ಭಾರತವನ್ನು ನಾಶ ಮಾಡುವ ಮೊದಲೇ ಭ್ರಷ್ಟಾಚಾರ ಕೊನೆಗೊಳಿಸೋಣ!

ಸರ್ಕಾರ ಅದೆಷ್ಟೋ ಬಾರಿ ತನ್ನ ವೆಚ್ಚಗಳ ಕುರಿತು ಅಥವಾ ನಿರ್ಧಾರ ಕೈಗೊಳ್ಳುವ ವಿಧಾನದ ಕುರಿತು ಮಾಹಿತಿ ಬಹಿರಂಗಪಡಿಸುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಎಲ್ಲಿ ಮತ್ತು ಹೇಗೆ ನಡೆಯುತ್ತಿದೆ ಎನ್ನುವುದನ್ನು ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ.

Written by - Girish Linganna | Edited by - Yashaswini V | Last Updated : Jun 5, 2023, 10:35 AM IST
  • ಸರ್ಕಾರ ಮಾಡುವ ವೆಚ್ಚದಲ್ಲಿ ಬಹುತೇಕ 40%ದಷ್ಟು ಭ್ರಷ್ಟಾಚಾರಕ್ಕೆ ಸೋರಿಕೆಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.
  • ಭ್ರಷ್ಟಾಚಾರದ ಹೆಚ್ಚಳದಿಂದ ಸಮಾಜದ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ.
  • ಭ್ರಷ್ಟಾಚಾರ ಮಾರುಕಟ್ಟೆಯನ್ನು ಹಾಳುಗೆಡವಿ, ಹೂಡಿಕೆದಾರರನ್ನು ನಿರುತ್ತೇಜನಗೊಳಿಸುತ್ತದೆ. ಇದರ ಪರಿಣಾಮವಾಗಿ ಆರ್ಥಿಕ ಅಭಿವೃದ್ಧಿ ನಿಧಾನಗೊಳ್ಳುತ್ತದೆ.
ಭಾರತವನ್ನು ನಾಶ ಮಾಡುವ ಮೊದಲೇ ಭ್ರಷ್ಟಾಚಾರ ಕೊನೆಗೊಳಿಸೋಣ! title=

Fight Against Corruption: ಭಾರತದಲ್ಲಿ ಭ್ರಷ್ಟಾಚಾರ ಎನ್ನುವುದು ಒಂದು ಅತಿದೊಡ್ಡ ತೊಂದರೆಯಾಗಿದೆ. ಹಾಗೆಂದು ಸರ್ಕಾರಿ ಅಧಿಕಾರಿಗಳನ್ನು ಇಲ್ಲಿ ಅವರ ನಡೆಗಳಿಗೆ ಜವಾಬ್ದಾರರನ್ನಾಗಿಸುವುದೂ ಕಷ್ಟಸಾಧ್ಯವಾಗಿದೆ. ಅದಕ್ಕೆ ಹಲವಾರು ಕಾರಣಗಳೂ ಇವೆ. ಅವುಗಳೆಂದರೆ,

ದುರ್ಬಲ ಕಾನೂನುಗಳು ಮತ್ತು ಕಾನೂನು ಜಾರಿ: ಭ್ರಷ್ಟಾಚಾರದ ವಿರುದ್ಧ ಭಾರತದ ಕಾನೂನುಗಳು ಸಾಕಷ್ಟು ದುರ್ಬಲವಾಗಿವೆ. ಇರುವ ಕಾನೂನುಗಳನ್ನು ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿಯ ಕೊರತೆಯೂ ಭಾರತದಲ್ಲಿದೆ.

ಪಾರದರ್ಶಕತೆಯ ಕೊರತೆ: ಸರ್ಕಾರ ಅದೆಷ್ಟೋ ಬಾರಿ ತನ್ನ ವೆಚ್ಚಗಳ ಕುರಿತು ಅಥವಾ ನಿರ್ಧಾರ ಕೈಗೊಳ್ಳುವ ವಿಧಾನದ ಕುರಿತು ಮಾಹಿತಿ ಬಹಿರಂಗಪಡಿಸುವುದಿಲ್ಲ. ಇದರಿಂದಾಗಿ ಭ್ರಷ್ಟಾಚಾರ ಎಲ್ಲಿ ಮತ್ತು ಹೇಗೆ ನಡೆಯುತ್ತಿದೆ ಎನ್ನುವುದನ್ನು ಪತ್ತೆಹಚ್ಚುವುದು ಕಷ್ಟಕರವಾಗುತ್ತದೆ.

ಕೆಟ್ಟ ಆಡಳಿತ: ಸರ್ಕಾರಗಳೂ ಅದೆಷ್ಟೋ ಬಾರಿ ಅಸಮರ್ಥವಾಗಿದ್ದು, ಅಸಮರ್ಪಕ ಆಡಳಿತ ನೀಡುತ್ತವೆ. ಇದು ಭ್ರಷ್ಟಾಚಾರಕ್ಕೆ ಮಾರ್ಗ ಮಾಡಿಕೊಡುತ್ತದೆ.

ಇದನ್ನೂ ಓದಿ- ದ್ವೇಷ ಭಾಷಣಗಳು ನಿಮ್ಮ ರಾಜಕೀಯ ಪಕ್ಷಗಳನ್ನು ಹಾಳು ಮಾಡದಿರಲಿ!

ಭ್ರಷ್ಟರಲ್ಲಿ ನಿರ್ಭೀತಿ: ಸರ್ಕಾರಿ ಅಧಿಕಾರಿಗಳು ಕಾನೂನಿಗೆ ಅತೀತರು ಎಂಬ ಸುಳ್ಳು ನಂಬಿಕೆ ಜನರಲ್ಲಿ ಬೇರೂರಿ ಬಿಟ್ಟಿದೆ. ಈ ಕಾರಣದಿಂದಲೂ ಜನರು ಭ್ರಷ್ಟ ಅಧಿಕಾರಿಗಳ ಕುರಿತು ದೂರು ನೀಡಲೂ ಹಿಂಜರಿಯುತ್ತಾರೆ.

ಈ ಎಲ್ಲ ಕಾರಣಗಳಿಂದಾಗಿ ಭಾರತದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಸರ್ಕಾರ ಮಾಡುವ ವೆಚ್ಚದಲ್ಲಿ ಬಹುತೇಕ 40%ದಷ್ಟು ಭ್ರಷ್ಟಾಚಾರಕ್ಕೆ ಸೋರಿಕೆಯಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಭ್ರಷ್ಟಾಚಾರದ ಹೆಚ್ಚಳದಿಂದ ಸಮಾಜದ ಮೇಲೆ ಸಾಕಷ್ಟು ಋಣಾತ್ಮಕ ಪರಿಣಾಮಗಳು ಉಂಟಾಗುತ್ತವೆ. ಅವೆಂದರೆ:

ಆರ್ಥಿಕ ಅಭಿವೃದ್ಧಿ ಕುಂಠಿತ: ಭ್ರಷ್ಟಾಚಾರ ಮಾರುಕಟ್ಟೆಯನ್ನು ಹಾಳುಗೆಡವಿ, ಹೂಡಿಕೆದಾರರನ್ನು ನಿರುತ್ತೇಜನಗೊಳಿಸುತ್ತದೆ. ಇದರ ಪರಿಣಾಮವಾಗಿ ಆರ್ಥಿಕ ಅಭಿವೃದ್ಧಿ ನಿಧಾನಗೊಳ್ಳುತ್ತದೆ.

ಬಡತನದ ಹೆಚ್ಚಳ: ಭ್ರಷ್ಟಾಚಾರ ಸಂಪನ್ಮೂಲಗಳನ್ನು ಅಗತ್ಯ ಸೇವೆಗಳಾದ ಶಿಕ್ಷಣ, ಆರೋಗ್ಯ ಮತ್ತಿತರ ಕ್ಷೇತ್ರಗಳಿಗೆ ಪೂರ್ಣವಾಗಿ ಲಭಿಸದಂತೆ ಮಾಡುತ್ತದೆ. ಇದರಿಂದಾಗಿ ಜನರು ಬಡತನಮಟ್ಟದಿಂದ ಮೇಲೆ ಬರಲು ಕಷ್ಟಸಾಧ್ಯವಾಗುತ್ತದೆ.

ಅಸಮಾನತೆ: ಭ್ರಷ್ಟಾಚಾರದ ಪರಿಣಾಮವಾಗಿ ಸಾಮಾಜಿಕ ಅಶಾಂತಿ ಮತ್ತು ಅಸಮಾನತೆ ತಲೆದೋರುತ್ತದೆ. ಇದು ರಾಜಕೀಯ ಅಸ್ಥಿರತೆಗೂ ದಾರಿ ಮಾಡಿಕೊಡುತ್ತದೆ.

ಇದನ್ನೂ ಓದಿ- ಭಾರತೀಯ ಉದ್ಯೋಗಿಗಳಿಗಿದೆ ಗುಣಮಟ್ಟದ ತರಬೇತಿಯ ಕೊರತೆ

ಭಾರತದಲ್ಲಿ ಭ್ರಷ್ಟಾಚಾರ ಕಡಿಮೆಗೊಳಿಸಲು ಸಾಕಷ್ಟು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬಹುದು. ಅವೆಂದರೆ:

ಕಾನೂನನ್ನು ಬಲಪಡಿಸುವುದು: ಭಾರತ ಭ್ರಷ್ಟಾಚಾರದ ವಿರುದ್ಧದ ತನ್ನ ಕಾನೂನುಗಳನ್ನು ಬಲಪಡಿಸಬೇಕು ಹಾಗೂ ಅವುಗಳನ್ನು ಜಾರಿಗೆ ತರುವುದನ್ನು ಸುಲಭವಾಗಿಸಬೇಕು.

ಆಡಳಿತದಲ್ಲಿ ಪಾರದರ್ಶಕತೆ: ಸರ್ಕಾರ ತನ್ನ ಖರ್ಚು ಮತ್ತು ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಪಾರದರ್ಶಕತೆ ತರಬೇಕು.

ಆಡಳಿತದ ಉತ್ತಮಪಡಿಸುವಿಕೆ: ಸರ್ಕಾರ ಹೆಚ್ಚು ಉತ್ತಮವಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು. ಅದರೊಡನೆ, ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಸಂಸ್ಕೃತಿಯನ್ನು ಸರ್ಕಾರಿ ಅಧಿಕಾರಿಗಳಲ್ಲಿ ಮೂಡಿಸಬೇಕು.

ಸರ್ಕಾರಿ ಸಂಸ್ಕೃತಿಯ ಬದಲಾವಣೆ: ಸರ್ಕಾರ ಭ್ರಷ್ಟರಲ್ಲಿ ಭಯ ಮೂಡಿಸುವಂತೆ ಕಾರ್ಯಾಚರಿಸಬೇಕು. ಆಗ ಭ್ರಷ್ಟಾಚಾರ ಇಷ್ಟು ತಾಂಡವವಾಡಲು ಸಾಧ್ಯವಾಗುವುದಿಲ್ಲ. ಇದನ್ನು ಉತ್ತಮ ಶಿಕ್ಷಣ, ಜಾಗೃತಿ ಕಾರ್ಯಕ್ರಮಗಳು ಹಾಗೂ ಕಾನೂನು ಬಲಪಡಿಸುವ ಮೂಲಕ ಸಾಧಿಸಬಹುದು.

ಭ್ರಷ್ಟಾಚಾರ ಒಂದು ಸಂಕೀರ್ಣ ಸಮಸ್ಯೆಯಾಗಿದ್ದು, ಇದಕ್ಕೆ‌ ಯಾವುದೇ ಸುಲಭ - ಸರಳ ಪರಿಹಾರ ಲಭ್ಯವಿಲ್ಲ. ಆದರೆ, ಕಾನೂನುಗಳನ್ನು ಬಲಪಡಿಸುವ, ಆಡಳಿತದಲ್ಲಿ ಪಾರದರ್ಶಕತೆ ತರುವ, ಆಡಳಿತವನ್ನು ಉತ್ತಮಪಡಿಸುವ, ಹಾಗೂ ಆಡಳಿತಗಾರರಲ್ಲಿ ಭ್ರಷ್ಟಾಚಾರ ನಡೆಸಲು ಭಯ ಮೂಡಿಸುವುದರಿಂದ ಭಾರತ ನಿಧಾನವಾಗಿ ಭ್ರಷ್ಟಾಚಾರ ಹೋಗಲಾಡಿಸಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News