ರಾಹುಲ್ ಗಾಂಧಿ ಮೇಲೆ ಬಾಲಿವುಡ್’ನ ಇಬ್ಬರು ನಟಿಯರಿಗೆ ಲವ್! ಒಬ್ಳು ಡೇಟಿಂಗ್ ಅಂದ್ರೆ ಮತ್ತೊಬ್ಳು ಮದುವೆಗೂ ರೆಡಿ!

Celebrities Crush on Rahul Gandhi: ಶಾಹಿದ್ ಕಪೂರ್, ಹೃತಿಕ್ ರೋಷನ್ ಜೊತೆ ಡೇಟಿಂಗ್ ಮಾಡಿ ಕಡೆಗೆ ಸೈಫ್ ಅಲಿ ಖಾನ್ ಅವರನ್ನು ಮದುವೆಯಾದ ನಟಿ ಕರೀನಾ ಕಪೂರ್’ಗೆ ಒಮ್ಮೆ ರಾಹುಲ್ ಗಾಂಧಿಯ ಮೇಲೆ ಕ್ರಶ್ ಆಗಿತ್ತಂತೆ.

Written by - Bhavishya Shetty | Last Updated : Aug 8, 2023, 12:11 PM IST
    • ಒಂದೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಅದೆಷ್ಟೋ ಹೆಣ್ಣುಮಕ್ಕಳಿಗೆ ಕ್ರಶ್ ಆಗಿದ್ದದ್ದು ನಿಜ
    • ಒಬ್ಬ ನಟಿ ಕೂಡ ರಾಹುಲ್ ಗಾಂಧಿಯನ್ನು ತುಂಬಾ ಇಷ್ಟಪಡುತ್ತಿದ್ದರು
    • ಡೇಟ್‌’ಗೆ ಹೋಗಿ ಮಾತನಾಡಬೇಕೆಂಬ ಆಸೆ ಇತ್ತು ಎಂದು ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದರು.
ರಾಹುಲ್ ಗಾಂಧಿ ಮೇಲೆ ಬಾಲಿವುಡ್’ನ ಇಬ್ಬರು ನಟಿಯರಿಗೆ ಲವ್! ಒಬ್ಳು ಡೇಟಿಂಗ್ ಅಂದ್ರೆ ಮತ್ತೊಬ್ಳು ಮದುವೆಗೂ ರೆಡಿ!  title=
Celebrities Crush on Rahul Gandhi

Celebrities Crush on Rahul Gandhi: ಒಂದೊಮ್ಮೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೇಲೆ ಅದೆಷ್ಟೋ ಹೆಣ್ಣುಮಕ್ಕಳಿಗೆ ಕ್ರಶ್ ಆಗಿದ್ದದ್ದು ನಿಜ. ದೇಶದ ಅತ್ಯಂತ ಹಳೆಯ ಪಕ್ಷ ಕಾಂಗ್ರೆಸ್’ನ ಉಸ್ತುವಾರಿ ವಹಿಸಿಕೊಂಡಿದ್ದ ರಾಹುಲ್ ತನ್ನ ನಗುವಿನಿಂದಲೇ ಹಲವು ಹುಡುಗಿಯರ ಮನಗೆದ್ದಿದ್ದರು. ಅಂತಹ ಹುಡುಗಿಯರ ಪಟ್ಟಿಯಲ್ಲಿ ಒಬ್ಬ ನಟಿ ಕೂಡ ರಾಹುಲ್ ಗಾಂಧಿಯನ್ನು ತುಂಬಾ ಇಷ್ಟಪಡುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ನೆನೆಸಿದ ಒಣದ್ರಾಕ್ಷಿ ತಿಂದರೆ ಈ ಕಾಯಿಲೆ ಬಳಿಯೂ ಬರಲ್ಲ

ಶಾಹಿದ್ ಕಪೂರ್, ಹೃತಿಕ್ ರೋಷನ್ ಜೊತೆ ಡೇಟಿಂಗ್ ಮಾಡಿ ಕಡೆಗೆ ಸೈಫ್ ಅಲಿ ಖಾನ್ ಅವರನ್ನು ಮದುವೆಯಾದ ನಟಿ ಕರೀನಾ ಕಪೂರ್’ಗೆ ಒಮ್ಮೆ ರಾಹುಲ್ ಗಾಂಧಿಯ ಮೇಲೆ ಕ್ರಶ್ ಆಗಿತ್ತಂತೆ. ಅವರ ಜೊತೆ ಡೇಟ್‌’ಗೆ ಹೋಗಿ ಮಾತನಾಡಬೇಕೆಂಬ ಆಸೆ ಇತ್ತು ಎಂದು 2002 ರಲ್ಲಿ ಸಂದರ್ಶನವೊಂದರಲ್ಲಿ ಅವರೇ ಬಹಿರಂಗಪಡಿಸಿದ್ದರು.

ಪ್ರಸಿದ್ಧ ಚಾಟ್ ಶೋ ‘Rendezvous with Simi Garewal’ ನಲ್ಲಿ ಕರೀನಾ ಕಪೂರ್ ಅವರು ಈ ಬಗ್ಗೆ ಹೇಳಿದ್ದಾರೆ. ಈ ಸಂದರ್ಶನದಲ್ಲಿ ‘ಯಾವ ಸೆಲೆಬ್ರಿಟಿಗಳೊಂದಿಗೆ ಡೇಟ್ ಮಾಡಲು ಬಯಸುತ್ತೀರಿ’ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಯಾಗಿ ಕರೀನಾ ‘ರಾಹುಲ್ ಗಾಂಧಿ’ ಎಂದರು. “ಅವರಲ್ಲಿ ಏನೋ ವಿಶೇಷತೆ ಇದೆ. ನಿಯತಕಾಲಿಕೆಗಳಲ್ಲಿ ಅವರ ಚಿತ್ರಗಳನ್ನು ನೋಡಿದಾಗಲೆಲ್ಲ, ಅವರೊಂದಿಗೆ ಮಾತನಾಡಿದರೆ ಹೇಗೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.

ಇನ್ನು ರಾಹುಲ್ ಗಾಂಧಿ ಜೊತೆ ಡೇಟಿಂಗ್ ಮಾಡುವ ಬಗ್ಗೆ ಮಾತನಾಡಿದ ಕರೀನಾ, “ನಾನು ಸಿನಿಮಾ ಕುಟುಂಬಕ್ಕೆ ಸೇರಿದವಳು. ರಾಹುಲ್ ಗಾಂಧಿಯವರ ಕುಟುಂಬದ ಹಲವು ತಲೆಮಾರುಗಳು ರಾಜಕೀಯದೊಂದಿಗೆ ಸಂಬಂಧ ಹೊಂದಿವೆ. ಹೀಗಿರುವಾಹ ಅವರೊಂದಿಗೆ ಡೇಟ್ ಮಾಡುವುದು ಆಸಕ್ತಿದಾಯಕವಾಗಿದೆ” ಎಂದರು.

ಕಾರ್ಯಕ್ರಮದ ನಿರೂಪಕಿ ಮತ್ತು ಪ್ರಸಿದ್ಧ ಬಾಲಿವುಡ್ ನಟಿ ಸಿಮಿ ಗ್ರೆವಾಲ್ ಅವರು ಕರೀನಾ ಕಪೂರ್ ಅವರ ಆ ಸಂದರ್ಶನದ ವೀಡಿಯೊವನ್ನು ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದಾರೆ. ಕರೀನಾ ಅವರ ಸಂದರ್ಶನದ ಒಂದು ತುಣುಕು ಇಲ್ಲಿದೆ ನೋಡಿ. ಅದರಲ್ಲಿ ಅವರು ರಾಹುಲ್ ಗಾಂಧಿಯೊಂದಿಗೆ ಡೇಟಿಂಗ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.

 

 

ಇದನ್ನೂ ಓದಿ: 2023ರ ವಿಶ್ವಕಪ್’ಗೆ ತಂಡ ಪ್ರಕಟ! ವಿರಾಟ್ ಕೊಹ್ಲಿ ಗೆಳೆಯನಿಗೆ ಸ್ಥಾನ ನೀಡದೆ ದೂರವಿಟ್ಟ ಆಯ್ಕೆ ಸಮಿತಿ

ಇನ್ನೊಂದೆಡೆ ನಟಿ ಶೆರ್ಲಿನ್ ಚೋಪ್ರಾ ಕೂಡ ರಾಹುಲ್ ಗಾಂಧಿ ಅವರನ್ನು ಮದುವೆಯಾಗಲು ಸಿದ್ಧ ಎಂದಿದ್ದಾರೆ, ಒಬ್ಬ ಪಾಪರಾಜಿ, ‘ರಾಹುಲ್ ಗಾಂಧಿಯನ್ನು ಮದುವೆಯಾಗುತ್ತೀರಾ?’ ಎಂಬ ಪ್ರಶ್ನೆಯನ್ನು ತಮಾಷೆಯಾಗಿ ಮುಂದಿಟ್ಟಿದ್ದಾರೆ. ಅದಕ್ಕೆ ಉತ್ತರಿಸಿದ ಶೆರ್ಲಿನ್, “ಯಾಕಿಲ್ಲ, ಖಂಡಿತ.. ಆದರೆ ಮದುವೆಯಾದ ನಂತರ ನನ್ನ ಉಪನಾಮ ಹಾಗೆಯೇ ಉಳಿಯಬೇಕೆಂದು ನಾನು ಬಯಸುತ್ತೇನೆ” ಎಂದಿದ್ದಾರೆ. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

.

Trending News