'ಹಿಂದೂ ಪಾಕಿಸ್ತಾನ' ಎಂದ ಶಶಿ ತರೂರ್'ಗೆ ಸಮನ್ಸ್ ಜಾರಿ

ಭಾರತೀಯ ಪೀನಲ್ ಕೋಡ್ (ಐಪಿಸಿ)ನ ಸೆಕ್ಷನ್ 153 ಎ ಮತ್ತು 295 ಎ ಮತ್ತು 1971ರ ನ್ಯಾಷನಲ್ ಆನರ್ ಆಕ್ಟ್'ನ ಸೆಕ್ಷನ್ 2 ರ ಅಡಿಯಲ್ಲಿ ಶಶಿ ತರೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Last Updated : Jul 14, 2018, 11:53 AM IST
'ಹಿಂದೂ ಪಾಕಿಸ್ತಾನ' ಎಂದ ಶಶಿ ತರೂರ್'ಗೆ ಸಮನ್ಸ್ ಜಾರಿ title=

ಕೋಲ್ಕತ್ತಾ: ಕಾಂಗ್ರೆಸ್ ನಾಯಕ ಶಶಿ ತರೂರ್ ಅವರ ವಿವಾದಾತ್ಮಕ 'ಹಿಂದೂ-ಪಾಕಿಸ್ತಾನ' ಹೇಳಿಕೆಗೆ ಶನಿವಾರ ಕೋಲ್ಕತಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.

ಕೊಲ್ಕತ್ತಾ ಮೂಲದ ವಕೀಲ ಸುಮೀತ್ ಚೌಧರಿ ಅವರ ಅರ್ಜಿಯಲ್ಲಿ, ತರೂರ್ ಅವರ ಹೇಳಿಕೆಗಳು ದೇಶದ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿದೆಯಲ್ಲದೆ, ಸಂವಿಧಾನವನ್ನು ಅವಮಾನಿಸಿ, ಧಾರ್ಮಿಕ ವಿಭಜನೆಯ ಆಧಾರದ ಮೇಲೆ ಜನರ ನಡುವೆ ಘರ್ಷಣೆ ಮತ್ತು ಅಸಮಾಧಾನವನ್ನು ಸೃಷ್ಟಿಸಲು ಉದ್ದೇಶಿಸಿದ್ದಾರೆ ಎಂದು ಆರೋಪಿಸಿದ್ದರು.

2019 ರಲ್ಲಿ ಬಿಜೆಪಿ ಗೆದ್ದರೆ ಭಾರತ ಹಿಂದೂ ಪಾಕಿಸ್ತಾನವಾಗಲಿದೆ- ಶಶಿ ತರೂರ್

ಈ ಹಿನ್ನೆಲೆಯಲ್ಲಿ ಭಾರತೀಯ ಪೀನಲ್ ಕೋಡ್ (ಐಪಿಸಿ)ನ ಸೆಕ್ಷನ್ 153 ಎ ಮತ್ತು 295 ಎ ಮತ್ತು 1971 ರ ನ್ಯಾಷನಲ್ ಆನರ್ ಆಕ್ಟ್'ನ ಸೆಕ್ಷನ್ 2 ರ ಅಡಿಯಲ್ಲಿ ಶಶಿ ತರೂರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆಗಸ್ಟ್ 14 ರಂದು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. 

ಶಶಿ ತರೂರ್ ರನ್ನು ಪಾಕಿಸ್ತಾನಕ್ಕೆ ಅಟ್ಟಿ- ಸುಬ್ರಹ್ಮಣ್ಯ ಸ್ವಾಮಿ

ಗುರುವಾರ ತಿರುವನಂತಪುರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, "2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ಬಂದರೆ, ಅಲ್ಪಸಂಖ್ಯಾತರ ಸಮಾನತೆಯನ್ನು ತೊಡೆದುಹಾಕಿ 'ಹಿಂದೂ ಪಾಕಿಸ್ತಾನ'ವನ್ನು ರಚಿಸುತ್ತದೆ ಎಂದು ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ತರೂರ್ ಗೆ ಎಚ್ಚರಿಕೆ ನೀಡಿತ್ತು. ಅತ್ತ ಬಿಜೆಪಿ, ರಾಹುಲ್ ಗಾಂಧಿ ಮತ್ತು ತರೂರ್ ಕ್ಷಮೆ ಯಾಚಿಸುವಂತೆ ಆಗ್ರಹಿಸಿತ್ತು. ಆದರೆ ಇದಾವುದಕ್ಕೂ ಪ್ರತಿಕ್ರಿಯಿಸದ ತರೂರ್'ಗೆ ಇದೀಗ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ. 

Trending News