ಮಹಾರಾಷ್ಟ್ರದಲ್ಲಿಂದು 3,427 ಹೊಸ ಕರೋನವೈರಸ್ ಪ್ರಕರಣಗಳು ದಾಖಲು..!

ಭಾರತದದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ರೋಗಕ್ಕೆ ತುತ್ತಾಗಿರುವ ರಾಜ್ಯವೆಂದರೆ ಅದು ಮಹಾರಾಷ್ಟ್ರ, ಈಗ ಇಲ್ಲಿ ಪ್ರತಿದಿನವೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಲೇ ಇದೆ.

Last Updated : Jun 13, 2020, 10:03 PM IST
ಮಹಾರಾಷ್ಟ್ರದಲ್ಲಿಂದು 3,427 ಹೊಸ ಕರೋನವೈರಸ್ ಪ್ರಕರಣಗಳು ದಾಖಲು..! title=
Photo Courtsey : ANI

ನವದೆಹಲಿ: ಭಾರತದದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೊರೊನಾ ರೋಗಕ್ಕೆ ತುತ್ತಾಗಿರುವ ರಾಜ್ಯವೆಂದರೆ ಅದು ಮಹಾರಾಷ್ಟ್ರ, ಈಗ ಇಲ್ಲಿ ಪ್ರತಿದಿನವೂ ಕೂಡ ಕೊರೊನಾ ಪ್ರಕರಣಗಳ ಸಂಖ್ಯೆ ಅಧಿಕವಾಗುತ್ತಲೇ ಇದೆ.

ಈಗ ಶನಿವಾರದಂದು ಮಹಾರಾಷ್ಟ್ರವು ಶನಿವಾರ 3,427 ಹೊಸ ಕರೋನವೈರಸ್ ಸೋಂಕುಗಳನ್ನು ವರದಿ ಮಾಡಿದೆ, ಈ ಮೂಲಕ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆ 1,04,568 ಕ್ಕೆ ತಲುಪಿದೆ. ಮಹಾರಾಷ್ಟ್ರದಲ್ಲಿ ಈಗ 51,392 ಸಕ್ರಿಯ ಪ್ರಕರಣಗಳಿವೆ.

ಇದನ್ನೂ ಓದಿ: ಭಾರತದಲ್ಲಿ 3 ಲಕ್ಷ ಮೀರಿದ ಕರೋನಾ ಪ್ರಕರಣ, ಚೀನಾ-ಕೆನಡಾವನ್ನು ಹಿಂದಿಕ್ಕಿದ ಮಹಾರಾಷ್ಟ್ರ

ಕಳೆದ 24 ಗಂಟೆಗಳಲ್ಲಿ ರಾಜ್ಯದ ಸಾವಿನ ಸಂಖ್ಯೆ 113 ರಷ್ಟು ಏರಿಕೆಯಾಗಿ 3,830 ಕ್ಕೆ ತಲುಪಿದೆ. ಇದುವರಗೆ ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 49,346 ಆಗಿದ್ದರೆ  ಒಟ್ಟು 1,550 ರೋಗಿಗಳನ್ನು ಇಂದು ಬಿಡುಗಡೆ ಮಾಡಲಾಗಿದೆ. COVID-19 ಚೇತರಿಕೆ ದರವು ಈಗ 47.2% ರಷ್ಟಿದ್ದರೆ, ಸಾವಿನ ಪ್ರಮಾಣ 3.7% ರಷ್ಟಿದೆ.

ಮಹಾರಾಷ್ಟ್ರ ನಿನ್ನೆ 1 ಲಕ್ಷ ಕರೋನವೈರಸ್ ಪ್ರಕರಣಗಳು ದೃಢಪಟ್ಟ ಮೊದಲ ಭಾರತೀಯ ರಾಜ್ಯ ಎನ್ನುವ ಕುಖ್ಯಾತಿಗೆ ಪಾತ್ರವಾಗಿತ್ತು 

Trending News