ನವದೆಹಲಿ: ಮಹಾತ್ಮ ಗಾಂಧಿಯವರಿಗೆ ಭಾರತ ರತ್ನವನ್ನು ನೀಡುವಂತೆ ಭಾರತ ಸರ್ಕಾರಕ್ಕೆ ಯಾವುದೇ ಆದೇಶ ಅಥವಾ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮಹಾತ್ಮ ಗಾಂಧಿಗೆ ದೇಶದ ಅತ್ಯುನ್ನತ ಪ್ರಶಸ್ತಿ - ಭಾರತ್ ರತ್ನ ಪ್ರಶಸ್ತಿ ನೀಡುವಂತೆ ಒತ್ತಾಯಿಸಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿರುವ ದೇಶದ ಸರ್ವೊಚ್ಛ ನ್ಯಾಯಾಲಯ, ಮಹಾತ್ಮ ಗಾಂಧಿ ಭಾರತ್ ರತ್ನಕ್ಕಿಂತ ಮೇಲಿದ್ದಾರೆ. ಪ್ರಪಂಚದಾದ್ಯಂತದ ಜನರು ಮಹಾತ್ಮ ಗಾಂಧಿಯವರನ್ನು ತುಂಬಾ ಗೌರವಿಸುತ್ತಾರೆ. ಅವರದು ಮೇರು ವ್ಯಕ್ತಿತ್ವ ಮತ್ತು ಯಾವುದೇ ಔಪಚಾರಿಕ ಮಾನ್ಯತೆಗೆ ಮೀರಿದ ವ್ಯಕ್ತಿತ್ವ ಎಂದು ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
Supreme Court, while declining to pass any order in the PIL, said that Mahatma Gandhi is much higher than Bharat Ratna. https://t.co/0Fs4nY9DPk
— ANI (@ANI) January 17, 2020
ವಾಸ್ತವವಾಗಿ, ಈವರೆಗೆ ಅನೇಕ ಜನರಿಗೆ ದೇಶದ ಅತುನ್ನತ ಪ್ರಶಸ್ತಿ 'ಭಾರತ್ ರತ್ನ' ನೀಡಲಾಗಿದೆ. ಆದರೆ ಮಹಾತ್ಮ ಗಾಂಧಿಗೆ ಇನ್ನೂ ಈ ಗೌರವ ನೀಡಿಲ್ಲ. ರಾಷ್ಟ್ರದ ಪಿತಾಮಹರೂ ಈ ಗೌರವವನ್ನು ಪಡೆಯಬೇಕು ಎಂದು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ನ್ಯಾಯಾಲಯವು ಅರ್ಜಿದಾರರಿಗೆ, ನ್ಯಾಯಾಲಯವು ಈ ವಿಷಯವನ್ನು ಕೇಳಲು ಸಾಧ್ಯವಿಲ್ಲ. ನೀವು ಬಯಸಿದರೆ, ಈ ನಿಟ್ಟಿನಲ್ಲಿ ನೀವು ಕೇಂದ್ರ ಸರ್ಕಾರಕ್ಕೆ ಜ್ಞಾಪಕ ಪತ್ರವನ್ನು ನೀಡಬಹುದು. ನಮ್ಮ ದೃಷ್ಟಿಯಲ್ಲಿ ಮಹಾತ್ಮ ಗಾಂಧಿ ಭಾರತ್ ರತ್ನಕ್ಕಿಂತ ಮೇಲಿದ್ದಾರೆ ಎಂದು ಹೇಳಿದೆ.
ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಹಲವಾರು ಪಿಐಎಲ್‌ಗಳನ್ನು ಸಲ್ಲಿಸಲಾಗಿದ್ದರೂ ಎಲ್ಲವನ್ನು ಸ್ಪಷ್ಟವಾಗಿ ತಿರಸ್ಕರಿಸಲಾಗಿದೆ. ಮಹಾತ್ಮ ಗಾಂಧಿಯವರಿಗೆ ಭಾರತ್ ರತ್ನ ನೀಡುವುದು ಅವರ ಮತ್ತು ಅವರ ಕೊಡುಗೆಯನ್ನು ದುರ್ಬಲಗೊಳಿಸುವಂತಿದೆ ಎಂದು ಉನ್ನತ ನ್ಯಾಯಾಲಯವು ತನ್ನ ಹಿಂದಿನ ತೀರ್ಪುಗಳಲ್ಲಿ ಹೇಳಿದೆ.
'ಭಾರತ್ ರತ್ನ' ಭಾರತದ ಅತ್ಯುನ್ನತ ನಾಗರಿಕರಿಗೆ ನೀಡುವ ಗೌರವವಾಗಿದೆ. ಅಸಾಧಾರಣ ರಾಷ್ಟ್ರೀಯ ಸೇವೆಗಾಗಿ ಭಾರತ ಸರ್ಕಾರವು ಈ ಗೌರವವನ್ನು ನೀಡುತ್ತದೆ. ಈ ಸೇವೆಗಳಲ್ಲಿ ವಿಜ್ಞಾನ, ಸಾಹಿತ್ಯ, ಕಲೆ, ಸಾರ್ವಜನಿಕ ಸೇವೆ ಮತ್ತು ಕ್ರೀಡೆಗಳು ಸೇರಿವೆ. ಕ್ರೀಡೆಯನ್ನು ಈ ಮೊದಲು ಈ ಅತ್ಯುನ್ನತ ಗೌರವಕ್ಕೆ ಸೇರಿಸಲಾಗಿಲ್ಲವಾದರೂ, ನಂತರ ಅದನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಈ ಪ್ರಶಸ್ತಿಯನ್ನು 1954 ರ ಜನವರಿ 2 ರಂದು ಅಂದಿನ ಭಾರತದ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು ಆರಂಭಿಸಿದರು. ಸರ್ಕಾರವು ಈವರೆಗೆ ಅನೇಕ ಜನರಿಗೆ ಭಾರತ್ ರತ್ನವನ್ನು ನೀಡಿದೆ. ಚಕ್ರವರ್ತಿ ರಾಜಗೋಪಾಲಾಚಾರಿ ಅವರಿಗೆ 1954 ರಲ್ಲಿ ಮೊದಲ ಬಾರಿಗೆ ಭಾರರತ್ನ ನೀಡಲಾಯಿತು. ಈ ಪಟ್ಟಿಯಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಸೇರಿದ್ದಾರೆ. ಸಚಿನ್ ತೆಂಡೂಲ್ಕರ್ ಅವರಿಗೂ ಈ ಗೌರವ ನೀಡಲಾಗಿದೆ.