Mr. India Ashish Sakharkar passes away: ಆಶಿಶ್ ನಿಧನಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ್ ಶಿಂಧೆ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಸಹ ಸಖರ್ಕರ್ ನಿಧನಕ್ಕೆ ದುಃಖ ವ್ಯಕ್ತಪಡಿಸಿದ್ದು, ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಹೊಸ ಹಣಕಾಸು ಯೋಜನೆಯನ್ನು ಹೊರತಂದಿದೆ, ಇದರ ಅಡಿಯಲ್ಲಿ ರಾಜ್ಯದ ಒಂದು ಕೋಟಿಗೂ ಹೆಚ್ಚು ರೈತರಿಗೆ ವಾರ್ಷಿಕವಾಗಿ ರಾಜ್ಯ ಸರ್ಕಾರದಿಂದ 6,000 ರೂ ಹಾಗೂ ಕೇಂದ್ರ ಸರ್ಕಾರದಿಂದ 6,000 ರೂ ಒಟ್ಟು ವರ್ಷಕ್ಕೆ 12,000 ರೂ ಸಿಗಲಿದೆ.ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮೋ ಶೆಟ್ಕರಿ ಮಹಾಸನ್ಮಾನ್ ಯೋಜನೆಗೆ ಅನುಮೋದನೆ ನೀಡಲಾಯಿತು.
ರಾಜ್ಯ ಪುನರ್ ರಚನಾ ಕಾಯ್ದೆ 1956 ರಲ್ಲಿ ರೂಪಿಸಿ ಇಷ್ಟು ವರ್ಷಗಳಾಗಿವೆ. ಎರಡೂ ಕಡೆ ಜನ ನೆಮ್ಮದಿಯಿಂದಿದ್ದಾರೆ. ಅವರ ರಾಜಕಾರಣಕ್ಕಾಗಿ ಈ ರೀತಿ ಯ ಹೇಳಿಕೆಗಳನ್ನು ಹಾಗೂ ನಿರ್ಣಯಗಳನ್ನು ನೀಡುತ್ತಿದ್ದಾರೆ. ನಮ್ಮ ನಿಲುವಿನಲ್ಲಿ ಸ್ಪಷ್ಟತೆ ಇದೆ.ಕರ್ನಾಟಕದ ಒಂದಿಂಚೂ ಜಾಗವನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ.
ಮಹಾರಾಷ್ಟ್ರದಲ್ಲಿರುವುದು ಮೂರಾಬಟ್ಟೆ ಸರ್ಕಾರ ಎಂದು ಬೆಳಗಾವಿಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ.. ಕಾಂಗ್ರೆಸ್ ಮತ್ತು ಶಿವಸೇನೆ ಎಂದೂ ಹೊಂದಾಣಿಕೆ ಆಗಲು ಸಾಧ್ಯವಿಲ್ಲ. ನೀರಿಗೆ ಎಣ್ಣೆ ಸೇರಿಸಿದ ಹಾಗೆ ಆಗಿದೆ. ನೀರು ಎಣ್ಣೆ ಪ್ರತ್ಯೇಕ ಇರುತ್ತವೆ. ಶಿವಸೇನೆ ಹುಟ್ಟಿದ್ದು ಹಿಂದುತ್ವದ ಆಧಾರದ ಮೇಲೆ. ಅಧಿಕಾರದ ಆಸೆಗಾಗಿ ಉದ್ಧವ್ ಠಾಕ್ರೆ ತತ್ವ ಸಿದ್ಧಾಂತ ಇಲ್ಲದ ಪಕ್ಷದ ಜತೆಗೆ ಕೈಜೋಡಿಸಿ ಸರ್ಕಾರ ಮಾಡಿದ್ದೇ ಮಹಾ ಅಪರಾಧ ಎಂದಿದ್ದಾರೆ..
ಮಹಾರಾಷ್ಟ್ರದ ರಾಜಕೀಯ ಬಿಕ್ಕಟ್ಟಿನ ಹಿಂದೆ ಇರೋದು ಕೇಂದ್ರ ಗೃಹ ಸಚಿವ ಅಮಿತ್ ಶಾ. ಅದರಲ್ಲಿ ಯಾವುದಾದರೂ ಸಂಶಯ ಇದೆಯಾ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಎಚ್ಡಿಕೆ, ವಿರೋಧ ಪಕ್ಷಗಳೇ ಇರಬಾರದು. ಬಿಜೆಪಿ ಹೊರತುಪಡಿಸಿ ಯಾವುದೇ ಸರ್ಕಾರ ಈ ದೇಶದಲ್ಲಿ ಇರಬಾರದು ಎಂಬುದೇ ಬಿಜೆಪಿಯ ಸಿದ್ಧಾಂತ. ಮಹಾರಾಷ್ಟ್ರ ಸರ್ಕಾರ ಬಿಕ್ಕಟ್ಟಿನಲ್ಲಿ ನಮ್ಮ ರಾಜ್ಯದ ಬಿಜೆಪಿ ಮುಖಂಡರ ಪಾತ್ರ ಇಲ್ಲ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲ ಎಂದು ಮಾಜಿ ಡಿಸಿಎಂ ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಪರಮೇಶ್ವರ್, ಮಹಾರಾಷ್ಟ್ರ ಸರ್ಕಾರ ಬೀಳಿಸೋದು ಬಿಜೆಪಿಯ ವ್ಯವಸ್ಥಿತ ಸಂಚು. ಅವರು ಕರ್ನಾಟಕದಲ್ಲೂ ಇದನ್ನೇ ಮಾಡಿದ್ದಾರೆ. ಬೇರೆ ರಾಜ್ಯದಲ್ಲಿಯೂ ಇದನ್ನೇ ಮಾಡಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಅಂತಾ ಹೇಳಿದ್ದಾರೆ.
ಶುಕ್ರವಾರ ಮಹಾರಾಷ್ಟ್ರದಲ್ಲಿ 1,134 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, 3 ಸಾವುಗಳು ವರದಿಯಾಗಿವೆ. ಹೊಸ ಪ್ರಕರಣಗಳ ಪೈಕಿ 763 ಮುಂಬೈನಲ್ಲಿ ಪತ್ತೆಯಾಗಿವೆ ಎಂದು ವರದಿಯಾಗಿದೆ.
7th Pay Commission Latest News: ಸರ್ಕಾರದ ಈ ನಿರ್ಧಾರದಿಂದ ಏಳನೇ ವೇತನ ಆಯೋಗದ ಅಡಿ ಬರುವ ಸರ್ಕಾರಿ ನೌಕರರ ಗ್ರೂಪ್ ಎ ಅಧಿಕಾರಿಗಳ ವೇತನದಲ್ಲಿ ಬಂಪರ್ ಹೆಚ್ಚಳವಾಗಲಿದೆ. ಅಂದರೆ ವೇತನದಲ್ಲಿ ಸುಮಾರು 30 ರಿಂದ 40 ಸಾವಿರ ರೂ.ಗಳವರೆಗೆ ಏರಿಕೆಯಾಗಲಿದೆ.
ಕರೋನವೈರಸ್ನ ಹೊಸ ಓಮಿಕ್ರಾನ್ ರೂಪಾಂತರದಿಂದ ಪ್ರಚೋದಿಸಲ್ಪಟ್ಟ COVID-19 ಪ್ರಕರಣಗಳು ಮಹಾರಾಷ್ಟ್ರದಲ್ಲಿ ಹೆಚ್ಚುತ್ತಲೇ ಇರುವುದರಿಂದ, ರಾಜ್ಯ ಸರ್ಕಾರವು ಭಾನುವಾರದಂದು (ಜನವರಿ 9) ರಾಜ್ಯದಲ್ಲಿ ಅನುಸರಿಸಬೇಕಾದ ಪರಿಷ್ಕೃತ COVID-19 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೋಪೆ ಗುರುವಾರ, ರಾಜ್ಯದಲ್ಲಿ ಕೋವಿಡ್ -19 ಲಸಿಕೆ ಅಭಿಯಾನವನ್ನು ತೀವ್ರಗೊಳಿಸಲು, ಮಹಾರಾಷ್ಟ್ರ ಸರ್ಕಾರವು ಇಂದಿನಿಂದ (ಅಕ್ಟೋಬರ್ 8, 2021) 'ಮಿಷನ್ ಕವಚ ಕುಂಡಲ್' ವಿಶೇಷ ಲಸಿಕೆ ಉಪಕ್ರಮವನ್ನು ಆರಂಭಿಸಲಿದೆ ಎಂದು ಹೇಳಿದರು.
ಕರೋನವೈರಸ್ ಪ್ರಕರಣಗಳಲ್ಲಿನ ಮಾರಣಾಂತಿಕ ಹೆಚ್ಚಳವನ್ನು ಎದುರಿಸಲು ಮಹಾರಾಷ್ಟ್ರ ಸರ್ಕಾರವು "ಬ್ರೇಕ್ ದಿ ಚೈನ್" ಎಂಬ ಶೀರ್ಷಿಕೆಯಡಿ ಸರಣಿ ನಿರ್ಬಂಧಗಳನ್ನು ಬುಧವಾರ ತಡರಾತ್ರಿ ಘೋಷಿಸಿತು.ಈ ನಿಯಮಗಳು ಗುರುವಾರ ರಾತ್ರಿ 8 ರಿಂದ ಜಾರಿಗೆ ಬರಲಿದ್ದು, ಮೇ 1 ರ ಬೆಳಿಗ್ಗೆ 7 ಗಂಟೆಯವರೆಗೆ ಜಾರಿಯಲ್ಲಿರುತ್ತದೆ.
ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ವಿರುದ್ಧದ ಮುಂಬೈ ಪೊಲೀಸ್ ಮುಖ್ಯಸ್ಥ ಪರಮ್ ಬಿರ್ ಸಿಂಗ್ ಅವರ ಆರೋಪಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸುವಂತೆ ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ನಿರ್ದೇಶನ ನೀಡಿರುವ ಬಾಂಬೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.