NSA ಅಜಿತ್ ಧೋವಲ್ ನಿವಾಸಕ್ಕೆ ನುಗ್ಗಲು ಯತ್ನ: ಅಪರಿಚಿತನ ಬಂಧಿಸಿದ ಖಾಕಿಪಡೆ

ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಾಗ ಆತ, ‘ತನ್ನ ದೇಹದೊಳಗೆ ಯಾರೋ ಚಿಪ್ ಅಳವಡಿಸಿದ್ದಾರೆ ಮತ್ತು ರಿಮೋಟ್ ಮೂಲಕ ತನ್ನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದ.

Written by - Zee Kannada News Desk | Last Updated : Feb 16, 2022, 02:39 PM IST
  • ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಲು ಯತ್ನಿಸಿದ್ದಾನೆ
  • ಬಾಡಿಗೆ ಕಾರಿನಲ್ಲಿ ಬಂದಿದ್ದ ವ್ಯಕ್ತಿಯನ್ನು ಬಂಧಿಸಿದ ಭದ್ರತಾ ಸಿಬ್ಬಂದಿ, ಖಾಕಿಪಡೆಯಿಂದ ವಿಚಾರಣೆ
  • ತನ್ನ ದೇಹದಲ್ಲಿ ಚಿಪ್ ಅಳವಡಿಸಿ ರಿಮೋಟ್ ಕಂಟ್ರೋಲ್ ಮೂಲಕ ನಿಯಂತ್ರಿಸುತ್ತಿದ್ದಾರೆಂದಿದ್ದ ವ್ಯಕ್ತಿ
NSA ಅಜಿತ್ ಧೋವಲ್ ನಿವಾಸಕ್ಕೆ ನುಗ್ಗಲು ಯತ್ನ: ಅಪರಿಚಿತನ ಬಂಧಿಸಿದ ಖಾಕಿಪಡೆ  title=
ಅಜಿತ್ ದೋವಲ್ ನಿವಾಸಕ್ಕೆ ಅಪರಿಚಿತ ವ್ಯಕ್ತಿ ನುಗ್ಗಲು ಯತ್ನ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್(NSA Ajit Doval)ಅವರ ನಿವಾಸಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ನುಗ್ಗಲು ಯತ್ನಿಸಿರುವ ಘಟನೆ ನಡೆದಿದೆ. ಬುಧವಾರ ಬೆಳಿಗ್ಗೆ ವ್ಯಕ್ತಿಯೊಬ್ಬ ಕಾರಿನೊಂದಿಗೆ ದೋವಲ್ ಅವರ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದ್ದ. ಆದರೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ಆತನನ್ನು ಸರಿಯಾದ ಸಮಯಕ್ಕೆ ಹಿಡಿದಿದ್ದಾರೆ. ಸದ್ಯ ದೆಹಲಿ ಪೊಲೀಸರ(Delhi Police) ವಿಶೇಷ ದಳದ ತಂಡ ಅಪರಿಚಿತ ವ್ಯಕ್ತಿಯನ್ನು ವಿಚಾರಣೆ ನಡೆಸುತ್ತಿದೆ. ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದು, ಪ್ರಾಥಮಿಕ ತನಿಖೆಯ ಪ್ರಕಾರ ಆತ ಮಾನಸಿಕ ಅಸ್ವಸ್ಥ ಎಂದು ತಿಳಿದು ಬಂದಿದೆ. ಇದರ ಜೊತೆಗೆ ಬಾಡಿಗೆ ಕಾರು ಓಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೇಹದಲ್ಲಿ ಚಿಪ್ ಅಳವಡಿಸಿದ್ದಾರೆಂದು ಹೇಳಿದ್ದ

ಇನ್ನು ಭದ್ರತಾ ಅಧಿಕಾರಿಗಳು ವಶಕ್ಕೆ ಪಡೆದಾಗ ಆತ, ‘ತನ್ನ ದೇಹದೊಳಗೆ ಯಾರೋ ಚಿಪ್ ಅಳವಡಿಸಿದ್ದಾರೆ ಮತ್ತು ರಿಮೋಟ್ ಮೂಲಕ ತನ್ನನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದ. ಆದರೆ ತನಿಖೆಯ ಸಮಯದಲ್ಲಿ ಆತನ ದೇಹದಲ್ಲಿ ಯಾವುದೇ ರೀತಿಯ ಚಿಪ್ ಪತ್ತೆಯಾಗಿಲ್ಲ. ಬಂಧಿತ ವ್ಯಕ್ತಿ ಕರ್ನಾಟಕದ ಬೆಂಗಳೂರು ನಿವಾಸಿ. ಭಯೋತ್ಪಾದನಾ ನಿಗ್ರಹ ದಳ, ದೆಹಲಿ ಪೊಲೀಸರ ವಿಶೇಷ ಘಟಕ ಆ ವ್ಯಕ್ತಿಯನ್ನು ವಿಚಾರಣೆ(Investigation) ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Bappi Lahiri Dies: ಹಿರಿಯ ಸಂಗೀತ ಸಂಯೋಜಕ ಬಪ್ಪಿ ಲಾಹಿರಿ ವಿಧಿವಶ

ಬಾಡಿಗೆ ಕಾರಿನಲ್ಲಿ ಬಂದಿದ್ದ ವ್ಯಕ್ತಿ

ಅಜಿತ್ ದೋವಲ್(National Security Adviser) ದೆಹಲಿಯ ಅತ್ಯಂತ ಹೆಚ್ಚಿನ ಭದ್ರತಾ ಪ್ರದೇಶವಾದ ಲುಟ್ಯೆನ್ಸ್ ವಲಯದ 5 ಜನಪಥ್ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ದೋವಲ್ ಅವರ ಬಂಗಲೆಯ ಬಳಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬಂಗಲೆಯೂ ಇದೆ. ಬಂಧನಕ್ಕೊಳಗಾದ ವ್ಯಕ್ತಿಯಿಂದ ಆತ ಯಾವ ಉದ್ದೇಶದಿಂದ ಮನೆಗೆ ಪ್ರವೇಶಿಸಲು ಬಯಸಿದ್ದ ಎಂಬುದನ್ನು ಪೊಲೀಸರು ತಿಳಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆರೋಪಿ ಇದ್ದ ಕಾರು ಆತನೇ ಬಾಡಿಗೆಗೆ ಪಡೆದಿದ್ದ ಎಂದು ಹೇಳಲಾಗುತ್ತಿದೆ. 

ಉಗ್ರರ ಗುರಿಯಾಗಿರುವ ದೋವಲ್

ಅಜಿತ್ ದೋವಲ್ ಅವರನ್ನು ಭಾರತದ ಜೇಮ್ಸ್ ಬಾಂಡ್(India's James Bond)ಎಂದು ಕರೆಯಲಾಗುತ್ತದೆ. ಪಾಕಿಸ್ತಾನ ಮತ್ತು ಚೀನಾ ದೋವಲ್ ಮೇಲೆ ಕಣ್ಣಿಟ್ಟಿವೆ. ದೋವಲ್ ಅನೇಕ ಭಯೋತ್ಪಾದಕ ಸಂಘಟನೆಗಳ ಗುರಿಯೂ ಹೌದು. ಕಳೆದ ವರ್ಷ ಫೆಬ್ರವರಿಯಲ್ಲಿ ಜೈಶ್ ಭಯೋತ್ಪಾದಕನಿಂದ ದೋವಲ್ ಕಚೇರಿಯ ರೇಖಿಯ ವಿಡಿಯೋ ಪತ್ತೆಯಾಗಿತ್ತು. ಭಯೋತ್ಪಾದಕ ಈ ವಿಡಿಯೋವನ್ನು ತನ್ನ ಪಾಕಿಸ್ತಾನಿ ಹ್ಯಾಂಡ್ಲರ್‌ಗೆ ಕಳುಹಿಸಿದ್ದ. ಇದಾದ ಬಳಿಕ ದೋವಲ್ ಅವರ ಭದ್ರತೆಯನ್ನು ಹೆಚ್ಚಿಸಲಾಗಿತ್ತು.

ಇದನ್ನೂ ಓದಿ: VIDEO: ಸಂತ ರವಿದಾಸ್ ಮಂದಿರದಲ್ಲಿ ಮೋದಿ, 'ಶಬ್ದ ಕೀರ್ತನೆ'ಯಲ್ಲಿ ಮಂಜೀರಾ ನುಡಿಸಿದ ಪ್ರಧಾನಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News