ಮತಗಟ್ಟೆ ಅಧಿಕಾರಿಗಳ ಮೇಲೆ ಜಯಾ ಬಚ್ಚನ್ ಗರಂ! ಕಾರಣ ಏನು ಗೊತ್ತಾ?

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈನ ಮತದಾನ ಕೇಂದ್ರವೊಂದಕ್ಕೆ ಆಗಮಿಸಿದ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮತ ಚಲಾಯಿಸಲು ಆಗಮಿಸಿದ್ದರು. 

Last Updated : Oct 21, 2019, 06:24 PM IST
ಮತಗಟ್ಟೆ ಅಧಿಕಾರಿಗಳ ಮೇಲೆ ಜಯಾ ಬಚ್ಚನ್ ಗರಂ! ಕಾರಣ ಏನು ಗೊತ್ತಾ? title=

ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಪತ್ನಿ ಜಯಾ ಬಚ್ಚನ್ ಮತಗಟ್ಟೆ ಅಧಿಕಾರಿಗಳ ಆಮೇಲೆ ಕೊಪಗೊಂಡ ಘಟನೆ ಸೋಮವಾರ ನಡೆದಿದೆ. 

ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈನ ಮತದಾನ ಕೇಂದ್ರವೊಂದಕ್ಕೆ ಆಗಮಿಸಿದ ಜಯಾ ಬಚ್ಚನ್, ಪುತ್ರ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮತ ಚಲಾಯಿಸಲು ಆಗಮಿಸಿದ್ದರು. ಮತದಾನದ ಬಳಿಕ ಕೇಂದ್ರದಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಅಲ್ಲಿದ್ದ ಮತಗಟ್ಟೆ ಅಧಿಕಾರಿಯೊಬ್ಬರು ಜಯಾ ಅವರೊಂದಿಗೆ ಫೋಟೋಗಾಗಿ ಮನವಿ ಮಾಡಿದ್ದಾರೆ. ಆದರೆ, ಇದರಿಂದ ಕೋಪಗೊಂಡ ಜಯಾ ಬಚ್ಚನ್, ಫೋಟೋ ಕ್ಲಿಕ್ಕಿಸಲು ನಿರಾಕರಿಸಿದ್ದಾರೆ.

ಮೂಲಗಳ ಪ್ರಕಾರ, ಫೋಟೋಗೋಸ್ಕರ ಮನವಿ ಮಾಡಿದ ಅಧಿಕಾರಿ ವಿರುದ್ಧ ಜಯಾ ಬಚ್ಚನ್ ಕಿಡಿ ಕಾರಿದ್ದು, "ನಾನಿಲ್ಲಿ ಮತ ಚಲಾಯಿಸಲು ಬಂದಿದ್ದೇನೆ. ಸಾಮಾನ್ಯ ಪ್ರಜೆಯಾಗಿ ಬಂದಿದ್ದೇನೆ. ಆದರೆ ನೀವು ಅಧಿಕಾರಿಗಳು. ಈ ರೀತಿ ಸಾಮಾನ್ಯ ಜನರ ಫೋಟೋ ಕೇಳುವ ಮೂಲಕ ಸಣ್ಣವರಾಗಿ ವರ್ತಿಸಬೇಡಿ" ಎಂದಿದ್ದಾರೆ. ಜಯಾ ಬಚ್ಚನ್ ಅವರ ಖಡಕ್ ಮಾತುಗಳನ್ನು ಕೇಳಿದ ಅಧಿಕಾರಿ ತಬ್ಬಿಬ್ಬಾದರು ಎನ್ನಲಾಗಿದೆ. 

Trending News