ಜಾರ್ಖಂಡ್ :ಶಾಸಕರ ಉಪಸ್ಥಿತಿಯಲ್ಲಿ ನಡೆದ ಚುಂಬನ ಸ್ಪರ್ಧೆ..!

     

Last Updated : Dec 11, 2017, 06:38 PM IST
ಜಾರ್ಖಂಡ್ :ಶಾಸಕರ ಉಪಸ್ಥಿತಿಯಲ್ಲಿ ನಡೆದ ಚುಂಬನ ಸ್ಪರ್ಧೆ..! title=
ಆಧಾರ:ಯುಟ್ಯೂಬ್

ಪಾಕುರ್ ಜಿಲ್ಲೆ:   ಜಾರ್ಖಂಡ್ ರಾಜ್ಯದಲ್ಲಿ ಶಾಸಕರ ಉಪಸ್ಥಿತಿಯಲ್ಲೆಯೇ ಬುಡಕಟ್ಟು ಜನಾಂಗದ ಸದಸ್ಯರ ಚುಂಬನ ಸ್ಪರ್ಧೆ ನಡೆದಿದ್ದು ಹಲವಾರು ವಿವಾದಗಳಿಗೆ ಎಡೆಮಾಡಿಕೊಟ್ಟಿದೆ.

ಈ ಘಟನೆಯು ಜಾರ್ಖಂಡ್ನ ಪಾಕುರ್ ಜಿಲ್ಲೆಯ ಲಿಟ್ಟಿಪರಾ ಬ್ಲಾಕ್ನಲ್ಲಿ ನಡೆದ ಸಿಡೋ-ಕನು ಉತ್ಸವದದಲ್ಲಿ ನಡೆದಿದೆ ಎಂದು ಹೇಳಲಾಗಿದ್ದು . ಶಾಸಕರೇ ಈ ಸ್ಪರ್ಧೆಯ ರೂವಾರಿಗಳು ಎಂದು ತಿಳಿದು ಬಂದಿದೆ.

ಈ ಚುಂಬನ ಸ್ಪರ್ಧೆಯಲ್ಲಿ ಭಾಗವಹಿಸಿದವರು ಬಹುತೇಕ ಬುಡಕಟ್ಟು ಜನಾಂಗದವರಿಂದ ಮದುವೆಯಾದರು ಎಂದು  ಪ್ರಭಾತ್ ಖಬರ್ ವರದಿ ಮಾಡಿದೆ. ಜಾನಪದ ನೃತ್ಯ ಗಾಯನ ಹಾಗೂ ಇನ್ನಿತರ ಸ್ಪರ್ಧೆಗಳನ್ನು ಒಳಗೊಂಡಿರುವ ಈ ಸಿಡೋ-ಕನು ಉತ್ಸವವನ್ನು  ಪ್ರತಿ ವರ್ಷ ಈ ಭಾಗದ ಶಾಸಕ ಸೈಮನ್ ಮರಾಂಡಿ ಅವರು ಆಯೋಜಿಸುತ್ತಾರೆ. ಜಾರ್ಖಂಡ್ ಮುಕ್ತಿ ಮೋರ್ಚಾದ ಶ್ಯಾಮ್ ಯಾದವ್ ಸೇರಿದಂತೆ ಹಲವಾರು ರಾಜಕಾರಣಿಗಳು ಇದನ್ನು ಪಾಲ್ಗೊಂಡಿದ್ದರು ಎಂದು ಪ್ರಭಾತ್ ಖಬರ್ ವರದಿ ಮಾಡಿದೆ.

Trending News