ತಿರುಮಲದಲ್ಲಿ ಬಾಲಾಜಿಗೆ ಪೂಜೆ ಸಲ್ಲಿಸಿದ ಕೆಸಿಆರ್

ಲೋಕಸಭೆ ಚುನಾವಣೆ ಋತುವಿನಲ್ಲಿ ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅವರ ಪಕ್ಷವು ನಿರೀಕ್ಷೆಯ ಮಟ್ಟದಲ್ಲಿ ಜಯಗಳಿಸಲಿಲ್ಲ.  

Last Updated : May 27, 2019, 10:23 AM IST
ತಿರುಮಲದಲ್ಲಿ ಬಾಲಾಜಿಗೆ ಪೂಜೆ ಸಲ್ಲಿಸಿದ ಕೆಸಿಆರ್ title=

ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ (ಕೆ.ಸಿ.ಆರ್) ಅವರ ಕುಟುಂಬದ ಸದಸ್ಯರೊಂದಿಗೆ ಸೋಮವಾರ ಬೆಳಿಗ್ಗೆ ತಿರುಮಲಕ್ಕೆ ಭೇಟಿ ನೀಡಿ ಬಾಲಾಜಿಗೆ ಪ್ರಾರ್ಥನೆ ಸಲ್ಲಿಸಿದರು.

ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಅಧಿಕಾರಿಗಳು ಕೆ.ಸಿ.ಆರ್ ಮತ್ತು ಅವರ ಕುಟುಂಬಸ್ಥರನ್ನು ಸ್ವಾಗತಿಸಿದರು. ಬಳಿಕ ಪುರೋಹಿತರು ಬಾಲಾಜಿಗೆ ವಿಶೇಷ ಪೂಜಾಚರಣೆ ಸಲ್ಲಿಸಿದರು.

ಬಾಲಾಜಿ ದರ್ಶನದ ಬಳಿಕ ಕೆಸಿಆರ್ ಇಂದು ಹಲವು ದೇವಾಲಯಗಳಿಗೆ ಭೇಟಿ ನೀಡಲಿದ್ದಾರೆ. ವಿಜಯವಾಡಕ್ಕೆ ಭೇಟಿ ನೀಡಿ ಅಲ್ಲಿ ಅವರು ಕನಕದುರ್ಗ ದೇವಸ್ಥಾನದಲ್ಲಿ ದೇವಿಯ ಅನುಗ್ರಹ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಆಂಧ್ರಪ್ರದೇಶದ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿಯನ್ನು ಧೂಳಿಪಟ ಮಾಡಿರುವ YSRCP ಯ ವೈ.ಎಸ್.ಜಗನ್ ಮೋಹನ್ ರೆಡ್ಡಿಯವರ ಶಪಥ ಸಮಾರಂಭದಲ್ಲಿ ಟಿಆರ್ಎಸ್ ಮುಖ್ಯಸ್ಥರು ಭಾಗವಹಿಸಲಿದ್ದಾರೆಂದು ನಿರೀಕ್ಷಿಸಲಾಗಿದೆ.

ಲೋಕಸಭೆ ಚುನಾವಣೆ ಋತುವಿನಲ್ಲಿ ತೆಲಂಗಾಣದಲ್ಲಿ ಕೆ.ಚಂದ್ರಶೇಖರ್ ರಾವ್ ಅವರ ಪಕ್ಷವು ನಿರೀಕ್ಷೆಯ ಮಟ್ಟದಲ್ಲಿ ಜಯಗಳಿಸಲಿಲ್ಲ. ಟಿಆರ್ಎಸ್ ಇಲ್ಲಿ ಒಂಬತ್ತು ಸ್ಥಾನಗಳನ್ನು ಗೆದ್ದುಕೊಂಡರೆ ಬಿಜೆಪಿ ನಾಲ್ಕು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಮತ್ತು ಎಐಐಎಂಐ ಕ್ರಮವಾಗಿ ಮೂರು ಮತ್ತು ಒಂದು ಸ್ಥಾನಗಳಲ್ಲಿ ಗೆದ್ದಿವೆ.
 

Trending News