Jet Airways ಬಂಪರ್ ಆಫರ್, 50% ವರೆಗೂ ರಿಯಾಯಿತಿ

ಈ ಕೊಡುಗೆಯ ಪ್ರಯೋಜನವನ್ನು ಅಪ್ ಅಂಡ್ ಡೌನ್(ಒನ್ ವೆ ಮತ್ತು ರಿಟರ್ನ್) ಮೇಲೆ ಪಡೆಯಬಹುದಾಗಿದೆ.

Last Updated : Feb 23, 2019, 02:33 PM IST
Jet Airways ಬಂಪರ್ ಆಫರ್, 50% ವರೆಗೂ ರಿಯಾಯಿತಿ title=

ನವದೆಹಲಿ: ಕಡಿಮೆ ದರದಲ್ಲಿ ವಿಮಾನ ಸೇವೆ ನೀಡುತ್ತಿರುವ ಜೆಟ್ ಏರ್ವೇಸ್ ಬಂಪರ್ ಆಫರ್ ನೀಡುತ್ತಿದ್ದು, ಈ ಬಂಪರ್ ಸೇಲ್ ಅಡಿಯಲ್ಲಿ ಅಂತರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಪ್ರಯಾಣದಲ್ಲಿ 50% ವರೆಗೂ ರಿಯಾಯಿತಿ ಪಡೆಯಬಹುದಾಗಿದೆ. ಈ ಸೇಲ್ ಫೆಬ್ರವರಿ 25ರವರೆಗೂ ಇರಲಿದೆ. 

ಈ ಕೊಡುಗೆಯ ವಿಶೇಷತೆ ಏನೆಂದರೆ ಪ್ರೀಮಿಯಂ ಮತ್ತು ಎಕಾನಮಿ ಎರಡೂ ವರ್ಗದಲ್ಲೂ ರಿಯಾಯಿತಿ ಸಿಗಲಿದೆ. ವಿಶೇಷ ಸೂಚನೆ: ಈ ರಿಯಾಯಿತಿ ಕೇವಲ ಬೇಸ್ ಫೇರ್ ನಲ್ಲಿ ಮಾತ್ರ ಲಭ್ಯವಿದೆ. 

ಕಂಪನಿಯಿಂದ ಬಿಡುಗಡೆಗೊಂಡಿರುವ ಪತ್ರಿಕಾ ಪ್ರಕಟಣೆ ಪ್ರಕಾರ, ಫೆಬ್ರವರಿ 21 ರ ನಂತರ ಗ್ರಾಹಕರು ಈ ಸೇವೆಯಲ್ಲಿ ಅಂತರಾಷ್ಟ್ರೀಯ ಟಿಕೆಟ್ ಅನ್ನು ಬುಕ್ ಮಾಡಲು ಅವಕಾಶವಿದ್ದು, ಈ ಕೊಡುಗೆಯ ಪ್ರಯೋಜನವನ್ನು ಅಪ್ ಅಂಡ್ ಡೌನ್(ಒನ್ ವೆ ಮತ್ತು ರಿಟರ್ನ್) ಮೇಲೆ ಪಡೆಯಬಹುದಾಗಿದೆ. 

ದೇಶೀಯ ಪ್ರಯಾಣದ ಬಗ್ಗೆ ಮಾತನಾಡುವುದಾದರೆ, ಎಕಾನಮಿ ವರ್ಗದಲ್ಲಿ ಮಾರ್ಚ್ 1 ರಿಂದ ಪ್ರಯಾಣಿಸಲು ಟಿಕೆಟ್ ಖರೀದಿಸಬಹುದಾಗಿದೆ. ನೀವು ಪ್ರೀಮಿಯರ್ ಕ್ಲಾಸ್ ಟಿಕೆಟ್ ಖರೀದಿಸುವುದಾದರೆ ಪ್ರಯಾಣಕ್ಕೆ ಕನಿಷ್ಠ 8 ದಿನಗಳ ಮೊದಲು ಟಿಕೆಟ್ ಬುಕಿಂಗ್ ಮಾಡಬೇಕಾಗುತ್ತದೆ. ಅದೇ ಸಮಯದಲ್ಲಿ ಎಕಾನಾಮಿಕ್ ಕ್ಲಾಸ್ ನಲ್ಲಿ ಟಿಕೆಟ್ ಬುಕ್ ಮಾಡುವುದಾದರೆ ಕನಿಷ್ಠ 15 ದಿನಗಳ ಮೊದಲು ಟಿಕೆಟ್ ಬುಕ್ ಮಾಡುವ ಅಗತ್ಯವಿದೆ.

ಈ ಆಫರ್ ಜೆಟ್ ಏರ್ವೇಸ್ ನ ಸಹಭಾಗಿತ್ವ ಹೊಂದಿರುವ ಏರ್ಲೈನ್ಸ್ Air France ಮತ್ತು KLM Royal Dutch Airlines ಗಳಿಗೂ ಅನ್ವಯಿಸಲಿದೆ. ದೇಶೀಯ ಮಾರ್ಗದಲ್ಲಿ ಮಾರ್ಚ್ 8 ರಿಂದ ಪ್ರಯಾಣ ಪ್ರಾರಂಭವಾದರೆ, ಅಂತರಾಷ್ಟ್ರೀಯ ಮಾರ್ಗದಲ್ಲಿ ಫೆಬ್ರವರಿ 21 ರಿಂದ ಪ್ರಾರಂಭವಾಗುತ್ತದೆ.

ವೆಬ್ಸೈಟ್ ಅಥವಾ ಅಪ್ಲಿಕೇಶನ್ನಿಂದ ಬುಕ್ ಮಾಡಲಾಗುವ ಟಿಕೆಟ್ ಗಳಿಗೆ ಹೆಚ್ಚಿನ ರಿಯಾಯಿತಿ:
ಈ ಆಫರ್ ಅಡಿಯಲ್ಲಿ ವೆಬ್ಸೈಟ್ ಅಥವಾ ಅಪ್ಲಿಕೇಶನ್ನಿಂದ ಬುಕಿಂಗ್ ಮಾಡಲಾಗುವ ಟಿಕೆಟ್ ಮೇಲೆ ಹೆಚ್ಚಿನ ರಿಯಾಯಿತಿ ಸಿಗಲಿದೆ. ಉದಾಹರಣೆಗೆ, 250 ಬೋನಸ್ ಜೆಪಿಎಂಗಳು, ಝೀರೋ ಕ್ಯಾನ್ಸಲೇಶನ್ ಶುಲ್ಕ, ಪ್ರವೇಶ ಬ್ಯಾಗೇಜ್ನಲ್ಲಿ 20% ಹೆಚ್ಚುವರಿ ರಿಯಾಯಿತಿಗಳು ಪ್ರತಿ ಫ್ಲೈಟ್ ಬುಕಿಂಗ್ನಲ್ಲಿಯೂ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ವಿಮಾನಯಾನ ವೆಬ್ಸೈಟ್ jetairways.com ಗೆ ಭೇಟಿ ನೀಡಿ.

Trending News