ಭೋಪಾಲ್: ಇತ್ತೀಚಿನ ದಿನಗಳಲ್ಲಿ ಹಲವು ರಾಜಕೀಯ ನಾಯಕರೂ ಕೂಡ ಕರೋನಾವೈರಸ್ ಹಿಡಿತದಲ್ಲಿ ಸಿಲುಕುತ್ತಿದ್ದಾರೆ. ಇತ್ತೀಚಿಗೆ ಕರ್ನಾಟಕದ ಕೆಲ ರಾಜಕಾರಣಿಗಳಲ್ಲಿ ಕೋವಿಡ್-19 (Covid-19) ದೃಢಪಟ್ಟಿತ್ತು. ಇದೀಗ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ (Shivaraj Singh Chouhan) ಅವರಿಗೂ ಕರೋನಾವೈರಸ್ ದೃಢಪಟ್ಟಿದೆ.
ಗಮನವಿಲ್ಲದವರು ಕರೋನಾವನ್ನು ಆಹ್ವಾನಿಸುತ್ತಾರೆ - ಸಿಎಂ ಶಿವರಾಜ್ ಸಿಂಗ್ ಚೌಹಾಣ್
मेरे प्रिय प्रदेशवासियों, मुझे #COVID19 के लक्षण आ रहे थे, टेस्ट के बाद मेरी रिपोर्ट पॉज़िटिव आई है। मेरी सभी साथियों से अपील है कि जो भी मेरे संपर्क में आए हैं, वह अपना कोरोना टेस्ट करवा लें। मेरे निकट संपर्क वाले लोग क्वारन्टीन में चले जाएँ।
— Shivraj Singh Chouhan (@ChouhanShivraj) July 25, 2020
ಸ್ವಲ್ಪ ಅಸಡ್ಡೆಯೂ ಕರೋನಾವನ್ನು ಆಹ್ವಾನಿಸುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಹೇಳಿದ್ದಾರೆ. ನನಗೆ ಕೋವಿಡ್ -19 ರೋಗಲಕ್ಷಣಗಳು ಕಂಡು ಬಂದ ಬಳಿಕ ಟೆಸ್ಟ್ ಮಾಡಿಸಲಾಯಿತು. ಅದರ ರಿಪೋರ್ಟ್ ಪಾಸಿಟಿವ್ ಎಂದು ಬಂದಿದೆ. ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ತಮ್ಮ ಕರೋನಾ ಪರೀಕ್ಷೆಯನ್ನು ಮಾಡಬೇಕೆಂದು ನನ್ನ ಎಲ್ಲ ಸಹೋದ್ಯೋಗಿಗಳಿಗೆ ನಾನು ಮನವಿ ಮಾಡುತ್ತೇನೆ. ನನಗೆ ಹತ್ತಿರವಿರುವ ಜನರು ಕ್ವಾರೆಂಟೈನ್‌ಗೆ ಹೋಗಬೇಕು ಎಂದು ಮನವಿ ಮಾಡಿದ್ದಾರೆ.
ತಾವು ಕರೋನಾವೈರಸ್ (Coronavirus) ಸೋಂಕಿಗೆ ಒಳಗಾಗಿರುವುದಾಗಿ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಶಿವರಾಜ್ ಸಿಂಗ್ ಚೌಹಾಣ್ ತಾವು COVID-19 ರ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇನೆ. ವೈದ್ಯರ ಸಲಹೆಯ ಪ್ರಕಾರ ನಾನೇ ಕ್ಯಾರೆಂಟೈನ್ ನಲ್ಲಿ ಇದ್ದೇನೆ. ನನ್ನ ರಾಜ್ಯದ ಜನರು ಜಾಗರೂಕರಾಗಿರಿ ಎಂದು ನಾನು ಮನವಿ ಮಾಡುತ್ತೇನೆ, ಸ್ವಲ್ಪ ಅಸಡ್ಡೆ ಕೊರೊನಾವನ್ನು ಆಹ್ವಾನಿಸುತ್ತದೆ.