Knowledge News: ಕಬ್ಬಿಣ ಏಕೆ ತುಕ್ಕು ಹಿಡಿಯುತ್ತದೆ? ನಿಜವಾದ ಕಾರಣ ಏನೆಂದು ತಿಳಿಯಿರಿ..

ಕಬ್ಬಿಣದ ಮೇಲ್ಮೈ ಮೇಲೆ ಒಂದೇ ಒಂದು ಹನಿ ನೀರು ಬಿದ್ದರೆ ಸಾಕು ತುಕ್ಕು ಹಿಡಿಯುವ ಪ್ರಕ್ರಿಯೆ ಶುರುವಾಗುತ್ತದೆ. ನೀರಿನಲ್ಲಿರುವ ಆಮ್ಲಜನಕದೊಂದಿಗೆ ಕಬ್ಬಿಣ ಪ್ರತಿಕ್ರಿಯಿಸಲು ಆರಂಭಿಸುವುದರಿಂದ ತುಕ್ಕು ಹಿಡಯಲು ಪ್ರಾರಂಭವಾಗುತ್ತದೆ.

Written by - Puttaraj K Alur | Last Updated : Oct 26, 2021, 03:57 PM IST
  • ಕಬ್ಬಿಣವು ಏಕೆ ತುಕ್ಕು ಹಿಡಿಯುತ್ತದೆ & ಸದಾ ನೀರಿನಲ್ಲಿ ಇಟ್ಟರೆ ಏನಾಗುತ್ತದೆ?
  • ಆಮ್ಲಜನಕ ಮತ್ತು ತೇವಾಂಶವೇ ಕಬ್ಬಿಣಕ್ಕೆ ತುಕ್ಕು ಹಿಡಿಯಲು ಮುಖ್ಯ ಕಾರಣ
  • ಕಬ್ಬಿಣದ ಮೇಲ್ಮೈ ಮೇಲೆ ಒಂದೇ ಹನಿ ನೀರು ಬಿದ್ದರೆ ಸಾಕು ತುಕ್ಕು ಹಿಡಿಯುವ ಪ್ರಕ್ರಿಯೆ ಶುರುವಾಗುತ್ತದೆ
Knowledge News: ಕಬ್ಬಿಣ ಏಕೆ ತುಕ್ಕು ಹಿಡಿಯುತ್ತದೆ? ನಿಜವಾದ ಕಾರಣ ಏನೆಂದು ತಿಳಿಯಿರಿ.. title=
ಕಬ್ಬಿಣಕ್ಕೆ ತುಕ್ಕು ಹಿಡಿಯಲು ಕಾರಣವೇನು?

ನವದೆಹಲಿ: ದುಡಿಯುತ್ತಲೇ ಇರಿ ಇಲ್ಲದಿದ್ದರೆ ‘ಕಬ್ಬಿಣ ತುಕ್ಕು(Iron Rust) ಹಿಡಿದಂತೆ ದೇಹವೂ ತುಕ್ಕು ಹಿಡಿಯುತ್ತದೆ’ ಎಂಬ ಮಾತನ್ನು ಚಿಕ್ಕಂದಿನಿಂದಲೂ ನಾವು ಹಿರಿಯರಿಂದ ಖಂಡಿತ ಕೇಳಿರುತ್ತೇವೆ. ಆದರೆ ಕಬ್ಬಿಣ ಏಕೆ ಮತ್ತು ಹೇಗೆ ತುಕ್ಕು ಹಿಡಿಯುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಮನೆಯಲ್ಲಿ ಇರುವ ಕಬ್ಬಿಣದ ವಸ್ತುಗಳಿಗೆ ತುಕ್ಕು ಹಿಡಿಯುವುದು ಸಾಮಾನ್ಯ. ಆದರೆ ಕಬ್ಬಿಣಕ್ಕೆ ತುಕ್ಕು ಹೇಗೆ ಹಿಡಿಯುತ್ತದೆ ಮತ್ತು ತುಕ್ಕು ಹಿಡಿಯದಂತೆ ಹೇಗೆ ತಡೆಯುವುದು ಎಂಬುದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾಗಿರುವುದು ಅತ್ಯವಶ್ಯಕ.

ಕಬ್ಬಿಣಕ್ಕೆ ತುಕ್ಕು ಹಿಡಿಯಲು ಕಾರಣವೇನು..?

ಕಬ್ಬಿಣವು ಏಕೆ ತುಕ್ಕು ಹಿಡಿಯುತ್ತದೆ ಮತ್ತು ಸದಾ ನೀರಿನಲ್ಲಿ ಕಬ್ಬಿಣ(Iron)ವನ್ನು ಇಟ್ಟರೆ ಏನಾಗುತ್ತದೆ ಎಂಬುದು ಬಹುತೇಕರು ಕೇಳುವ ಪ್ರಶ್ನೆ. ಕಬ್ಬಿಣದ ಮೇಲೆ ನೀರು ಬಿದ್ದರೆ ತ್ವರಿತವಾಗಿ ತುಕ್ಕು ಹಿಡಿಯುತ್ತದೆ. ಇದರಿಂದ ಕಬ್ಬಿಣವು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. ಹೊಸ ಕಬ್ಬಿಣದ ವಸ್ತುವು ಹೊಳೆಯುತ್ತದೆ, ಆದರೆ ಅದನ್ನು ಒಂದೇ ಸ್ಥಳದಲ್ಲಿ ಬಹಳ ದಿನಗಳ ಕಾಲ ಇರಿಸಿದರೆ ತುಕ್ಕು ಹಿಡಿಯಲು ಶುರುವಾಗುತ್ತದೆ. ತೇವಾಂಶದ ಕಾರಣ ಕ್ರಮೇಣವಾಗಿ ಅದು ತುಕ್ಕು ಎಂಬ ಕೆಂಪು ಪದರವನ್ನು ಪಡೆಯುತ್ತದೆ. ಇದೇ ಪ್ರಕ್ರಿಯೆಯನ್ನು ತುಕ್ಕು ಎಂದು ಕರೆಯಲಾಗುತ್ತದೆ. ಮೊದಲು ಬಣ್ಣ ಬದಲಾಗುತ್ತದೆ ಮತ್ತು ನಂತರ ತುಕ್ಕು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: Char Dham Yatra: ಹಿಮಪಾತದ ನಡುವೆಯೇ ಉತ್ತರಾಖಂಡದಲ್ಲಿ ಮುಂದುವರಿದ ಚಾರ್ ಧಾಮ್ ಯಾತ್ರೆ

ಆಮ್ಲಜನಕ ಮತ್ತು ತೇವಾಂಶ ಕಬ್ಬಿಣದ ತುಕ್ಕಿಗೆ ಮುಖ್ಯ ಕಾರಣ

ಕಬ್ಬಿಣವನ್ನು ಬಲವಾದ ಲೋಹವೆಂದು ಪರಿಗಣಿಸಲಾಗುತ್ತದೆ. ಆದರೆ ಅದಕ್ಕೆ ತುಕ್ಕು(Iron Rust) ಹಿಡಿದಾಗ ಅದು ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಬಾಲ್ಯದಲ್ಲಿ ನಾವು ವಿಜ್ಞಾನ ಪುಸ್ತಕಗಳಲ್ಲಿ ತುಕ್ಕು ಎಂದು ಓದುತ್ತಿದ್ದೆವು. ಒಂದೇ ಸ್ಥಳದಲ್ಲಿ ಕೆಲವು ದಿನಗಳ ಕಾಲ ಬಿಟ್ಟರೆ ಕಬ್ಬಿಣದ ಮೇಲ್ಮೈ ಮೇಲೆ ಕೆಂಪು ಮಿಶ್ರಿತ ಕಂದು ಲೇಪನ ಬರುತ್ತದೆ. ಇದನ್ನೇ ತುಕ್ಕು ಎಂದು ಕರೆಯುತ್ತಾರೆ.

ಕಬ್ಬಿಣದ ಮೇಲ್ಮೈ ಮೇಲೆ ಒಂದೇ ಒಂದು ಹನಿ ನೀರು ಬಿದ್ದರೆ ಸಾಕು ತುಕ್ಕು ಹಿಡಿಯುವ ಪ್ರಕ್ರಿಯೆ ಶುರುವಾಗುತ್ತದೆ. ನೀರಿನಲ್ಲಿರುವ ಆಮ್ಲಜನಕ(Oxygen)ದೊಂದಿಗೆ ಕಬ್ಬಿಣ ಪ್ರತಿಕ್ರಿಯಿಸಲು ಆರಂಭಿಸುವುದರಿಂದ ತುಕ್ಕು ಹಿಡಯಲು ಪ್ರಾರಂಭವಾಗುತ್ತದೆ. ನೀರಿನ ಹನಿಯಲ್ಲಿ ಉತ್ಪತ್ತಿಯಾದ ಕಬ್ಬಿಣದ ಆಕ್ಸೈಡ್ ಅಕದಕ್ಕೆ ಕೆಂಪು ಮಿಶ್ರಿತ ಕಂದು ಬಣ್ಣವನ್ನು ನೀಡುತ್ತದೆ. ಇದರಿಂದ ಅದರ ಬಣ್ಣವೂ ಬದಲಾಗುತ್ತದೆ. ಇದನ್ನೇ ನಾವು ತುಕ್ಕು ಹಿಡಿದಿದೆ ಅಂತಾ ಹೇಳುತ್ತೇವೆ.  

ತುಕ್ಕು ಎಂದರೆ ಏನು..?

ತುಕ್ಕು ಎಂದರೆ ಕ್ರಮೇಣ ಅಳಿವು ಎಂದರ್ಥ. ಲೋಹವು ತೇವಾಂಶದೊಂದಿಗೆ ಸಂಪರ್ಕಕ್ಕೆ ಬಂದಾಗ ತುಕ್ಕು(Iron Rust) ಸಂಭವಿಸುತ್ತದೆ. ಕಬ್ಬಿಣದ ತುಕ್ಕು ಗಂಭೀರ ಸಮಸ್ಯೆಯಾಗಿದೆ. ಕಬ್ಬಿಣ ಮಾತ್ರವಲ್ಲ ಬೆಳ್ಳಿಯ ಮೇಲಿನ ಕಪ್ಪು ಲೇಪನ, ತಾಮ್ರದ ಮೇಲಿನ ಹಸಿರು ಲೇಪನವನ್ನು ಕೂಡ ತುಕ್ಕು ಎಂದು ಕರೆಯಲಾಗುತ್ತದೆ. ಸವೆತವನ್ನು ತಡೆಗಟ್ಟಲು, ಕಬ್ಬಿಣ ಅಥವಾ ಇತರ ಲೋಹಗಳನ್ನು ತೇವಾಂಶದಿಂದ ರಕ್ಷಿಸಬೇಕು. ಇದು ದೀರ್ಘಕಾಲ ಕಬ್ಬಿಣದ ಬಾಳಿಕೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: PhonePe ಬಳಕೆದಾರರೇ ಗಮನಿಸಿ, UPI ಪೇಮೆಂಟ್‌ ಮಾಡಿದರೆ ಖಾತೆಯಿಂದ ಕಡಿತಗೊಳ್ಳುತ್ತದೆ ಇಷ್ಟು ಹಣ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News