Chinaಗೆ ಭಾರಿ ಪೆಟ್ಟು ನೀಡಿದ ಮಹಾರಾಷ್ಟ್ರ ಸರ್ಕಾರ, ಮೂರು ಚೀನಾ ಕಂಪನಿಗಳ ಮೇಲೆ ಕ್ರಮ

ಚೀನಾಗೆ ಪಾಠ ಕಲಿಸಲು ಮಹಾರಾಷ್ಟ್ರದ ಉದ್ಧವ್ ಠಾಕ್ರೆ ಸರ್ಕಾರ ಗಂಭೀರ ಹೆಜ್ಜೆಯೊಂದನ್ನು ಇಟ್ಟಿದೆ.

Last Updated : Jun 22, 2020, 05:39 PM IST
Chinaಗೆ ಭಾರಿ ಪೆಟ್ಟು ನೀಡಿದ ಮಹಾರಾಷ್ಟ್ರ ಸರ್ಕಾರ, ಮೂರು ಚೀನಾ ಕಂಪನಿಗಳ ಮೇಲೆ ಕ್ರಮ title=

ಮುಂಬೈ:ಮಹಾರಾಷ್ಟ್ರದ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಚೀನಾಗೆ ಭಾರಿ ಪೆಟ್ಟು  ನೀಡಿದೆ. ಚೀನಾದ 3 ಕಂಪನಿಗಳೊಂದಿಗೆ 5 ಸಾವಿರ ಕೋಟಿ ರೂ.ಗಳ ಯೋಜನೆಯನ್ನು ಉದ್ಧವ್ ಸರ್ಕಾರ ಕೈಬಿಟ್ಟಿದೆ. ಜೂನ್ 15 ರಂದು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇತ್ತೀಚೆಗಷ್ಟೇ ಚೀನಾದ ಕಂಪನಿಗಳು ಮ್ಯಾಗ್ನೆಟಿಕ್ ಮಹಾರಾಷ್ಟ್ರ 2.0 ನಲ್ಲಿ ಮಾಡಿದ ಒಪ್ಪಂದವನ್ನು ಮಹಾರಾಷ್ಟ್ರ ಸರ್ಕಾರ ತಡೆಹಿಡಿದಿದೆ. ಕೇಂದ್ರ ಸರ್ಕಾರದೊಂದಿಗೆ ಮಾತುಕತೆಯ ಬಳಿಕ ರಾಜ್ಯ ಸರ್ಕಾರ ಈ ಕಂಪನಿಗಳ ಜೊತೆಗಿನ ಒಪ್ಪಂದಕ್ಕೆ ತಡೆ ನೀಡಿದೆ.

ಚೀನಾದ 3 ಕಂಪನಿಗಳಲ್ಲಿ ಸುಮಾರು 5 ಸಾವಿರ ಕೋಟಿ ವೆಚ್ಚದ ಯೋಜನೆ ಹೊಂದಿದ್ದವು. ಈ ಎಲ್ಲ ಒಪ್ಪಂದಗಳನ್ನು ಜೂನ್ 15 ರಂದು ಮಾಡಲಾಗಿತ್ತು. ಅದಾದ ಬಳಿಕ ನಂತರ ಭಾರತೀಯ ಸೈನಿಕರು ಚೀನಾ ಜೊತೆಗೆ LAC ಬಳಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಸರ್ಕಾರ ಸದ್ಯ ಚೀನಾ ಕಂಪನಿಗಳೊಂದಿಗಿನ ತನ್ನ ಒಪ್ಪಂದಕ್ಕೆ ತಡೆ ನೀಡಿದ್ದು, ಕೇಂದ್ರ ಸರ್ಕಾರದ ಮುಂದಿನ ಆದೇಶಕ್ಕಾಗಿ ರಾಜ್ಯ ಸರ್ಕಾರ ಕಾಯುತ್ತಿದೆ.

ಜೂನ್ 15 ರ ರಾತ್ರಿ, ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರ ಕ್ರೌರ್ಯಕ್ಕೆ ಭಾರತೀಯ ಸೈನಿಕರು ಕೂಡ ಪ್ರತಿಕಾರ ತೀರಿಸಿಕೊಂಡಿದ್ದು, ಸುಮಾರು 45-50 ಚೀನೀ ಸೈನಿಕರನ್ನು ಮಟ್ಟಹಾಕಿದ್ದಾರೆ. ಈ ಸಂದರ್ಭದಲ್ಲಿ ಭಾರತೀಯ ಸೈನಿಕರು ಚೀನಾದ ಕರ್ನಲ್ ನನ್ನು ಕೂಡ ಬಂಧಿಸಿದ್ದರು.

ಗಾಲ್ವಾನ್ ಕಣಿವೆಯಲ್ಲಿ ಚೀನಾ ಸೇನೆ ಪ್ರದರ್ಶಿಸಿದ  ಹೇಡಿತನಕ್ಕೆ ಇಡೀ ದೇಶಾದ್ಯಂತ ವಿರೋಧ ಆಕ್ರೋಶ ವ್ಯಕ್ತವಾಗುತ್ತಿದೆ. ರೈಲ್ವೆ ಸಚಿವಾಲಯ ಮತ್ತು ಟೆಲಿಕಾಂ ಸಚಿವಾಲಯ ಈಗಾಗಲೇ ಚೀನಾದ ಕಂಪನಿಗಳಿಗೆ ದಾರಿ ತೋರಿಸಲಾರಂಭಿಸಿದೆ. ನಾಲ್ಕು ದಿನಗಳ ಹಿಂದೆ ಭಾರತೀಯ ರೈಲ್ವೆ, ಚೀನೀ ಕಂಪನಿಯ ಜೊತೆ ತಾನು ಮಾಡಿಕೊಂಡಿದ್ದ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. . 2016 ರಲ್ಲಿ ಚೀನಾದ ಕಂಪನಿಯೊಂದಿಗೆ 471 ಕೋಟಿ ರೂ.ಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 417 ಕಿ.ಮೀ ಉದ್ದದ ರೈಲು ಹಳಿಗಳಲ್ಲಿ ಸಿಗ್ನಲ್ ವ್ಯವಸ್ಥೆಯನ್ನು ಅಳವಡಿಸಬೇಕಾಗಿತ್ತು. ಚೀನಾದ ಸಲಕರಣೆಗಳ ಬಳಕೆಯನ್ನು ಕಡಿಮೆ ಮಾಡಲು ಈ ಹಿಂದೆ ಸರ್ಕಾರ ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ಗೆ ಸೂಚನೆ ನೀಡಿತ್ತು.

Trending News