Aadhar Card ಕಳೆದುಹೋಗಿದೆಯೇ? PVC ಆಧಾರ್ ಪಡೆಯಲು ಈ ಹಂತ-ಹಂತಗಳನ್ನ ಅನುಸರಿಸಿ!

ಯುಐಡಿಎಐನಿಂದ ನಿಮ್ಮ PVC ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡಿದ ನಂತರ ಅದು ಸುಮಾರು ಎರಡು ವಾರಗಳವರೆಗೆ ಕಾಯಬೇಕಾಗುತ್ತದೆ.

Written by - Channabasava A Kashinakunti | Last Updated : Aug 13, 2021, 11:10 PM IST
  • ಸರ್ಕಾರದ ಎಲ್ಲಾ ಅಧಿಕೃತ ಕೆಲಸಗಳಿಗೆ ಆಧಾರ್ ಕಾರ್ಡ್ ಅತ್ಯಂತ ಮಹತ್ವದ ದಾಖಲೆ
  • ಪಿವಿಸಿ ಅಥವಾ ಪ್ಲಾಸ್ಟಿಕ್ ಆಧಾರ್ ಕಾರ್ಡ್
  • ಒಂದು ವೇಳೆ ನೀವು ಆಧಾರ್ ಕಾರ್ಡ್‌ ಕಳೆದುಕೊಂಡಿದ್ದರೆ, ನೀವು ಚಿಂತಿಸಬೇಕಾಗಿಲ್ಲ
Aadhar Card ಕಳೆದುಹೋಗಿದೆಯೇ? PVC ಆಧಾರ್ ಪಡೆಯಲು ಈ ಹಂತ-ಹಂತಗಳನ್ನ ಅನುಸರಿಸಿ! title=

ನವದೆಹಲಿ : ಸರ್ಕಾರದ ಎಲ್ಲಾ ಅಧಿಕೃತ ಕೆಲಸಗಳಿಗೆ ಆಧಾರ್ ಕಾರ್ಡ್ ಅತ್ಯಂತ ಮಹತ್ವದ ದಾಖಲೆಗಳಲ್ಲಿ ಒಂದಾಗಿದೆ. ರಾಜ್ಯ ಸರ್ಕಾರಗಳ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ನೀಡಲಾಗುವ ಹಲವಾರು ಪ್ರಯೋಜನಗಳನ್ನು ಪಡೆಯಲು ಗುರುತಿನ ಪುರಾವೆಗೆ ಆಧಾರ್ ಕಾರ್ಡ್ ಅಗತ್ಯವಿದೆ. ಒಂದು ವೇಳೆ ನೀವು ಆಧಾರ್ ಕಾರ್ಡ್‌ ಕಳೆದುಕೊಂಡಿದ್ದರೆ, ನೀವು ಚಿಂತಿಸಬೇಕಾಗಿಲ್ಲ, ಏಕೆಂದರೆ ನೀವು ಪಿವಿಸಿ ಅಥವಾ ಪ್ಲಾಸ್ಟಿಕ್ ಆಧಾರ್ ಕಾರ್ಡ್ ಅನ್ನು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ (UIDAI) ಅಧಿಕೃತ ವೆಬ್‌ಸೈಟ್‌ನಿಂದ ಸುಲಭವಾಗಿ ಪಡೆಯಬಹುದು. ಇದಕ್ಕೆ ಯಾವೆಲ್ಲ ಹಂತಗಳನ್ನ ಅನುಸರಿಸಬೇಕು ಇಲ್ಲಿದೆ ನೋಡಿ..

ನೀವು ಮಾಡಬೇಕಾಗಿರುವುದು ನಿಮ್ಮ ಆಧಾರ್ ಕಾರ್ಡ್‌ನ ಪಿವಿಸಿ(PVC Aadhar Card) ಪ್ರತಿಯನ್ನು ಎಲ್ಲಾ ಅಧಿಕೃತ ಉದ್ದೇಶಗಳಿಗಾಗಿ ಬಳಸಬಹುದಾದ ಸರಳ ಕ್ರಮಗಳನ್ನು ಅನುಸರಿಸಿ. ನೀವು ಹೇಗೆ ಅರ್ಜಿ ಸಲ್ಲಿಸಬಹುದು ಎಂಬುದು ಇಲ್ಲಿದೆ 

ಇದನ್ನೂ ಓದಿ : Bharat Biotech ನ ಮೂಗಿನ ಮೂಲಕ ನೀಡಲಾಗುವ Covid-19 ಲಸಿಕೆಯ 2ನೇ ಹಾಗೂ 3ನೇ ಹಂತದ ಪರೀಕ್ಷೆಗೆ ಅನುಮತಿ

1. UIDAI ನ ಅಧಿಕೃತ ವೆಬ್‌ಸೈಟ್‌ಗೆ ಹೋಗಿ https://residentpvc.uidai.gov.in/order-pvcreprint.php

2. ಪುಟದಲ್ಲಿ, ನೀವು ಹೊಸದಾಗಿ ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ನಮೂದಿಸಿ.

3. ಪರದೆಯ ಮೇಲೆ ಭದ್ರತಾ ಕೋಡ್‌ನೊಂದಿಗೆ ನಿಮ್ಮ ಆಧಾರ್ ಕಾರ್ಡ್(Aadhar Card) ವಿವರಗಳನ್ನು ನೀವು ಪರಿಶೀಲಿಸಬೇಕಾಗಿದೆ.

4. ಈಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡ್ ನಲ್ಲಿ ನೋಂದಾಯಿಸಲಾಗಿದೆಯೋ ಇಲ್ಲವೋ ಎಂಬುದನ್ನು ನೀವು ಪರಿಶೀಲಿಸಬೇಕು. ನಿಮ್ಮ ಸಂಖ್ಯೆಯನ್ನು ಈಗಾಗಲೇ ನೋಂದಾಯಿಸಿದ್ದರೆ, ಅಲ್ಲಿ ನೀಡಿರುವ ಬಾಕ್ಸ್ ನಲ್ಲಿ ಗುರುತಿಸಬೇಕು.

ಇದನ್ನೂ ಓದಿ : Liquor Consumption - ಭಾರತದಲ್ಲಿ ಯಾವ ರಾಜ್ಯದಲ್ಲಿ ಅತಿ ಹೆಚ್ಚು ಮದ್ಯಪಾನಿಗಳಿದ್ದಾರೆ ಗೊತ್ತಾ?

5. ನೋಂದಾಯಿಸಿದ ಮೊಬೈಲ್ ನಂಬರ್ ಗೆ OTP ಕಳುಹಿಸು ಬಟನ್ ಮೇಲೆ ಕ್ಲಿಕ್ ಮಾಡಿ.

6. ಆಗ OTP ನಿಮ್ಮ ಮೊಬೈಲ್ ನಂಬರ್(Mobile Number) ಗೆ ಬರುತ್ತದೆ.

7. ಈಗ, ನೀವು PVC ಆಧಾರ್ ಕಾರ್ಡ್ ಶುಲ್ಕವಾಗಿ 50 ರೂ. ಕಟ್ಟಬೇಕು.

8. ಯಶಸ್ವಿ ಪಾವತಿಯ ನಂತರ, ನಿಮ್ಮ ಆದೇಶವನ್ನು UIDAI ಪ್ರಕ್ರಿಯೆಗೊಳಿಸುತ್ತದೆ.

ಇದನ್ನೂ ಓದಿ : Kawasaki Vulcan S 2022 ಕ್ರೂಸರ್ ಬೈಕ್ ಭಾರತದಲ್ಲಿ ಬಿಡುಗಡೆ, ಇಲ್ಲಿವೆ ವೈಶಿಷ್ಟ್ಯಗಳು

ಯುಐಡಿಎಐನಿಂದ ನಿಮ್ಮ PVC ಆಧಾರ್ ಕಾರ್ಡ್ ಅನ್ನು ಆರ್ಡರ್ ಮಾಡಿದ ನಂತರ ಅದು ಸುಮಾರು ಎರಡು ವಾರಗಳವರೆಗೆ ಕಾಯಬೇಕಾಗುತ್ತದೆ.

ಗಮನಾರ್ಹವಾಗಿ, UIDAI ಆಧಾರ್ ಕಾರ್ಡ್ ಅನ್ನು ಭಾರತದಾದ್ಯಂತ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲು ಭಾರತ ಅಂಚೆ ಕಚೇರಿಯೊಂದಿಗೆ ಪಾಲುದಾರಿಕೆ ಹೊಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News