ಸಂಸತ್ ಕಲಾಪಕ್ಕೆ ಮತ್ತೆ ಅಡ್ಡಿ; 19 ಸಂಸದರನ್ನು ಅಮಾನತು ಮಾಡಿದ ಸ್ಪೀಕರ್

ಎಐಎಡಿಎಂಕೆ ಮತ್ತು ಟಿಡಿಪಿ ಸೇರಿದಂತೆ 19 ಮಂದಿ ಸಂಸದರನ್ನು ಅಮಾನತು ಮಾಡಿದ್ದು, ಮುಂದಿನ ಐದು ಕಲಾಪಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದಾರೆ. 

Last Updated : Jan 3, 2019, 04:19 PM IST
ಸಂಸತ್ ಕಲಾಪಕ್ಕೆ ಮತ್ತೆ ಅಡ್ಡಿ; 19 ಸಂಸದರನ್ನು ಅಮಾನತು ಮಾಡಿದ ಸ್ಪೀಕರ್ title=

ನವದೆಹಲಿ: ಸಂಸತ್ತಿನ ಕಲಾಪಕ್ಕೆ ಪದೇ ಪದೇ ಅಡ್ಡಿಯಾಗುತ್ತಿದ್ದುದರಿಂದ ಅಸಮಾಧಾನಗೊಂಡ ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಎಐಎಡಿಎಂಕೆ ಮತ್ತು ಟಿಡಿಪಿ ಸೇರಿದಂತೆ 19 ಮಂದಿ ಸಂಸದರನ್ನು ಅಮಾನತು ಮಾಡಿದ್ದು, ಮುಂದಿನ ಐದು ಕಲಾಪಗಳಲ್ಲಿ ಭಾಗವಹಿಸದಂತೆ ನಿರ್ಬಂಧಿಸಿದ್ದಾರೆ. 

ಈ ಮೂಲಕ ಒಟ್ಟು ಅಮಾನತುಗೊಂಡ ಸಂಸದರ ಸಂಖ್ಯೆ 43ಕ್ಕೆ ಏರಿದೆ. ಮೇಕೆದಾಟು ಯೋಜನೆಗೆ ವಿರೋಧಿಸಿ ಎಐಎಡಿಎಂಕೆ ಸದಸ್ಯರು ಬುಧವಾರ ಲೋಕಸಭೆಯಲ್ಲಿ ಗದ್ದಲ ಆರಂಭಿಸಿದ ಹಿನ್ನೆಲೆಯಲ್ಲಿ ಸಂಸದರನ್ನು ಸ್ಪೀಕರ್ ಅಮಾನತು ಮಾಡಿ ಆದೇಶ ಹೊರಡಿಸಿದ್ದರು. 

ಇವರೊಂದಿಗೆ ಆಂಧ್ರಪ್ರದೇಶದ ಕರ್ನೂಲ್'ನಿಂದ ಆಯ್ಕೆಗೊಂಡ ವೈಎಸ್ಆರ್ ಕಾಂಗ್ರೆಸ್ ಪಕ್ಷದ ರೇಣುಕಾ ಬುಟ್ಟಾ ಅವರನ್ನೂ ಅಮಾನತು ಮಾಡಲಾಗಿದೆ. 39 ಸಂಸದರಲ್ಲಿ ಉಪ ಸಭಾಪತಿ ಎಂ.ತುಂಬಿದೊರೈ ಸೇರಿದಂತೆ ಒಟ್ಟು 31 ಸಂಸದರನ್ನು ಇದುವರೆಗೆ ಅಮಾನತು ಮಾಡಲಾಗಿದೆ. 
 

Trending News