ಈ ರಾಜ್ಯದಲ್ಲಿ ಐದು ತಿಂಗಳ ಬಳಿಕ ಮದ್ಯದಂಗಡಿ ತೆರೆಯಲು ನಡೆದಿದೆ ಸಿದ್ಧತೆ

ಆದಾಗ್ಯೂ ಕಂಟೈನ್‌ಮೆಂಟ್ ವಲಯ ಮತ್ತು ಮಾಲ್‌ನಲ್ಲಿರುವ ಅಂಗಡಿಗಳು ಸದ್ಯಕ್ಕೆ ಮುಚ್ಚಲ್ಪಡುತ್ತವೆ.

Last Updated : Aug 17, 2020, 09:35 AM IST
  • ಆಗಸ್ಟ್ 18 ರಿಂದ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟ್ಯಾಸ್ಮಾಕ್) ಅಂಗಡಿಗಳನ್ನು ತೆರೆಯಲಾಗುವುದು ಎಂದು ಸರ್ಕಾರ ಭಾನುವಾರ ತಿಳಿಸಿದೆ.
  • ಸುಮಾರು ಐದು ತಿಂಗಳ ನಂತರ ತೆರೆಯಲು ಹೊರಟಿದ್ದ ಅಂಗಡಿಗಳಿಗೆ ವಿಶೇಷ ಸಿದ್ಧತೆ
  • ಕರೋನಾ ತಡೆಗಟ್ಟಲು ಅನ್ವಯವಾಗುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸ್ಪಷ್ಟ ಸೂಚನೆಗಳನ್ನು ನೀಡಿದೆ.
ಈ ರಾಜ್ಯದಲ್ಲಿ ಐದು ತಿಂಗಳ ಬಳಿಕ ಮದ್ಯದಂಗಡಿ ತೆರೆಯಲು ನಡೆದಿದೆ ಸಿದ್ಧತೆ title=

ಚೆನ್ನೈ: ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಚೆನ್ನೈನಲ್ಲಿ ಮುಚ್ಚಿದ ಮದ್ಯದಂಗಡಿಗಳನ್ನು (Liquor Shops) ಮತ್ತೆ ತೆರೆಯಲು ಸಿದ್ಧತೆಗಳು ನಡೆಯುತ್ತಿವೆ. ಆಗಸ್ಟ್ 18 ರಿಂದ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮದ (ಟ್ಯಾಸ್ಮಾಕ್) ಅಂಗಡಿಗಳನ್ನು ತೆರೆಯಲಾಗುವುದು ಎಂದು ಸರ್ಕಾರ ಭಾನುವಾರ ತಿಳಿಸಿದೆ. ಆದಾಗ್ಯೂ ಕಂಟೈನ್‌ಮೆಂಟ್ ವಲಯ ಮತ್ತು ಮಾಲ್‌ನಲ್ಲಿರುವ ಅಂಗಡಿಗಳು ಸದ್ಯಕ್ಕೆ ಮುಚ್ಚಲ್ಪಡುತ್ತವೆ.

ಸುಮಾರು ಐದು ತಿಂಗಳ ನಂತರ ತೆರೆಯಲು ಹೊರಟಿದ್ದ ಅಂಗಡಿಗಳಿಗೆ ವಿಶೇಷ ಸಿದ್ಧತೆಗಳನ್ನು ಮಾಡಲಾಯಿತು. ಕರೋನಾ ತಡೆಗಟ್ಟಲು ಅನ್ವಯವಾಗುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸರ್ಕಾರ ಸ್ಪಷ್ಟ ಸೂಚನೆಗಳನ್ನು ನೀಡಿದೆ. ಟ್ಯಾಸ್ಮಾಕ್ ಪ್ರಕಾರ, ಬೆಳಿಗ್ಗೆ 10 ರಿಂದ ಸಂಜೆ 7 ರವರೆಗೆ ಮದ್ಯದಂಗಡಿಗಳು ತೆರೆದಿರುತ್ತವೆ ಮತ್ತು ದಿನಕ್ಕೆ 500 ಟೋಕನ್ಗಳನ್ನು ಮಾತ್ರ ನೀಡಲಾಗುತ್ತದೆ.

ಆಗಸ್ಟ್ 18 ರಿಂದ ಚೆನ್ನೈನಲ್ಲಿ ಮತ್ತೆ ಮದ್ಯದಂಗಡಿಗಳನ್ನು ತೆರೆಯಲಾಗುತ್ತಿದೆ ಎಂದು ತಮಿಳುನಾಡಿನಲ್ಲಿ ಆಡಳಿತ ಪಕ್ಷದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇಟಾ ಕಢಾಗಂ (AIADMK) ಯ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಬರೆಯಲಾಗಿದೆ. ಚೆನ್ನೈನಲ್ಲಿ ಕರೋನಾವೈರಸ್ (Coronavirus) ಪ್ರಕರಣಗಳ ಕುಸಿತವನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಟಾಸ್ಮಾಕ್ ಮ್ಯಾನೇಜ್ಮೆಂಟ್ ಹೊರಡಿಸಿದ ಪತ್ರಿಕಾ ಪ್ರಕಟಣೆಯನ್ನು ಪಕ್ಷವು ಹಂಚಿಕೊಂಡಿದೆ, ಇದು COVID-19 ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಸಹ ಉಲ್ಲೇಖಿಸುತ್ತದೆ. ಟಾಸ್ಮಾಕ್ ತಮಿಳುನಾಡಿನಲ್ಲಿ ಭಾರತೀಯ ನಿರ್ಮಿತ ವಿದೇಶಿ ಮದ್ಯದ ಏಕೈಕ ಚಿಲ್ಲರೆ ವ್ಯಾಪಾರಿ.

ಮದ್ಯದಂಗಡಿಗಳಿಗೆ ಭೇಟಿ ನೀಡುವವರು ಅನಿವಾರ್ಯವಾಗಿ ಫೇಸ್ ಮಾಸ್ಕ್ ಹಾಕಿಕೊಳ್ಳಬೇಕು ಮತ್ತು ಸಾಮಾಜಿಕ ದೂರವನ್ನು ಅನುಸರಿಸಬೇಕಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಮೊದಲು ಮೇ 7 ರಿಂದ ಉಳಿದ ತಮಿಳುನಾಡಿನ ಮದ್ಯದಂಗಡಿಗಳನ್ನು ತೆರೆಯಲಾಗುತ್ತಿತ್ತು, ಆದರೆ ಕರೋನಾ ಏಕಾಏಕಿ ದೃಷ್ಟಿಯಿಂದ ಚೆನ್ನೈ ಮತ್ತು ಇತರ ಉಪನಗರ ಪ್ರದೇಶಗಳಲ್ಲಿನ ಅಂಗಡಿಗಳನ್ನು ಮುಚ್ಚಲಾಗಿತ್ತು.

ಈಗ ಚೆನ್ನೈನಲ್ಲಿ ಕರೋನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ, ಸರ್ಕಾರವು ಮದ್ಯದಂಗಡಿಗಳನ್ನು ಮತ್ತೆ ತೆರೆಯಲು ಹೊರಟಿದೆ. ವಿಶೇಷವೆಂದರೆ ಕರೋನಾವನ್ನು ಎದುರಿಸಲು ಮಾರ್ಚ್ 24 ರಂದು ಚೆನ್ನೈ ಸೇರಿದಂತೆ ಇಡೀ ರಾಜ್ಯದಲ್ಲಿ ಟ್ಯಾಸ್ಮಾಕ್ ಅಂಗಡಿಗಳನ್ನು ಮುಚ್ಚಲಾಯಿತು.

Trending News