ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶಿವಸೇನೆ ಇಲ್ಲದೆ ಸರ್ಕಾರ ರಚಿಸುವುದಿಲ್ಲ ಎಂದ ಬಿಜೆಪಿ..!

ದೇವೇಂದ್ರ ಫಡ್ನವೀಸ್ ಮತ್ತು ಇತರ ಹಿರಿಯ ಬಿಜೆಪಿ ಮುಖಂಡರು ಭಾನುವಾರ ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾಗಿ ಮಿತ್ರಪಕ್ಷ ಶಿವಸೇನೆ ಸಹಕರಿಸಲು ಸಿದ್ಧವಿಲ್ಲದ ಕಾರಣ ಸರ್ಕಾರವನ್ನು ರಚಿಸುವ ಹಕ್ಕು ಪಕ್ಷಕ್ಕೆ ಇಲ್ಲ ಎಂದು ಹೇಳಿದ್ದಾರೆ. 

Last Updated : Nov 10, 2019, 07:01 PM IST
ಮಹಾರಾಷ್ಟ್ರ ರಾಜಕೀಯ ಬಿಕ್ಕಟ್ಟು: ಶಿವಸೇನೆ ಇಲ್ಲದೆ ಸರ್ಕಾರ ರಚಿಸುವುದಿಲ್ಲ ಎಂದ ಬಿಜೆಪಿ..!  title=

ನವದೆಹಲಿ: ದೇವೇಂದ್ರ ಫಡ್ನವೀಸ್ ಮತ್ತು ಇತರ ಹಿರಿಯ ಬಿಜೆಪಿ ಮುಖಂಡರು ಭಾನುವಾರ ಸಂಜೆ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯರಿ ಅವರನ್ನು ಭೇಟಿಯಾಗಿ ಮಿತ್ರಪಕ್ಷ ಶಿವಸೇನೆ ಸಹಕರಿಸಲು ಸಿದ್ಧವಿಲ್ಲದ ಕಾರಣ ಸರ್ಕಾರವನ್ನು ರಚಿಸುವ ಹಕ್ಕು ಪಕ್ಷಕ್ಕೆ ಇಲ್ಲ ಎಂದು ಹೇಳಿದ್ದಾರೆ. 

ಈ ವಿಚಾರವಾಗಿ ಮಾತನಾಡಿದ ರಾಜ್ಯ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ 'ಶಿವಸೇನೆ ನಮ್ಮೊಂದಿಗೆ ಬರಲು ಸಿದ್ಧರಿಲ್ಲದ ಕಾರಣ ಸರ್ಕಾರ ರಚಿಸುವುದಾಗಿ ನಾವು ಹೇಳುವುದಿಲ್ಲ. ಇದನ್ನು ನಾವು ರಾಜ್ಯಪಾಲರಿಗೆ ತಿಳಿಸಿದ್ದೇವೆ ”ಎಂದು ಸುದ್ದಿಗಾರರಿಗೆ ತಿಳಿಸಿದರು. “ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ, ನಾವು ಮಹಾ ಮೈತ್ರಿಕೂಟದ‘ ಮಹಾಯುತಿ ’ಯ ಭಾಗವಾಗಿ ಸ್ಪರ್ಧಿಸಿದ್ದೆವು ಮತ್ತು ಈ ಮೈತ್ರಿಗೆ ನಾವು ಜನಾದೇಶವನ್ನು ಪಡೆದುಕೊಂಡಿದ್ದೇವೆ. ಶಿವಸೇನೆ ಈ ಆದೇಶವನ್ನು ಅವಮಾನಿಸಿ ಕಾಂಗ್ರೆಸ್ ಮತ್ತು ಎನ್‌ಸಿಪಿಯೊಂದಿಗೆ ಸರ್ಕಾರ ರಚಿಸಲು ಬಯಸಿದರೆ, ಅವರೆಲ್ಲರಿಗೂ ಶುಭ ಹಾರೈಸುತ್ತೇವೆ ”ಎಂದು ಪಾಟೀಲ್ ಹೇಳಿದರು.

ಬಿಜೆಪಿ-ಶಿವಸೇನಾ ಮೈತ್ರಿಕೂಟ 50:50 ಸೂತ್ರದ ವಿಚಾರವಾಗಿ ಒಮ್ಮತಕ್ಕೆ ಬರದ ಕಾರಣ ಅತಿದೊಡ್ಡ ಪಕ್ಷವಾಗಿರುವ ಬಿಜೆಪಿಗೆ ಸರ್ಕಾರ ರಚಿಸಬೇಕೆಂದು ಮಹಾರಾಷ್ಟ್ರ ರಾಜ್ಯಪಾಲ ಶನಿವಾರದಂದು ಆಹ್ವಾನ ನೀಡಿದ್ದರು. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸುವುದಿಲ್ಲ ಎಂದು ಹೇಳಿದೆ. ಇನ್ನೊಂದೆಡೆಗೆ ಮಹಾರಾಷ್ಟ್ರದಲ್ಲಿ ಯಾರೂ ಸರ್ಕಾರ ರಚನೆ ಮಾಡದೆ ಹೋದಲ್ಲಿ ಶಿವಸೇನಾ ಸರ್ಕಾರ ರಚಿಸಲಿದೆ ಎಂದು ಶಿವಸೇನಾ ವಕ್ತಾರ ಸಂಜಯ್ ರೌತ್ ಹೇಳಿದ್ದರು.

ಇನ್ನೊಂದೆಡೆ ಈಗ ಕಾಂಗ್ರೆಸ್ ಪಕ್ಷದಲ್ಲಿ ಶಿವಸೇನಾಗೆ ಸರ್ಕಾರ ರಚನೆಗೆ ಬೆಂಬಲ ನೀಡಲು ಪರ ವಿರೋಧ ವ್ಯಕ್ತವಾಗುತ್ತಿವೆ. ಈ ಈ ವಿಚಾರವಾಗಿ ಮಾತನಾಡಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಕಾಂಗ್ರೆಸ್-ಎನ್ಸಿಪಿ ಮೈತ್ರಿಕೂಟಕ್ಕೆ ಜನರು ಪ್ರತಿಪಕ್ಷದಲ್ಲಿ ಕುಳಿತುಕೊಳ್ಳಲು ಜನಾದೇಶ ನೀಡಿದ್ದಾರೆ.ಆ ಕೆಲಸವನ್ನು ಪಕ್ಷ ಮಾಡಲಿದೆ ಎಂದು ಸ್ಪಷ್ಟಪಡಿಸಿದ್ದರು.

Trending News