COVID ಲಸಿಕೆ ಪೂರೈಕೆಯಲ್ಲಿ ಬಾಂಗ್ಲಾದೇಶಕ್ಕೆ ಹೆಚ್ಚಿನ ಆದ್ಯತೆ: ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ

Covid ಲಸಿಕೆ ವಿಷಯಕ್ಕೆ ಬಂದರೆ ಬಾಂಗ್ಲಾದೇಶಕ್ಕೆ ಆದ್ಯತೆ ಸಿಗಲಿದೆ ಎಂದು ಭಾರತ ಮತ್ತೊಮ್ಮೆ ಪುನರುಚ್ಚರಿಸಿದೆ.

Last Updated : Sep 4, 2020, 08:49 AM IST
  • COVID-19 ಲಸಿಕೆಯ ವಿಷಯವನ್ನು ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶಿಂಗ್ಲಾ ಅವರು ಢಾಕಾದೊಂದಿಗೆ ಚರ್ಚಿಸಿದರು.
  • ಢಾಕಾ ಭೇಟಿಯ ಕೆಲವು ದಿನಗಳ ನಂತರ ಬಾಂಗ್ಲಾದೇಶದ ಅತಿದೊಡ್ಡ ಫಾರ್ಮಾ ಕಂಪನಿ ಲಸಿಕೆಗಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿತು.
  • ಭಾರತವು ಪ್ರಸ್ತುತ ವಿಶ್ವದ 60% ಲಸಿಕೆಗಳನ್ನು ಉತ್ಪಾದಿಸುತ್ತದೆ ಮತ್ತು COVID ಸಾಂಕ್ರಾಮಿಕದ ಮಧ್ಯೆ 100ಕ್ಕೂ ಹೆಚ್ಚು ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ಸರಬರಾಜು ಮಾಡಿದೆ.
COVID ಲಸಿಕೆ ಪೂರೈಕೆಯಲ್ಲಿ ಬಾಂಗ್ಲಾದೇಶಕ್ಕೆ ಹೆಚ್ಚಿನ ಆದ್ಯತೆ: ಎಂಇಎ ವಕ್ತಾರ ಅನುರಾಗ್ ಶ್ರೀವಾಸ್ತವ title=

ನವದೆಹಲಿ: Covid ಲಸಿಕೆ ವಿಷಯಕ್ಕೆ ಬಂದರೆ ಬಾಂಗ್ಲಾದೇಶಕ್ಕೆ ಆದ್ಯತೆ ಸಿಗಲಿದೆ ಎಂದು ಭಾರತ ಮತ್ತೊಮ್ಮೆ ಪುನರುಚ್ಚರಿಸಿದೆ. ಕರೋನವೈರಸ್ ಲಸಿಕೆ (Coronavirus Vaccine) ಕುರಿತು ಭಾರತದ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರೀಂಗ್ಲಾ ಅವರ ಢಾಕಾ ಭೇಟಿಯ ಸಂದರ್ಭದಲ್ಲಿ ಚರ್ಚಿಸಲಾಯಿತು.

ನಿಕಟ ನೆರೆಯ ಮತ್ತು ಕಾರ್ಯತಂತ್ರದ ಪಾಲುದಾರರಾಗಿ ಲಸಿಕೆ ಸರಬರಾಜಿನಲ್ಲಿ ಬಾಂಗ್ಲಾದೇಶಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತದೆ ಎಂದು ನಾವು ಭರವಸೆ ನೀಡಿದ್ದೇವೆ. ಎರಡೂ ಕಡೆ ಉದ್ಯಮಗಳು ಸಹ ಈ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳುತ್ತಿರುವುದಕ್ಕೆ ನಾವು ಸಂತೋಷಪಡುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ತಮ್ಮ ಸಾಪ್ತಾಹಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಕೋವಿಡ್-19 (COVID-19) ಲಸಿಕೆಯ ವಿಷಯವನ್ನು ಭಾರತೀಯ ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶಿಂಗ್ಲಾ ಅವರು ಢಾಕಾದೊಂದಿಗೆ ಚರ್ಚಿಸಿದರು.

ಹರ್ಷ್ ವರ್ಧನ್ ಶಿಂಗ್ಲಾ ಅವರ ಢಾಕಾ ಭೇಟಿಯ ಕೆಲವು ದಿನಗಳ ನಂತರ ಬಾಂಗ್ಲಾದೇಶದ ಅತಿದೊಡ್ಡ ಫಾರ್ಮಾ ಕಂಪನಿ ಬೆಕ್ಸಿಮ್ಕೊ ಫಾರ್ಮಾಸ್ಯುಟಿಕಲ್ಸ್ ಲಸಿಕೆಗಾಗಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಲ್ಲಿ ಹೂಡಿಕೆ ಮಾಡುವುದಾಗಿ ಘೋಷಿಸಿತು.

COVID ಲಸಿಕೆಯ "ಲಸಿಕೆ ನಿಯಂತ್ರಕ ಅನುಮೋದನೆಗಳನ್ನು ಪಡೆದ ನಂತರ, ಎಸ್‌ಐಐ ಬಾಂಗ್ಲಾದೇಶವನ್ನು ಮೊದಲ ದೇಶಗಳಲ್ಲಿ ಸೇರಿಸಿಕೊಳ್ಳುತ್ತದೆ" ಎಂದು ಹೇಳಿಕೆ ನೀಡಿದೆ.

ಭಾರತವು ಪ್ರಸ್ತುತ ವಿಶ್ವದ 60% ಲಸಿಕೆಗಳನ್ನು ಉತ್ಪಾದಿಸುತ್ತದೆ ಮತ್ತು COVID ಸಾಂಕ್ರಾಮಿಕದ ಮಧ್ಯೆ 100ಕ್ಕೂ ಹೆಚ್ಚು ದೇಶಗಳಿಗೆ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಪ್ಯಾರೆಸಿಟಮಾಲ್ ಅನ್ನು ಪೂರೈಸಿದೆ.

ಮೂರು Covid ಲಸಿಕೆಗಳು ಪ್ರಸ್ತುತ ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ ಮತ್ತು ನಿಯಂತ್ರಕ ಅನುಮೋದನೆಯ ನಂತರ ಭಾರತವು ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ. ಭಾರತ ಬಾಂಗ್ಲಾದೇಶಕ್ಕೆ ಔಷಧಿಗಳನ್ನು ಕಳುಹಿಸಿದೆ ಮತ್ತು ಸಾಮರ್ಥ್ಯ ವೃದ್ಧಿ ಕೋರ್ಸ್‌ಗಳನ್ನು ಸಹ ನಡೆಸುತ್ತಿದೆ.

Trending News