೆ. DAಗೆ ಸಂಬಂಧಿಸಿದ ಈ ಸಭೆ ಮೇ ತಿಂಗಳ ಕೊನೆಯವಾರದಲ್ಲಿ ನಡೆಯಬೇಕಿತ್ತು. ಆದರೆ, ಈ ಕುರಿತು ಇದುವರೆಗೆ ಯಾವುದೇ ಮಾತುಕತೆ ನಡೆಸಲಾಗಿಲ್ಲ.
ಕೇಂದ್ರ ಸಚಿವಾಲಯಗಳಲ್ಲಿ ಹೊಸ ಹುದ್ದೆಗಳನ್ನು ರಚಿಸುವುದಕ್ಕೆ ಹಣಕಾಸು ಸಚಿವಾಲಯ ತಡೆಯೊಡ್ಡಿದೆ.ಪ್ರಸ್ತುತ ಹಣಕಾಸಿನ ಪರಿಸ್ಥಿತಿ ಮತ್ತು ಸರ್ಕಾರದ ಸಂಪನ್ಮೂಲಗಳ ಮೇಲಿನ ಒತ್ತಡದ ಹಿನ್ನಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಸಚಿವಾಲಯ ಹೇಳಿದೆ.
ಪಿಪಿಎಫ್ ಹೊಸ ನಿಯಮಗಳು: ಈ ಮೊದಲು, ಪಿಪಿಎಫ್ ಖಾತೆದಾರರಿಗೆ ವರ್ಷದಲ್ಲಿ ಕೇವಲ 12 ಬಾರಿ ಹಣವನ್ನು ಹೂಡಿಕೆ ಮಾಡಲು ಅವಕಾಶವಿತ್ತು. ಈಗ, ಪಿಪಿಎಫ್ ಖಾತೆಯಲ್ಲಿನ ಈ ಗರಿಷ್ಠ ಸಂಖ್ಯೆಯ ಹೂಡಿಕೆ ಕ್ಯಾಪ್ ಅನ್ನು ರದ್ದುಪಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.