ನವದೆಹಲಿ : ದೇಶಾದ್ಯಂತ ಹೆಚ್ಚುತ್ತಿರುವ ಹಣದುಬ್ಬರದ ಮಧ್ಯೆ, ಸರ್ಕಾರಿ ತೈಲ ಕಂಪನಿಗಳು ಡಿಸೆಂಬರ್‌ನಲ್ಲಿ ಅಡುಗೆ ಅನಿಲ ದರದಲ್ಲಿ ಪರಿಹಾರ ನೀಡಿವೆ. 1 ಡಿಸೆಂಬರ್ 2020 ರಂದು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರಗಳಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಇದಕ್ಕೂ ಮೊದಲು ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಎಚ್‌ಪಿಸಿಎಲ್, ಬಿಪಿಸಿಎಲ್, ಐಒಸಿ ಎಲ್‌ಪಿಜಿ (LPG) ಸಿಲಿಂಡರ್ ಬೆಲೆಯನ್ನು ಬದಲಾಯಿಸಲಿಲ್ಲ. ಆದರೆ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ (Commercial Gas Cyliner Price) ಬೆಲೆ 55 ರೂ.ವರೆಗೆ ಹೆಚ್ಚಳವಾಗಿದೆ.
ಜುಲೈನಲ್ಲಿ ದೇಶೀಯ ಅನಿಲ ದರಗಳು ಹೆಚ್ಚಾಗಿದೆ:
14 ಕೆಜಿ ಎಲ್‌ಪಿಜಿ ಸಿಲಿಂಡರ್ (LPG Cylinder) ಬೆಲೆಯನ್ನು ಕೊನೆಯದಾಗಿ ಜುಲೈ 2020 ರಲ್ಲಿ ಹೆಚ್ಚಿಸಲಾಯಿತು. ಆ ಸಮಯದಲ್ಲಿ ಗ್ಯಾಸ್ ಸಿಲಿಂಡರ್ (GAS Cylinder) ದರ 4 ರೂಪಾಯಿ ಹೆಚ್ಚಳವಾಗಿತ್ತು. ಅದೇ ಸಮಯದಲ್ಲಿ 14.2 ಕೆಜಿ ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್ ಜೂನ್‌ನಲ್ಲಿ 11.50 ರೂ.ಗಳಷ್ಟು ದುಬಾರಿಯಾಗಿದ್ದರೆ, ಮೇ ತಿಂಗಳಲ್ಲಿ ಇದು 162.50 ರೂ. ಕಡಿಮೆಯಾಗಿತ್ತು.
ಎಲ್‌ಪಿಜಿ ಸಿಲಿಂಡರ್‌ನ ಹೋಂ ಡೆಲಿವರಿ ನಿಯಮದಲ್ಲಿ ಬದಲಾವಣೆ
ಹೊಸ ಎಲ್‌ಪಿಜಿ ಬೆಲೆಗಳು :
ದೇಶದ ಅತಿದೊಡ್ಡ ತೈಲ ಮಾರುಕಟ್ಟೆ ಕಂಪನಿ ಐಒಸಿಯ ವೆಬ್‌ಸೈಟ್‌ನಲ್ಲಿ ನೀಡಿರುವ ಬೆಲೆಯ ಪ್ರಕಾರ ದೆಹಲಿಯಲ್ಲಿ ಸಿಲಿಂಡರ್‌ಗಳ ಬೆಲೆ ಸ್ಥಿರವಾಗಿದೆ. ದೆಹಲಿಯಲ್ಲಿ 14.2 ಕೆಜಿ ಸಬ್ಸಿಡಿ ಗ್ಯಾಸ್ ಸಿಲಿಂಡರ್ ಬೆಲೆ 594 ರೂ. ಅದೇ ಸಮಯದಲ್ಲಿ ಮುಂಬಯಿಯಲ್ಲಿ ಸಬ್ಸಿಡಿ ಸಿಲಿಂಡರ್ ಬೆಲೆ 594 ರೂ. ಚೆನ್ನೈನಲ್ಲಿ ಈ ಬೆಲೆ ಸಿಲಿಂಡರ್‌ಗೆ 610 ರೂ. ಮತ್ತು ಕೋಲ್ಕತ್ತಾದಲ್ಲಿ 14.2 ಕೆಜಿ ಸಿಲಿಂಡರ್ ಬೆಲೆ 620 ರೂ. ಆಗಿದೆ.
ವಾಣಿಜ್ಯ ಸಿಲಿಂಡರ್ ಬೆಲೆ ಹೆಚ್ಚಳ:
19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ ಡಿಸೆಂಬರ್ ತಿಂಗಳಲ್ಲಿ ಹೆಚ್ಚಾಗಿದೆ. ಚೆನ್ನೈನಲ್ಲಿ ಪ್ರತಿ ಸಿಲಿಂಡರ್ ಬೆಲೆಯನ್ನು ಗರಿಷ್ಠ 56 ರೂ.ಗಳಷ್ಟು ಹೆಚ್ಚಿಸಲಾಗಿದೆ. ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್ಗಳಿಗಾಗಿ ಈಗ 1410 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಇದಲ್ಲದೆ ದೇಶದ ರಾಜಧಾನಿಯಲ್ಲಿ ಈ ದರ 55 ರೂಪಾಯಿ ಹೆಚ್ಚಾಗಿದೆ. ಇದರೊಂದಿಗೆ ದೆಹಲಿಯಲ್ಲಿ ಈ ಸಿಲಿಂಡರ್ ದರ 1296 ರೂಪಾಯಿ. ಕೋಲ್ಕತಾ ಮತ್ತು ಮುಂಬೈನಲ್ಲಿ ಸಹ ವಾಣಿಜ್ಯ ಸಿಲಿಂಡರ್ ಬೆಲೆ 55 ರೂ.ಗಳ ಹೆಚ್ಚಳ ಕಂಡಿದೆ, ನಂತರ ಈ ಎರಡು ನಗರಗಳಲ್ಲಿ ಹೊಸ ಬೆಲೆಗಳು ಕ್ರಮವಾಗಿ 1351 ಮತ್ತು 1244 ರೂ. ಇದೆ.
Good News: ಈಗ ನೀವು WhatsApp, SMS ಮೂಲಕ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು
ಎಲ್‌ಪಿಜಿ ಬೆಲೆಯನ್ನು ಎಲ್ಲಿ ಪರಿಶೀಲಿಸಬೇಕು?
ಅಡುಗೆ ಅನಿಲದ ಬೆಲೆಯನ್ನು ಪರಿಶೀಲಿಸಲು ನೀವು ಸರ್ಕಾರಿ ತೈಲ ಕಂಪನಿಯ ವೆಬ್‌ಸೈಟ್‌ಗೆ ಹೋಗಬೇಕಾಗುತ್ತದೆ. ಇಲ್ಲಿನ ಕಂಪನಿಗಳು ಪ್ರತಿ ತಿಂಗಳು ಹೊಸ ದರಗಳನ್ನು ನೀಡುತ್ತವೆ. https://iocl.com/Products/IndaneGas.aspx ಈ ಲಿಂಕ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ನಗರದಲ್ಲಿ ಗ್ಯಾಸ್ ಸಿಲಿಂಡರ್‌ಗಳ ದರವನ್ನು ನೀವು ಪರಿಶೀಲಿಸಬಹುದು.
ಈಗ ದೇಶದ ಯಾವುದೇ ಮೂಲೆಯಿಂದಾದರೂ ಗ್ಯಾಸ್ ಸಿಲಿಂಡರ್‌ಗಳನ್ನು ಬುಕ್ ಮಾಡಿ