ಮೃತಪಟ್ಟಿದ್ದಾನೆಂದು ತಿಳಿದುಕೊಂಡಿದ್ದ ವ್ಯಕ್ತಿ 24 ವರ್ಷದ ನಂತರ ಪ್ರತ್ಯಕ್ಷ..!

72 ವರ್ಷದ ಮಾಧೋ ಸಿಂಗ್ ಮೆಹ್ರಾ ದಿಢೀರ್ ಪ್ರತ್ಯಕ್ಷನಾಗಿರುವ ವ್ಯಕ್ತಿ.

Written by - Puttaraj K Alur | Last Updated : Jul 20, 2021, 01:45 PM IST
  • 24 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾನೆಂದು ತಿಳಿದು ಅಂತಿಮ ಸಂಸ್ಕಾರ ನೆರವೇರಿಸಿದ್ದ ಕುಟುಂಬಸ್ಥರು
  • ಪತಿ ನಾಪತ್ತೆಯಾದ ದಿನದಿಂದಲೂ ವಿಧವೆಯಾಗಿಯೇ ಜೀವನ ನಡೆಸಿದ ಮಾಧೋ ಸಿಂಗ್ ಪತ್ನಿ
  • ಮಾಧೋ ಸಿಂಗ್ ಗೆ ಹೊಸ ಹೆಸರು ನಾಮಕರಣ ಮಾಡುವಂತೆ ಧಾರ್ಮಿಕ ಮುಖ್ಯಸ್ಥರಿಗೆ ಸೂಚನೆ
ಮೃತಪಟ್ಟಿದ್ದಾನೆಂದು ತಿಳಿದುಕೊಂಡಿದ್ದ ವ್ಯಕ್ತಿ 24 ವರ್ಷದ ನಂತರ ಪ್ರತ್ಯಕ್ಷ..! title=
ಮೃತಪಟ್ಟಿದ್ದಾನೆಂದು ತಿಳಿದಿದ್ದ ವ್ಯಕ್ತಿ ಪ್ರತ್ಯಕ್ಷ

ಉತ್ತರಾಖಂಡ: 24 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾನೆಂದು ತಿಳಿದುಕೊಂಡಿದ್ದ ವ್ಯಕ್ತಿ ಮರಳಿ ಮನೆಗೆ ಬಂದರೆ ಹೇಗಾಗಬೇಡ ಹೇಳಿ. ಮೃತಪಟ್ಟಿದ್ದಾರೆಂದು ತಿಳಿದುಕೊಂಡ ವ್ಯಕ್ತಿಗಳಿಗೆ ಮತ್ತೆ ಜೀವ ಬಂದ ಘಟನೆಗಳು ಅನೇಕ ಬಾರಿ ನಡೆದಿವೆ. ಅದೇ ರೀತಿಯ ಮತ್ತೊಂದು ಘಟನೆಗೆ ಉತ್ತರಾಖಂಡದ ಗ್ರಾಮವೊಂದು ಸಾಕ್ಷಿಯಾಗಿದೆ.

ಹೌದು, ಬರೋಬ್ಬರಿ 24 ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾನೆಂದು ತಿಳಿದುಕೊಂಡಿದ್ದ ವ್ಯಕ್ತಿಯೊಬ್ಬ ಮರಳಿ ತನ್ನೂರಿಗೆ ಬಂದು ಎಲ್ಲರಿಗೂ ಗಾಬರಿಹುಟ್ಟಿಸಿದ್ದಾನೆ. ಅಲ್ಮೋರಾ ಜಿಲ್ಲೆ(Almora District)ಯ ರಾಣಿಖೇತ್ ಪ್ರದೇಶ ನಿವಾಸಿ 72 ವರ್ಷದ ಮಾಧೋ ಸಿಂಗ್ ಮೆಹ್ರಾ ದಿಢೀರ್ ಪ್ರತ್ಯಕ್ಷನಾಗಿರುವ ವ್ಯಕ್ತಿ. ಆತನ ಕುಟುಂಬಸ್ಥರ ಪ್ರಕಾರ ಮಾಧೋ ಸಿಂಗ್ 24 ವರ್ಷಗಳ ಹಿಂದೆಯೇ ಮೃತಪಟ್ಟಿದ್ದ. ಆದರೆ ಇದೀಗ ಮತ್ತೆ ತನ್ನ ಗ್ರಾಮಕ್ಕೆ ಆಗಮಿಸಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾನೆ.

ಇದನ್ನೂ ಓದಿ: IRCTC: ರೈಲಿನಲ್ಲಿ ಯಾವುದೇ ಬೆರ್ತ್ ಖಾಲಿ ಇದ್ದರೆ ತಕ್ಷಣವೇ ಬರುತ್ತೆ ಅಲರ್ಟ್, ಸಿಗುತ್ತೆ ಕನ್ಫರ್ಮ್ ಟಿಕೆಟ್

ಅಷ್ಟಕ್ಕೂ ಆಗಿದ್ದೇನೆಂದರೆ ಯಾವುದೋ ವಿಚಾರಕ್ಕೆ ಕುಟುಂಬಸ್ಥರ ನಡುವೆ ವಿವಾದ ನಡೆದಿತ್ತು. ಇದರಿಂದ ಬೇಸರಪಟ್ಟುಕೊಂಡ ಮಾಧೋ ಸಿಂಗ್ ಊರಿನಿಂದಲೇ ನಾಪತ್ತೆಯಾಗಿದ್ದ. ಬಳಿಕ ಎಷ್ಟು ಹುಡುಕಿದರೂ ಆತ ಸಿಕ್ಕಿರಲಿಲ್ಲ. ಕೊನೆಗೆ ಆ ಊರಿನ ಧಾರ್ಮಿಕ ಮುಖ್ಯಸ್ಥ ಮಾಧೋ ಸಿಂಗ್ ಸತ್ತಿದ್ದಾನೆಂದು ಘೋಷಿಸಿ, ಅಂತಿಮ ವಿಧಿ-ವಿಧಾನ ನೆರವೇರಿಸಿದ್ದರು. ಕುಟುಂಬಸ್ಥರು ಕೂಡ ಆತ ಮೃತಪಟ್ಟಿದ್ದಾನೆಂದು ತಿಳಿದು ಮರೆತುಬಿಟ್ಟಿದ್ದರು.

ಇದೀಗ 24 ವರ್ಷಗಳ ಬಳಿಕ ಮಾಧೋ ಸಿಂಗ್ ಗ್ರಾಮದಲ್ಲಿ ಪ್ರತ್ಯಕ್ಷವಾಗಿದ್ದಾನೆ. ಮೊದ ಮೊದಲು ಆತನನ್ನು ನೋಡಿ ಗಾಬರಿಗೊಂಡಿದ್ದ ಕುಟುಂಬಸ್ಥರು ಬಳಿಕ ಮನೆಯೊಳಕ್ಕೆ ಸೇರಿಸಿಕೊಂಡಿದ್ದಾರೆ. ಆತನಿಗಾಗಿ ದಶಕಗಳ ಕಾಲ ಕಾಯುತ್ತಿದ್ದ ಕುಟುಂಬ ಸದಸ್ಯರಿಗೆ ಖುಷಿಯಾಗಿದೆ. ಸದ್ಯ ಮಾಧೋ ಸಿಂಗ್ ಗೆ ಹೊಸ ಹೆಸರು ನಾಮಕರಣ(Naming Ceremony) ಮಾಡುವಂತೆ ಧಾರ್ಮಿಕ ಮುಖ್ಯಸ್ಥರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ: Kerala : ವ್ಯಾಕ್ಸಿನ್ ಪಡೆದ 39 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೊರೋನಾ ಪಾಸಿಟಿವ್!

ಇಷ್ಟು ವರ್ಷ ನಾಪತ್ತೆಯಾಗಿದ್ದ ಮಾಧೋ ಸಿಂಗ್ ತಾನು ಎಲ್ಲಿ ಹೋಗಿದ್ದೆ, ಹೇಗಿದ್ದೆ ಎಂಬುದನ್ನು ತಿಳಿಸಿಲ್ಲ. ಆದರೆ ನಾಪತ್ತೆಯಾದ ದಿನದಿಂದ ಆತನ ಪತ್ನಿ ಮಾತ್ರ ವಿಧವೆಯಾಗಿಯೇ ಜೀವನ ನಡೆಸಿದ್ದಾರೆ. ಪುತ್ರ ಮತ್ತು ಪುತ್ರಿಯ ಮದುವೆಯನ್ನೂ ಮಾಡಿದ್ದಾರೆ. ಸದ್ಯ ಮಾಧೋ ಸಿಂಗ್ ಪುತ್ರ ದೆಹಲಿ(Delhi)ಯಲ್ಲಿ ಕೆಲಸ ಮಾಡುತ್ತಿದ್ದಾನಂತೆ.

‘ನಮ್ಮ ಚಿಕ್ಕಪ್ಪ ಕಾಣೆಯಾದಾಗ ನಾನು ಚಿಕ್ಕವನಾಗಿದ್ದೆ. ನಮ್ಮ ಕುಟುಂಬಸ್ಥರು ಆತನ ಪತ್ತೆಗಾಗಿ ಹುಡುಕಾಟ ನಡೆಸಿ 10 ವರ್ಷಗಳಿಂದ ಕಾಯುತ್ತಿದ್ದರು.  ಯಾವಾಗ ಚಿಕ್ಕಪ್ಪ ಮರಳಿ ಬರಲೇ ಇಲ್ಲವೋ ನಮ್ಮ ಕುಟುಂಬಸ್ಥರು ಧಾರ್ಮಿಕ ಮುಖ್ಯಸ್ಥರನ್ನು ಕರೆದು ವಿಚಾರಿಸಿದರು. ಅವರು ಆತ ಸತ್ತಿದ್ದಾನೆ ಎಂದು ಹೇಳಿ ಅಂತಿಮ ಸಂಸ್ಕಾರದ ವಿಧಿ-ವಿಧಾನ ನೆರವೇರಿಸಿದರು. ಇದೀಗ 24 ವರ್ಷಗಳ ಬಳಿಕ ನಮ್ಮ ಚಿಕ್ಕಪ್ಪ ಆಗಮಿಸಿರುವುದು ನಮಗೆ ಖುಷಿ ತಂದಿದೆ ಎಂದು 38 ವರ್ಷದ ರಾಮ್ ಸಿಂಗ್ ಮೇಹ್ರಾ ಹೇಳಿದ್ದಾರೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News