Lok Sabha Election 2024 Survey : 2024ರ ಲೋಕಸಭೆ ಚುನಾವಣೆಗೆ ಇನ್ನು ಹೆಚ್ಚು ಸಮಯವಿಲ್ಲ. ಚುನಾವಣೆಗೆ ಸುಮಾರು ಒಂದು ವರ್ಷ ಬಾಕಿ ಉಳಿದಿದೆ. ಇದೇ ವೇಳೆ ದೇಶದ ಮುಂದಿನ ಪ್ರಧಾನಿ ಹುದ್ದೆಗೆ ಯಾರು ಪ್ರಬಲ ಆಕಾಂಕ್ಷಿ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತಿದೆ. ಸಿ-ವೋಟರ್ ಇತ್ತೀಚೆಗೆ ದೇಶದ ಜನತೆಯ ಮನಸ್ಥಿತಿಯನ್ನು ಅಳೆಯಲು ಮತ್ತು ಪ್ರಸ್ತುತ ಭಾರತದಲ್ಲಿ ಅತ್ಯಂತ ಜನಪ್ರಿಯ ರಾಜಕೀಯ ನಾಯಕ ಯಾರು ಎಂದು ತಿಳಿಯಲು ಸಮೀಕ್ಷೆಯನ್ನು ನಡೆಸಿತು. ಈ ಸಮೀಕ್ಷೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿ
ಸಮೀಕ್ಷೆಯಲ್ಲಿ, ಜವಾಹರಲಾಲ್ ನೆಹರು, ಇಂದಿರಾ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನಮೋಹನ್ ಸಿಂಗ್ ಮತ್ತು ನರೇಂದ್ರ ಮೋದಿಯವರಲ್ಲಿ 'ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿ' ಯಾರೆಂದು ಆಯ್ಕೆ ಮಾಡಲು ಜನರನ್ನು ಕೇಳಲಾಯಿತು. ಈ ಪೈಕಿ ಸಿ-ವೋಟರ್ ಸಮೀಕ್ಷೆಯು ಮೂರು ಹೆಸರುಗಳ ಗರಿಷ್ಠ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ - ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ ಮತ್ತು ಇಂದಿರಾ ಗಾಂಧಿ ಹೆಸರುಗಳು ಕೇಳಿಬಂದಿವೆ.
ಸ್ವತಂತ್ರ ಭಾರತದ ಇದುವರೆಗಿನ 'ಅತ್ಯುತ್ತಮ ಪ್ರಧಾನಿ' ಮೋದಿ!
ಇತ್ತೀಚಿನ ಸಿ-ವೋಟರ್ ಸಮೀಕ್ಷೆಯ ಪ್ರಕಾರ, ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇ.47 ರಷ್ಟು ಜನ ನರೇಂದ್ರ ಮೋದಿ ಅವರನ್ನು "ಸ್ವತಂತ್ರ ಭಾರತದಲ್ಲಿ ಇದುವರೆಗೆ ಅತ್ಯುತ್ತಮ ಪ್ರಧಾನಿ" ಎಂದು ಆಯ್ಕೆ ಮಾಡಿದ್ದಾರೆ.
ವಾಜಪೇಯಿ ಉತ್ತಮ ಪ್ರಧಾನಿ
ಸಿ-ವೋಟರ್ ಸಮೀಕ್ಷೆಯಲ್ಲಿ ಸುಮಾರು ಶೇ.16 ರಷ್ಟು ಜನ ಬಿಜೆಪಿ ಹಿರಿಯ ಮತ್ತು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಉತ್ತಮ ಪ್ರಧಾನಿ ಎಂದು ಆಯ್ಕೆ ಮಾಡಿದ್ದಾರೆ.
ಇಂದಿರಾಗಾಂಧಿ ಇನ್ನೂ ಜನಪ್ರಿಯ
ಸಿ-ವೋಟರ್ ಸಮೀಕ್ಷೆಯಲ್ಲಿ, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು "ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿ" ವಿಭಾಗದಲ್ಲಿ ಶೇ.12 ರಷ್ಟು ಜನ ಇಷ್ಟಪಟ್ಟಿದ್ದಾರೆ.
ನೆಹರೂಗೆ ಸಮೀಕ್ಷೆಯಲ್ಲಿ ನಾಲ್ಕನೇ ಸ್ಥಾನ
ಜವಾಹರಲಾಲ್ ನೆಹರು ಅವರು 'ಸ್ವತಂತ್ರ ಭಾರತದ ಅತ್ಯುತ್ತಮ ಪ್ರಧಾನಿ' ವಿಭಾಗದಲ್ಲಿ ನಾಲ್ಕನೇ ಆಯ್ಕೆಯಾಗಿದ್ದು, ಶೇ. 9 ರಷ್ಟನ್ನು ಪಡೆದಿದ್ದಾರೆ.
ಸ್ವತಂತ್ರ ಭಾರತದ 5ನೇ ಅತ್ಯುತ್ತಮ ಪ್ರಧಾನಿ ಮನಮೋಹನ್
ಸಿ-ವೋಟರ್ ಸಮೀಕ್ಷೆಯಲ್ಲಿ ಕೇವಲ ಶೇ.8 ರಷ್ಟು ಜನ ಮನಮೋಹನ್ ಸಿಂಗ್ ಅವರನ್ನು ಉತ್ತಮ ಪ್ರಧಾನಿ ಎಂದು ಆಯ್ಕೆ ಮಾಡಿದ್ದಾರೆ.
ಪ್ರಧಾನಿ ಮೋದಿಯವರ ಜನಪ್ರಿಯತೆಯ ಕುಸಿತ
ಸಿ-ವೋಟರ್ ಸಮೀಕ್ಷೆಯು ಪ್ರಧಾನಿ ಮೋದಿಯವರ ಜನಪ್ರಿಯತೆಯಲ್ಲಿ ಕುಸಿತ ಕಂಡಿದೆ. ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ನಿತೀಶ್ ಕುಮಾರ್ ಮತ್ತು ರಾಹುಲ್ ಗಾಂಧಿಗೆ ಹೋಲಿಸಿದರೆ ಅವರ ಪರವಾಗಿ ಶೇ. 52 ರಷ್ಟು ಮತಗಳನ್ನು ಗಳಿಸುವ ಮೂಲಕ ಪ್ರಧಾನಿ ಹುದ್ದೆಗೆ ಅವರು ಇನ್ನೂ ಹೆಚ್ಚು ಆದ್ಯತೆಯ ಆಯ್ಕೆಯಾಗಿದ್ದಾರೆ. ಕಳೆದ ವರ್ಷ ಇದೇ ಸಮೀಕ್ಷೆಯಲ್ಲಿ ಪಿಎಂ ಮೋದಿ ಅವರು ಸುಮಾರು ಶೇ.53 ರಷ್ಟು ಪ್ರತಿಕ್ರಿಯಿಸಿದವರಲ್ಲಿ ಅಗ್ರ ಆಯ್ಕೆಯಾಗಿದ್ದರು.
ರಾಹುಲ್ ಗಾಂಧಿಯವರ ಜನಪ್ರಿಯತೆಯ ಏರಿಕೆ
ಕುತೂಹಲಕಾರಿ ಸಂಗತಿಯೆಂದರೆ ಭಾರತ್ ಜೋಡೋ ಯಾತ್ರೆಯಿಂದಾಗಿ ರಾಹುಲ್ ಗಾಂಧಿ ಜನಪ್ರಿಯತೆಯಲ್ಲಿ ಏರಿಕೆ ಕಂಡು ಬಂದಿದೆ. ಸುಮಾರು ಶೇ.14 ರಷ್ಟು ಜನ ಪ್ರಧಾನಿ ಹುದ್ದೆಗೆ ತಮ್ಮ 'ಉನ್ನತ ಆಯ್ಕೆ' ಎಂದು ಬಯಸಿದ್ದಾರೆ, ಆದರೆ ಕಳೆದ ವರ್ಷ ಕೇವಲ ಶೇ.9 ರಷ್ಟು ಜನ ಮಾತ್ರ ರಾಹುಲ್ ಗಾಂಧಿ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.