ನವದೆಹಲಿ: ಕಳೆದ ವರ್ಷ ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಹಾಗೂ ಚೀನಾ ಯೋಧರ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಎರಡನೇ ಅತೀ ದೊಡ್ಡ ಶೌರ್ಯ ಪ್ರಶಸ್ತಿಯಾದ ಮಹಾವೀರ ಚಕ್ರ ನೀಡಿ ಗೌರವಿಸಿದೆ.
16ನೇ ಬಿಹಾರ ಬೆಟಾಲಿಯನ್‌ನ ಕಮಾಂಡಿಂಗ್ ಆಫೀಸರ್ ಆಗಿದ್ದ ಸಂತೋಷ್ ಬಾಬು(Karnal Santosh Babu) ಅವರು, ಕಳೆದ ವರ್ಷ ಜೂನ್‌ನಲ್ಲಿ ನಡೆದ ಭಾರತ-ಚೀನಾ ಸಂಘರ್ಷದ ವೇಳೆ ತಂಡವೊಂದನ್ನು ಮುನ್ನಡಿಸಿದ್ದರು. ದುರದೃಷ್ಟವಶಾತ್ ಶತ್ರುಗಳ ಗುಂಡಿಗೆ ಎದೆಯೊಡ್ಡಿ ವೀರ ಮರಣವನ್ನಪ್ಪಿದ್ದರು.
Green Tax: ಹಳೆ ವಾಹನಗಳ ಮೇಲೆ ಗ್ರೀನ್ ಟ್ಯಾಕ್ಸ್ ವಿಧಿಸಲು ಕೇಂದ್ರ ಸರ್ಕಾರದ ಸಿದ್ಧತೆ
ಸಂತೋಷ್ ಅವರಿಗೆ ಮಹಾವೀರ ಚಕ್ರ ಹಾಗೂ ಇನ್ನು ನಾಲ್ವರು ಹುತಾತ್ಮರಿಗೆ ವೀರ ಚಕ್ರ ಪ್ರಶಸ್ತಿ ಮರಣೋತ್ತರವಾಗಿ ಘೋಷಣೆ ಮಾಡಲಾಗಿದೆ. ನಾಯಿಬ್ ಸುಬೇದಾರ್ ನುದುರಾಂ ಸೊರೇನ್, ಹವಿಲ್ದಾರ್ ಕೆ. ಪಳನಿ, ನಾಯ್ಕ್ ದೀಪಕ್ ಸಿಂಗ್, ಸಿಪಾಯಿ ಗುರುತೇಜ್ ಸಿಂಗ್ ಅವರಿಗೆ ವೀರ ಚಕ್ರ ಪ್ರಶಸ್ತಿ ಘೋಷಣೆಯಾಗಿದೆ.
Padma Vibhushan Awarded: ಎಸ್ ಪಿಬಿಗೆ ಒಲಿದ ಕೇಂದ್ರ ಸರ್ಕಾರದ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ..!
ತೆಲಂಗಾಣದ ಸೂರ್ಯಪೇಟ್‌ನವರಾದ ಸಂತೋಷ್ ಬಾಬು ಅವರು, ತಂದೆ ತಾಯಿಯ ಒಬ್ಬನೇ ಮಗ. 2004 ರಲ್ಲಿ ಸೈನ್ಯಕ್ಕೆ ಭರ್ತಿಯಾದ ಸಂತೋಷ್ 16ನೇ ಬಿಹಾರ ರೆಜೆಮೆಂಟಿಗೆ ಕರ್ನಲ್ ಆಗಿ ಸೇರ್ಪಡೆಯಾಗುತ್ತಾರೆ. 2006 ರಲ್ಲಿ ಕ್ಯಾಪ್ಟನ್ ಆಗಿ ಭಡ್ತಿ ಪಡೆದ ಸಂತೋಷ್, 2010ರಲ್ಲಿ ಮೇಜರ್ ಆಗಿ ಪದೋನ್ನತಿ ಹೊಂದಿದ್ದರು.
Farmers Protest: ಟ್ರಾಕ್ಟರ್ ರ‍್ಯಾಲಿ ಬೆನ್ನೆಲೆ ಮತ್ತೊಂದು 'ರ‍್ಯಾಲಿ ಘೋಷಣೆ' ಮಾಡಿದ ರೈತರು..!
2020ರಲ್ಲಿ ಹೈದರಾಬಾದ್‌ಗೆ ವರ್ಗಾವಣೆಗೊಂಡಿದ್ದರೂ, ದೇಶವ್ಯಾಪಿ ಲಾಕ್‌ಡೌನ್‌ನಿಂದಾಗಿ ಸಂತೋಷ್ ಅವರಿಗೆ ಬರಲು ಸಾಧ್ಯವಾಗಿರಲಿಲ್ಲ. ಇದೇ ವೇಳೆ ಚೀನಾ ಗಡಿಯಲ್ಲಿ ಸೇನೆ ಜಮಾಯಿಸಿ ಯುದ್ಧದ ವಾತಾವರಣ ಸೃಷ್ಟಿಯಾಗಿದ್ದರಿಂದ ಅವರು ಅನಿವಾರ್ಯವಾಗಿ ಸೇನಾ ತುಕಡಿಯನ್ನು ಮುನ್ನಡೆಸಬೇಕಾಯ್ತು. ಶತ್ರುಗಳ ವಿರುದ್ಧವೇ ಹೋರಾಡಿ ವೀರ ಮರಣವಪ್ಪಬೇಕಾಯ್ತು.
ಮಕ್ಕಳಿಗೂ ಮಾಡಿಸಿ Aadhaar Card, ಮಕ್ಕಳ ಆಧಾರ್ ಕಾರ್ಡ್ ಗೆ ಏನೆಲ್ಲಾ ದಾಖಲೆ ಬೇಕು ಗೊತ್ತಿದೆಯಾ ?
45 ವರ್ಷಗಳ ಬಳಿಕ ಭಾರತ-ಚೀನಾ ಗಡಿಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಭಾರತದ ಒಟ್ಟು 20 ಮಂದಿ ವೀರ ಯೋಧರು ಹುತಾತ್ಮರಾಗಿದ್ದರು. ಸುಮಾರು ಏಳು ಗಂಟೆಗಳ ಕಾಲ ಈ ಸಂಘರ್ಷ ನಡೆದಿತ್ತು.
India-China Border: ಗಡಿಯಲ್ಲಿ ಮತ್ತೆ ಕ್ಯಾತೆ ತೆಗೆದ ಚೀನಾ! ಹಲವು ಯೋಧರಿಗೆ ಗಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.