ಲಾಲೂ ಪ್ರಸಾದ್ ಆರೋಗ್ಯದಲ್ಲಿ ಏರುಪೇರು, ಏಮ್ಸ್ ಗೆ ಶಿಫ್ಟ್

ಜೈಲಿನಲ್ಲಿರುವ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಯಾದವ್ ಅವರ ಆರೋಗ್ಯ ಕ್ಷೀಣಿಸಿದ ನಂತರ ಚಿಕಿತ್ಸೆಗಾಗಿ ಇಂದು ದೆಹಲಿಯ ಏಮ್ಸ್ ಗೆ ಕರೆದೊಯ್ಯಲು ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Last Updated : Jan 23, 2021, 03:32 PM IST
  • 'ಅವರು ಈಗಾಗಲೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಅವರ ಮೂತ್ರಪಿಂಡದ ಶೇಕಡಾ 25 ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ.
  • ಅವರಿಗೆ ನ್ಯುಮೋನಿಯಾ ಸಹ ಇದೆ ಎಂದು ತಿಳಿದುಬಂದಿದೆ.
  • ಉಸಿರಾಡುವಾಗ ಅವರು ತೊಂದರೆ ಎದುರಿಸುತ್ತಿದ್ದಾರೆ.
ಲಾಲೂ ಪ್ರಸಾದ್ ಆರೋಗ್ಯದಲ್ಲಿ ಏರುಪೇರು, ಏಮ್ಸ್ ಗೆ ಶಿಫ್ಟ್  title=
file photo

ನವದೆಹಲಿ: ಜೈಲಿನಲ್ಲಿರುವ ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಯಾದವ್ ಅವರ ಆರೋಗ್ಯ ಕ್ಷೀಣಿಸಿದ ನಂತರ ಚಿಕಿತ್ಸೆಗಾಗಿ ಇಂದು ದೆಹಲಿಯ ಏಮ್ಸ್ ಗೆ ಕರೆದೊಯ್ಯಲು ಸಿದ್ಧತೆಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಂಚಿಯಲ್ಲಿರುವ ಅವರ ಪುತ್ರ ಮತ್ತು ಆರ್‌ಜೆಡಿ ಮುಖಂಡ ತೇಜಶ್ವಿ ಯಾದವ್ ಮತ್ತು ಕುಟುಂಬವು ಲಾಲೂ (Lalu prasad yadavಅವರೊಂದಿಗೆ ಏಮ್ಸ್ ಗೆ ಹೋಗುವ ಸಾಧ್ಯತೆ ಇದೆ.ಲಾಲು ಯಾದವ್ ಅವರು ಸದ್ಯ ರಾಂಚಿಯ ಆಸ್ಪತ್ರೆಯಲ್ಲಿ ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.ಅವರನ್ನು ಏಮ್ಸ್ ಗೆ ಸ್ಥಳಾಂತರಿಸಬಹುದು ಎಂದು ಜೈಲಿನ ವೈದ್ಯಕೀಯ ಮಂಡಳಿ ತಿಳಿಸಿದೆ.ಲಾಲು ಯಾದವ್ ಅವರನ್ನು ದೆಹಲಿಗೆ ಸ್ಥಳಾಂತರಿಸಲು ಜೈಲು ಆಡಳಿತವು ಕೆಳ ನ್ಯಾಯಾಲಯದಿಂದ ಅನುಮತಿ ಪಡೆಯಬೇಕಾಗುತ್ತದೆ.

ಇದನ್ನೂ ಓದಿ: ಮಾಜಿ ಸಿಎಂ ಸೊಸೆಗೆ ಥಳಿಸಿದ್ದು ನಿಜವೇ?

ತೇಜಶ್ವಿ ಯಾದವ್ ಅವರು ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರೊಂದಿಗೆ ಮಾತನಾಡಲಿದ್ದು, ತಂದೆಗೆ ಉತ್ತಮ ಚಿಕಿತ್ಸೆ ನೀಡುವಂತೆ ಕೇಳಿಕೊಳ್ಳುವುದಾಗಿ ಹೇಳಿದರು.'ನಾವು ಅವರಿಗೆ ಉತ್ತಮ ಚಿಕಿತ್ಸೆಯನ್ನು ಬಯಸುತ್ತೇವೆ, ಆದರೆ ಎಲ್ಲಾ ಪರೀಕ್ಷಾ ವರದಿಗಳು ಬಂದ ನಂತರ ಇಲ್ಲಿ ಯಾವ ಚಿಕಿತ್ಸೆಯನ್ನು ನೀಡಬಹುದು ಎಂದು ವೈದ್ಯರು ವಿಶ್ಲೇಷಿಸಬೇಕು.ಅವರ ಪರಿಸ್ಥಿತಿ ಗಂಭೀರವಾಗಿದೆ.ನಾನು ಶನಿವಾರ ಮುಖ್ಯಮಂತ್ರಿಯನ್ನು ಭೇಟಿ ಮಾಡುತ್ತೇನೆ" ಎಂದು ತೇಜಶ್ವಿ ಯಾದವ್ ರಾಂಚಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಇದನ್ನೂ ಓದಿ: ಲಾಲೂ ಪ್ರಸಾದ್ ಕುಟುಂಬದ ಮೇಲೆ ಐಶ್ವರ್ಯಾ ರಾಯ್ ಕಿರುಕುಳ ಆರೋಪ

'ಅವರು ಈಗಾಗಲೇ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಅವರ ಮೂತ್ರಪಿಂಡದ ಶೇಕಡಾ 25 ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆ. ಅವರಿಗೆ ನ್ಯುಮೋನಿಯಾ ಸಹ ಇದೆ ಎಂದು ತಿಳಿದುಬಂದಿದೆ. ಉಸಿರಾಡುವಾಗ ಅವರು ತೊಂದರೆ ಎದುರಿಸುತ್ತಿದ್ದಾರೆ"ಎಂದು ಆರ್ಜೆಡಿ ನಾಯಕ ಹೇಳಿದರು.ಲಾಲು ಯಾದವ್ ಶಿಕ್ಷೆಗೊಳಗಾದ ನಂತರ ಡಿಸೆಂಬರ್ 2017 ರಿಂದ ಜೈಲಿನಲ್ಲಿದ್ದಾರೆ.ಅವರು ಜಾರ್ಖಂಡ್ನಲ್ಲಿ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಸ್ಪತ್ರೆಯಲ್ಲಿ ಹೆಚ್ಚಿನ ಸಮಯವನ್ನು ಕಳೆದಿದ್ದಾರೆ.

ಇದನ್ನೂ ಓದಿ: ಲಾಲೂ ಪ್ರಸಾದ್ ಯಾದವ್ ಆರೋಗ್ಯದಲ್ಲಿ ದಿಢೀರ್‌ ಏರುಪೇರು

ಲಾಲೂ ಅನುಪಸ್ಥಿತಿಯಲ್ಲಿ, ತೇಜಶ್ವಿ ಯಾದವ್ ಅವರು ಆರ್ಜೆಡಿಯನ್ನು ಮುನ್ನಡೆಸುತ್ತಿದ್ದಾರೆ ಮತ್ತು ಕಳೆದ ವರ್ಷ ಬಿಹಾರ ಚುನಾವಣೆಯಲ್ಲಿ 40 ವರ್ಷಗಳಲ್ಲಿ ಮೊದಲ ಬಾರಿಗೆ ಲಾಲು ಯಾದವ್ ರಾಜ್ಯ ಚುನಾವಣಾ ಪ್ರಚಾರವನ್ನು ತಪ್ಪಿಸಿಕೊಂಡರು.ಆರ್ಜೆಡಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸಹಿತ ಮೈತ್ರಿಕೂಟವು ಬಹುಮತವನ್ನು ಪಡೆಯಲು ವಿಫಲವಾಯಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News