Liquor Smuggling : 'Pushpa' ಸ್ಟೈಲ್ ನಲ್ಲಿ ಕಳ್ಳತನಕ್ಕೆ ಯತ್ನ, ಮುಂದೆ ನಡೆದಿದ್ದೆ ಬೇರೆ

Liquor Smuggling Racket Busted: ಪೊಲೀಸರ ವಿಚಾರಣೆ ವೇಳೆ ಇಬ್ಬರೂ ರಾಜವೀರ್ ಮತ್ತು ಅನಿಲ್ ಶರ್ಮಾ ಅವರಿಗಾಗಿ ತಾವು ಈ ಕೆಲಸವನ್ನು ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೊದಲಿಗೆ, ಟ್ಯಾಂಕರ್‌ನಲ್ಲಿ ಏನಿದೆ ಎಂಬುದೇ ನನಗೆ ತಿಳಿದಿಲ್ಲ ಎಂದು ಚಾಲಕ ನೇಪಾಲ್ ಸಿಂಗ್ ಹೇಳಿದ್ದಾನೆ. ಇದಾದ ಬಳಿಕ ಪೊಲೀಸರು ತಮ್ಮ ತೀವ್ರ ನಿಗಾವಹಿಸಿ ಪ್ರಕರಣವನ್ನು ಭೇದಿಸಿದ್ದಾರೆ.  

Written by - Nitin Tabib | Last Updated : Feb 28, 2022, 01:41 PM IST
  • ಕಳ್ಳಸಾಗಣೆದಾರರ ಸಂಚು ವಿಫಲ
  • Smuggler ಗಳ ಟ್ರಿಕ್ ಕೆಲಸ ಮಾಡಲಿಲ್ಲ
  • ಪುಷ್ಪಾ ಚಿತ್ರದ ಆಲೋಚನೆ ವಿಫಲವಾಗಿದೆ
Liquor Smuggling : 'Pushpa' ಸ್ಟೈಲ್ ನಲ್ಲಿ ಕಳ್ಳತನಕ್ಕೆ ಯತ್ನ, ಮುಂದೆ ನಡೆದಿದ್ದೆ ಬೇರೆ title=
Liquor Smuggling (File Photo)

ಆಗ್ರಾ: Liquor Smuggling Racket Busted In Agra - ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಹಿನ್ನೆಲೆ ಮದ್ಯ ಕಳ್ಳಸಾಗಣೆದಾರರು (Liquor Smuggling In UP Election 2022ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಎಲ್ಲ ತಂತ್ರಗಳನ್ನು ಅನುಸರಿಸುತ್ತಿದ್ದಾರೆ. ಅವಕಾಶವನ್ನು ಬಳಸಿಕೊಂಡು, ಅವರು ತಮ್ಮ ಸರಕುಗಳ ಮಾರಾಟಕ್ಕೆ ಹುನ್ನಾರ ನಡೆಸಿದ್ದಾರೆ. ಇತ್ತೀಚಿನ ಪ್ರಕರಣದಲ್ಲಿ, ಮದ್ಯ ಕಳ್ಳಸಾಗಣೆದಾರರು (Wine In Oil Tanker) ಈ ಬಾರಿ ಇತ್ತೀಚೆಗೆ ಬಿಡುಗಡೆಯಾದ ದಕ್ಷಿಣದ ಪ್ರಸಿದ್ಧ ಚಲನಚಿತ್ರ ಪುಷ್ಪಾ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಟ್ಯಾಂಕರ್ ಅನ್ನು ಒಳಗಿನಿಂದ ಎರಡು ಭಾಗಗಳಾಗಿ ವಿಂಗಡಿಸಿದ ನಂತರ ಆರೋಪಿಗಳು ಬಾಕ್ಸ್‌ಗಳಲ್ಲಿ ಒಂದರಲ್ಲಿ ರಾಸಾಯನಿಕ ಮತ್ತು ಮದ್ಯವನ್ನು ತುಂಬಿದ್ದರು.

ಟ್ಯಾಂಕರ್ ನಲ್ಲಿದ್ದ 360 ಬಾಕ್ಸ್ ಮದ್ಯ ವಶಪಡಿಸಿಕೊಳ್ಳಲಾಗಿದೆ
ಮಾಧ್ಯಮ ವರದಿಗಳ ಪ್ರಕಾರ, ಪೂರ್ವಾಂಚಲ್ ಜಿಲ್ಲೆಗಳಲ್ಲಿ ಟ್ಯಾಂಕರ್‌ನಲ್ಲಿ ಮದ್ಯವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡುತ್ತಿರುವ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಟ್ಯಾಂಕರ್ ಐಎಸ್‌ಬಿಟಿ ಮತ್ತು ಟ್ರಾನ್ಸ್‌ಪೋರ್ಟ್ ನಗರ ಸುತ್ತಮುತ್ತ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ನಂತರ ತೀವ್ರ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ. ಕಳ್ಳಸಾಗಣೆ ಪ್ರಕರಣ ಭೇದಿಸಿದ ಬಳಿಕ ಪೊಲೀಸರು ಟ್ಯಾಂಕರ್ ಚಾಲಕ ಸೇರಿದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮುಜಾಫರ್‌ನಗರದ ಕುಲದೀಪ್ ಮತ್ತು ಹರಿಯಾಣದ ರೋಹ್ಟಕ್ ಜಿಲ್ಲೆಯ ನಿವಾಸಿ ನೇಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ-EPFO : 24 ಕೋಟಿ PF ಖಾತೆದಾರರಿಗೆ ಸಿಹಿ ಸುದ್ದಿ! EPF ಮೇಲಿನ ಬಡ್ಡಿ ಹೆಚ್ಚಿಸಲು ಮೋದಿ ಸರ್ಕಾರ ನಿರ್ಧಾರ

ಪ್ರಮುಖ ಆರೋಪಿಗಾಗಿ ಮುಂದುವರೆದ ಶೋಧ ಕಾರ್ಯಾಚರಣೆ 
ಪೊಲೀಸರ ವಿಚಾರಣೆಯ ವೇಳೆ ಬಂಧಿತ ಆರೋಪಿಗಳಿಬ್ಬರು ತಾವು ರಾಜವೀರ್ ಮತ್ತು ಅನಿಲ್ ಶರ್ಮಾ ಅವರಿಗಾಗಿ ಇದೆಲ್ಲವನ್ನೂ ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಮೊದಲಿಗೆ, ಟ್ಯಾಂಕರ್‌ನಲ್ಲಿ ಏನಿದೆ ಎಂಬುದೇ ನನಗೆ ತಿಳಿದಿಲ್ಲ ಎಂದು ಚಾಲಕ ನೇಪಾಲ್ ಸಿಂಗ್ ಹೇಳಿದ್ದಾನೆ. ಇದೇ ವೇಳೆ ಟ್ಯಾಂಕರ್ ನಲ್ಲಿ ರಾಸಾಯನಿಕಗಳನ್ನು ತುಂಬಿಸಲಾಗಿದೆ ಎಂದು ಅವರ ಸಹಚರ ಕುಲದೀಪ್ ಹೇಳಿದ್ದಾರೆ. ಸಿಮೆಂಟ್ ಗಟ್ಟಿಯಾಗಿಸುವ ಕೆಮಿಕಲ್ ಹೆಸರಿನಲ್ಲಿ ಮಾಡಿದ್ದ ಬಿಲ್ ಅನ್ನು ಪೊಲೀಸರಿಗೆ ಅವನು ತೋರಿಸಿದ್ದಾನೆ. ಅದರ ನಂತರ ಪೊಲೀಸರು ಟ್ಯಾಂಕರ್ ಅನ್ನು ತನ್ನದೇ ಆದ ರೀತಿಯಲ್ಲಿ ವಶಕ್ಕೆ ಪಡೆದಿದ್ದಾರೆ, ಆಗ ಅದರಲ್ಲಿ ಮೂರು ವಿಭಾಗಗಳು ಕಂಡುಬಂದಿವೆ. ಒಂದು ಭಾಗದಲ್ಲಿ ರಾಸಾಯನಿಕಗಳಿಂದ ತುಂಬಿದ್ದು, ಇನ್ನೆರಡು ಕಂಪಾರ್ಟ್‌ಮೆಂಟ್‌ಗಳಲ್ಲಿ ಮದ್ಯವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು.

ಇದನ್ನೂ ಓದಿ-Ukraine Crisis: PM Modiಯಿಂದ ಉನ್ನತ ಮಟ್ಟದ ಸಭೆ

ಈ ಐಡಿಯಾ ಬಂದಿದ್ದು ಪುಷ್ಪಾ ಚಿತ್ರದಿಂದ
ವಿಚಾರಣೆ ವೇಳೆ ಆರೋಪಿಗಳು ಪುಷ್ಪ ಚಿತ್ರದ ಮೂಲಕ ಟ್ಯಾಂಕರ್‌ನಲ್ಲಿ ಮದ್ಯ ಸಾಗಾಟ ಮಾಡುವ ಐಡಿಯಾ ಸಿಕ್ಕಿತ್ತು ಎಂದು ತಿಳಿಸಿದ್ದಾರೆ. ಹರಿಯಾಣದ ಹಿಸಾರ್ ಜಿಲ್ಲೆಯಿಂದ ಮದ್ಯ ಸಾಗಿಸಲಾಗುತ್ತಿತ್ತು ಎಂದು ಆರೋಪಿಗಳು ಹೇಳಿದ್ದಾರೆ. ಪೂರ್ವಾಂಚಲ, ಗೋರಖ್‌ಪುರ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಇದನ್ನು ಮಾರಾಟ ಮಾಡಬೇಕಿತ್ತು. ಪೂರ್ವಾಂಚಲ್‌ನಲ್ಲಿ ಆರು ಮತ್ತು ಏಳನೇ ಸುತ್ತಿನ ಮತದಾನಕ್ಕೂ ಮುನ್ನ ಮದ್ಯದ ಬೇಡಿಕೆ ಹೆಚ್ಚಾಗಿದೆ ಎಂಬುದು ಇಲ್ಲಿ ಗಮನಾರ್ಹ. ಈ ಕ್ರಮದಲ್ಲಿ ಹರಿಯಾಣದಲ್ಲಿ ತಯಾರಾದ 360 ಅಕ್ರಮ ಮದ್ಯದ ಬಾಕ್ಸ್‌ಗಳು, ದೇಶೀಯ ಮದ್ಯದ ಕೆಲವು ಬಾಕ್ಸ್ಗಳು , 75 ಬಾರ್‌ಕೋಡ್‌ಗಳು ಮತ್ತು ಕೆಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ (Alcohal Recover).  ಪ್ರಸ್ತುತ ಪ್ರಮುಖ ಆರೋಪಿಗಳ ಬಂಧನಕ್ಕೆ ಪೊಲೀಸರು ಜಾಲಬೀಸಿದ್ದಾರೆ.

ಇದನ್ನೂ ಓದಿ-ಇನ್ನೂ ಮುಗಿದಿಲ್ಲ ಕರೋನಾ ಆಟ, ಎದುರಾಗಲಿದೆ ನಾಲ್ಕನೇ ಅಲೆಯ ಸಂಕಟ , ತಜ್ಞರು ಹೇಳಿದ್ದೇನು ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News