Maharashtra Political Crisis : ಶಿಂಧೆ-ಬಿಜೆಪಿ, ಶಿವಸೇನೆ-BJP : ಇವರಿಗೆ ಮಹಾದಲ್ಲಿ ಸರ್ಕಾರ ರಚಿಸಲು ಈ 5 ಆಯ್ಕೆಗಳು!

ಶಿವಸೇನೆಯ ಹಿರಿಯ ನಾಯಕ ಶಿಂಧೆ 40 ಶಾಸಕರೊಂದಿಗೆ ಅಸ್ಸಾಂನ ಗುವಾಹಟಿಯಲ್ಲಿದ್ದಾರೆ. ಇವರ ರೆಬಲ್ ದಿಂದಾಗಿ, ಠಾಕ್ರೆ ಸರ್ಕಾರದ ಮೇಲೆ ಬಿಕ್ಕಟ್ಟಿನ ಮೋಡಗಳು ಸುಳಿದಾಡುತ್ತಿವೆ.

Written by - Channabasava A Kashinakunti | Last Updated : Jun 22, 2022, 12:07 PM IST
  • ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ ಬಂಡಾಯ
  • ಶಿವಸೇನೆಯ ಶಿಂಧೆ 40 ಶಾಸಕರೊಂದಿಗೆ ಅಸ್ಸಾಂನ ಗುವಾಹಟಿಗೆ ಪಯಣ
  • ಠಾಕ್ರೆ ಸರ್ಕಾರದ ಮೇಲೆ ಬಿಕ್ಕಟ್ಟಿನ ಮೋಡಗಳು ಸುಳಿದಾಡುತ್ತಿವೆ.
Maharashtra Political Crisis : ಶಿಂಧೆ-ಬಿಜೆಪಿ, ಶಿವಸೇನೆ-BJP : ಇವರಿಗೆ ಮಹಾದಲ್ಲಿ ಸರ್ಕಾರ ರಚಿಸಲು ಈ 5 ಆಯ್ಕೆಗಳು! title=

Maharashtra Political Crisis : ಮಹಾರಾಷ್ಟ್ರ ಸಚಿವ ಏಕನಾಥ್ ಶಿಂಧೆ ಬಂಡಾಯದಿಂದ ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾಗಿದೆ. ಶಿವಸೇನೆಯ ಹಿರಿಯ ನಾಯಕ ಶಿಂಧೆ 40 ಶಾಸಕರೊಂದಿಗೆ ಅಸ್ಸಾಂನ ಗುವಾಹಟಿಯಲ್ಲಿದ್ದಾರೆ. ಇವರ ರೆಬಲ್ ದಿಂದಾಗಿ, ಠಾಕ್ರೆ ಸರ್ಕಾರದ ಮೇಲೆ ಬಿಕ್ಕಟ್ಟಿನ ಮೋಡಗಳು ಸುಳಿದಾಡುತ್ತಿವೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿನ ನಡುವೆ, ಈ 5 ಆಯ್ಕೆಗಳು ಹರಿದಾಡುತ್ತಿವೆ, ಇವುಗಳನ್ನು ಪಾಲಿಸಿದ್ದೆ ಆದರೆ ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟು ಶಮನಗೊಳಿಸಬಹುದು. ಆ ಆಯ್ಕೆಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.

ಇದನ್ನೂ ಓದಿ : ಮಹಾರಾಷ್ಟ್ರ ಸರ್ಕಾರಕ್ಕೆ ತಲೆನೋವಾದ ಏಕನಾಥ್ ಶಿಂಧೆ ; ಇಂದು ಮಹತ್ವದ ನಡೆ ಸಾಧ್ಯತೆ

ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲು ಈ 5 ಆಯ್ಕೆಗಳು

- ಏಕನಾಥ್ ಶಿಂಧೆ ಬೆಂಬಲದೊಂದಿಗೆ ಬಿಜೆಪಿ ಸರ್ಕಾರ ರಚಿಸಬೇಕು.
- ಬಿಜೆಪಿಯೊಂದಿಗೆ ಶಿವಸೇನೆ ಸರ್ಕಾರ ರಚಿಸಬೇಕು.
- ಏಕನಾಥ್ ಶಿಂಧೆಗೆ ಸರ್ಕಾರ ರಚಿಸುವ ಬಗ್ಗೆ ಶಿವಸೇನೆ ಮನವರಿಕೆ ಮಾಡಿಕೊಡಬೇಕು.
- ಶಿವಸೇನೆ ಏಕನಾಥ್ ಶಿಂಧೆಯನ್ನು ವಜಾಗೊಳಿಸಬೇಕು ಮತ್ತು ಬಂಡಾಯ ಶಾಸಕರು ಪಕ್ಷಕ್ಕೆ ಮರಳಿ ತರಬೇಕು.
- ಫ್ಲೋರ್ ಟೆಸ್ಟ್ ನಲ್ಲಿ ಮಹಾವಿಕಾಸ್ ಅಘಾಡಿ ಮೈತ್ರಿಕೂಟವು ಮಹಾಘಟಬಂಧನದಲ್ಲಿ ಸೋಲನುಭವಿಸಲಿ.

ಫ್ಲೋರ್ ಟೆಸ್ಟ್ ಹೇಗೆ ಮಾಡಲಾಗುತ್ತದೆ?

ಮೂಲಗಳ ಪ್ರಕಾರ, ಏಕನಾಥ್ ಶಿಂಧೆ ಅವರು ಇಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಪತ್ರವನ್ನು ಫ್ಯಾಕ್ಸ್ ಮಾಡಬಹುದು. ಈ ಪತ್ರದ ಮೂಲಕ ಅವರು ಮಹಾವಿಕಾಸ್ ಅಘಾಡಿ ಸರ್ಕಾರವನ್ನು ಬೆಂಬಲಿಸದ ಸುಮಾರು 40 ಶಾಸಕರ ಹಕ್ಕು ಮಂಡಿಸಬಹುದು. ಈ ಪತ್ರದ ಆಧಾರದ ಮೇಲೆ, ಉದ್ಧವ್ ಸರ್ಕಾರವು ತನ್ನ ಬಹುಮತವನ್ನು ಸಾಬೀತುಪಡಿಸಬೇಕಾದ ಫ್ಲೋರ್ ಟೆಸ್ಟ್ ಕುರಿತು ರಾಜ್ಯಪಾಲರು ನಂತರ ನಿರ್ಧರಿಸುತ್ತಾರೆ.

ಶಿಂಧೆ-ಬಿಜೆಪಿ ಸರ್ಕಾರ ರಚಿಸುವುದು ಹೇಗೆ?

ಏಕನಾಥ್ ಶಿಂಧೆ ಅವರು ಮುಂಬೈನಲ್ಲಿರುವ ಶಿವಸೇನೆ ಶಾಸಕರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಉದ್ದೇಶಿಸಿದ್ದಾರೆ, ಇದರಿಂದ ಅವರು ಮೂರನೇ ಎರಡರಷ್ಟು ಗಡಿ ಬಹುಮತ ಸಾಧಿಸಲಿದ್ದಾರೆ. ಈ ಗುರಿಯನ್ನು ಸಾಧಿಸುವಲ್ಲಿ ಶಿಂಧೆ ಯಶಸ್ವಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ : President Election 2022 : ದ್ರೌಪದಿ ಮುರ್ಮು ರಾಷ್ಟ್ರಪತಿ ಅಭ್ಯರ್ಥಿ ಘೋಷಣೆ ಹಿಂದಿದೆ NDA ಮಾಸ್ಟರ್‌ಮೈಂಡ್!

ಸದ್ಯ ಶಿಂಧೆ ಬಳಿ 40 ಶಾಸಕರಿದ್ದಾರೆ. ಹಾಗೆ, ಬಿಜೆಪಿ+ 113 ಶಾಸಕರನ್ನು ಹೊಂದಿದೆ. ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಸ್ಥಾನಗಳಿವೆ ಮತ್ತು ಇಲ್ಲಿ ಬಹುಮತದ ಸಂಖ್ಯೆ 145 ಆಗಿದೆ. ಶಿಂಧೆಗೆ ಸಂಬಂಧಿಸಿದಂತೆ ಬಿಜೆಪಿ 41 ಶಾಸಕರ ಬೆಂಬಲವನ್ನು ಪಡೆದರೆ, ಅದು 154 ರ ಸಂಖ್ಯೆಯನ್ನು ಹೊಂದುತ್ತದೆ, ಅದು ಬಹುಮತವನ್ನು ದಾಟುತ್ತದೆ ಎಂದು ಹೇಳಬಹುದು.

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News