48 ಗಂಟೆಗಳೊಳಗೆ ರಾಜಸ್ತಾನದ ಬಿಕನೇರ್ ತೊರೆಯುವಂತೆ ಪಾಕಿಸ್ತಾನಿಗಳಿಗೆ ಸೂಚನೆ

ಪಾಕಿಸ್ತಾನದ ಪ್ರಜೆಗಳಿಗೆ ರಾಜಸ್ತಾನದ ಬಿಕನೇರ್ ನ್ನು ತೊರೆಯಲು 48 ಗಂಟೆಗಳ ಕಾಲಾವಧಿಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.

Last Updated : Feb 19, 2019, 01:49 PM IST
48 ಗಂಟೆಗಳೊಳಗೆ ರಾಜಸ್ತಾನದ ಬಿಕನೇರ್ ತೊರೆಯುವಂತೆ ಪಾಕಿಸ್ತಾನಿಗಳಿಗೆ ಸೂಚನೆ title=
Photo courtesy: indiarailinfo.com

ಬಿಕನೇರ್: ಪಾಕಿಸ್ತಾನದ ಪ್ರಜೆಗಳಿಗೆ ರಾಜಸ್ತಾನದ ಬಿಕನೇರ್ ನ್ನು ತೊರೆಯಲು 48 ಗಂಟೆಗಳ ಕಾಲಾವಧಿಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.

ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸುಮಾರು 40 ಸೈನಿಕರು ಮೃತಪಟ್ಟ ಹಿನ್ನಲೆಯಲ್ಲಿ ಈಗ ಬಿಕನೇರ್ ಜಿಲ್ಲಾಡಳಿತ ಸೆಕ್ಷನ್ 144 ಅಡಿಯಲ್ಲಿ ತಕ್ಷಣ ಪಾಕಿಸ್ತಾನದ ಪ್ರಜೆಗಳು ಹೋಟೆಲ್ ಗಳಲ್ಲಿ ಲಾಜ್ ಗಳಲ್ಲಿ ತಂಗುವುದನ್ನು ನಿಷೇಧಿಸಲಾಗಿದೆ.ಅಲ್ಲದೆ  ಭಾರತೀಯ ಪ್ರಜೆಗಳು ಪಾಕಿಸ್ತಾನದ ಪ್ರಜೆಗಳನ್ನು ಉದ್ಯೋಗಕ್ಕಾಗಿ ನೇಮಿಸಿಕೊಳ್ಳುವ ಹಾಗಿಲ್ಲ ಮತ್ತು ಯಾವುದೇ ಪ್ರತ್ಯೆಕ್ಷ ಹಾಗೂ ಪರೋಕ್ಷ ಉದ್ಯೋಗದ ಸಂಬಂಧವನ್ನು ಹೊಂದುವ ಹಾಗಿಲ್ಲ ಎಂದು ಆದೇಶಿಸಲಾಗಿದೆ.

ಪಾಕಿಸ್ತಾನದಿಂದ ಯಾವುದೇ ರೀತಿಯ ವಂಚಿಸುವ ಕರೆಗಳನ್ನಾಗಲಿ ಅಥವಾ ಸೈನ್ಯಕ್ಕೆ ಸಂಬಂಧಿಸಿದ ಯಾವುದೇ ರಹಸ್ಯ ಮಾಹಿತಿಯನ್ನು ಶೇರ್ ಮಾಡಿಕೊಳ್ಳುವ ಹಾಗಿಲ್ಲ. ಅಲ್ಲದೇ ಬಿಕನೇರ್ ನಲ್ಲಿ ಪಾಕಿಸ್ತಾನದ ಸಿಮ್ ಕಾರ್ಡ್ ನ್ನು ಉಪಯೋಗಿಸಿಕೊಳ್ಳುವಂತಿಲ್ಲ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

Trending News