ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 4,841 ಹೊಸ COVID-19 ಪ್ರಕರಣ ದಾಖಲು...!

ಮಹಾರಾಷ್ಟ್ರ ಗುರುವಾರದಂದು 4,841 ಹೊಸ ಕೋವಿಡ್ 19 ಪ್ರಕರಣಗಳೊಂದಿಗೆ ಅತಿ ಹೆಚ್ಚು ಏಕದಿನ ಸ್ಪೈಕ್ ದಾಖಲಿಸಿದ್ದು, ರಾಜ್ಯದ ಒಟ್ಟು ಕರೋನವೈರಸ್ ಸೋಂಕುಗಳ ಸಂಖ್ಯೆಯನ್ನು 1,47,741 ಕ್ಕೆ ತಲುಪಿದೆ .ಗುರುವಾರದಂದು 192 ಸಾವುಗಳು ವರದಿಯಾಗಿದ್ದು,  ಆ ಮೂಲಕ ರಾಜ್ಯದಲ್ಲಿ ಒಟ್ಟು ಸಾವುನೋವುಗಳ ಸಂಖ್ಯೆ 6,931 ಕ್ಕೆ ತಲುಪಿದೆ.

Last Updated : Jun 25, 2020, 09:44 PM IST
ಮಹಾರಾಷ್ಟ್ರದಲ್ಲಿ ಒಂದೇ ದಿನಕ್ಕೆ 4,841 ಹೊಸ COVID-19 ಪ್ರಕರಣ ದಾಖಲು...!   title=
ಸಾಂದರ್ಭಿಕ ಚಿತ್ರ

ನವದೆಹಲಿ: ಮಹಾರಾಷ್ಟ್ರ ಗುರುವಾರದಂದು 4,841 ಹೊಸ ಕೋವಿಡ್ 19 ಪ್ರಕರಣಗಳೊಂದಿಗೆ ಅತಿ ಹೆಚ್ಚು ಏಕದಿನ ಸ್ಪೈಕ್ ದಾಖಲಿಸಿದ್ದು, ರಾಜ್ಯದ ಒಟ್ಟು ಕರೋನವೈರಸ್ ಸೋಂಕುಗಳ ಸಂಖ್ಯೆಯನ್ನು 1,47,741 ಕ್ಕೆ ತಲುಪಿದೆ .ಗುರುವಾರದಂದು 192 ಸಾವುಗಳು ವರದಿಯಾಗಿದ್ದು,  ಆ ಮೂಲಕ ರಾಜ್ಯದಲ್ಲಿ ಒಟ್ಟು ಸಾವುನೋವುಗಳ ಸಂಖ್ಯೆ 6,931 ಕ್ಕೆ ತಲುಪಿದೆ.

ಮಹಾರಾಷ್ಟ್ರವು ಭಾರತದ ಅತ್ಯಂತ ಕೊರೊನಾ ಪೀಡಿತ ರಾಜ್ಯವಾಗಿದೆ ಮತ್ತು ಗುರುವಾರದ ವೇಳೆಗೆ ಭಾರತದ ಒಟ್ಟು 4,73,105 ಸಕಾರಾತ್ಮಕ ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟಿದೆ. ಮುಂಬೈ ಪ್ರಕರಣಗಳ ಸಂಖ್ಯೆ 70,000 ದಾಟಿದ್ದು, ಗುರುವಾರ 1,350 ಹೊಸ ಪ್ರಕರಣಗಳು ವರದಿಯಾಗಿದ್ದು, 70,878 ಕ್ಕೆ ತಲುಪಿದೆ. 98 ಹೊಸ ಸಾವು ನೋವುಗಳೊಂದಿಗೆ ನಗರದ ಸಾವಿನ ಸಂಖ್ಯೆ 4,062ಕ್ಕೆ ತಲುಪಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಕಳೆದ 24 ಗಂಟೆಯಲ್ಲಿ 3,788 ಹೊಸ ಕೊರೊನಾ ಪ್ರಕರಣ ದಾಖಲು..!

ಇಂದು ಮುಂಬೈನ ಧಾರವಿಯ ಕೊಳೆಗೇರಿ ವಸಾಹತು ಪ್ರದೇಶದಲ್ಲಿ 11 ಹೊಸ ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಏಷ್ಯಾದ ಅತಿದೊಡ್ಡ ಕೊಳೆಗೇರಿಗಳ ಸಂಖ್ಯೆ 2,210 ಕ್ಕೆ ಏರಿದೆ. ಈ ಪ್ರದೇಶದಿಂದ ಯಾವುದೇ ಹೊಸ ಸಾವು ಸಂಭವಿಸಿಲ್ಲ ಎಂದು ಬಿಎಂಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Trending News