Jammu Temples On High Alert! ಭಾರತವನ್ನು ಬೆಚ್ಚಿಬೀಳಿಸಲು ಭಯೋತ್ಪಾದಕರ ಸಂಚು, ದೇವಸ್ಥಾನಗಳ ಮೇಲೆ ದಾಳಿಯ ಸಾಧ್ಯತೆ!

Jammu Temples On High Alert! ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ದೊಡ್ಡ ಭಯೋತ್ಪಾದಕ ಘಟನೆಗಳನ್ನು ನಡೆಸಲು ಪ್ರಯತ್ನಿಸುತ್ತಿವೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಭಾರತದಲ್ಲಿ ಕೋಮು ಉದ್ವಿಗ್ನತೆಯನ್ನು ಹರಡಲು ದೇವಸ್ಥಾನಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿವೆ.

Written by - Nitin Tabib | Last Updated : Jul 30, 2021, 11:55 AM IST
  • ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಪ್ರಯತ್ನಿಸುತ್ತಿವೆ.
  • ಕೋಮು ಉದ್ವಿಗ್ನತೆಯನ್ನು ಹರಡಲು ದೇವಸ್ಥಾನಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿವೆ.
  • ಈ ನಿಟ್ಟಿನಲ್ಲಿ ಗುಪ್ತಚರ ಸಂಸ್ಥೆಗಳಿಂದ ಮಾಹಿತಿ ಪಡೆದ ನಂತರ ಜಮ್ಮುವಿನಲ್ಲಿ ಹೈ ಅಲರ್ಟ್ ಘೋಷಣೆಯಾಗಿದೆ.
Jammu Temples On High Alert! ಭಾರತವನ್ನು ಬೆಚ್ಚಿಬೀಳಿಸಲು ಭಯೋತ್ಪಾದಕರ ಸಂಚು, ದೇವಸ್ಥಾನಗಳ ಮೇಲೆ  ದಾಳಿಯ ಸಾಧ್ಯತೆ! title=
Jammu Temples On High Alert!

Jammu Temples On High Alert! ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು ಭಾರತದಲ್ಲಿ ದೊಡ್ಡ ಭಯೋತ್ಪಾದಕ ಘಟನೆಗಳನ್ನು ನಡೆಸಲು ಪ್ರಯತ್ನಿಸುತ್ತಿವೆ. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳಾದ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೈಬಾ ಭಾರತದಲ್ಲಿ ಕೋಮು ಉದ್ವಿಗ್ನತೆಯನ್ನು ಹರಡಲು ದೇವಸ್ಥಾನಗಳ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸುತ್ತಿವೆ. ಈ ನಿಟ್ಟಿನಲ್ಲಿ ಗುಪ್ತಚರ ಸಂಸ್ಥೆಗಳಿಂದ (Intelligence Agencies) ಮಾಹಿತಿ ಪಡೆದ ನಂತರ ಜಮ್ಮುವಿನಲ್ಲಿ (Jammu And Kashmir) ಹೈ ಅಲರ್ಟ್ ಘೋಷಣೆಯಾಗಿದೆ. ಇಡೀ ನಗರದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆಂಗ್ಲ ಮಾಧ್ಯಮ ಮಾಡಿರುವ ವರದಿಯೊಂದರ ಪ್ರಕಾರ, ಉಗ್ರ ಸಂಘಟನೆಗಳು ಆಗಸ್ಟ್ 5 ಹಾಗೂ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಮ್ಮುವಿನ ದೇವಸ್ತಾನಗಳನ್ನು (Jammu Temples On High Alert) ಗುರಿಯಾಗಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆಗಸ್ಟ್ 5 ರಂದು ಆರ್ಟಿಕಲ್ 370 ರದ್ದುಗೊಳಿಸಿ ಎರಡು ವರ್ಷ ಪೂರ್ಣಗೊಳ್ಳಲಿದೆ ಹಾಗೂ ಈ ದಿನದನ್ನು ಉಗ್ರರು ಭಾರತವನ್ನು ಬೆಚ್ಚಿಬೀಳಿಸಲು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಡ್ರೋನ್ ಮೂಲಕ IED ಬೀಳಿಸುವ ಇತ್ತೀಚಿನ ಕೆಲ ಘಟನೆಗಳು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಸಂಘಟನೆಗಳು (Pakistan Terror Groups) ಜಮ್ಮುವಿನ ದೇವಾಲಯಗಳ ಬಳಿ ಜನಸಂದಣಿ ಇರುವ ಸ್ಥಳಗಳಲ್ಲಿ ಬೃಹತ್ ಸ್ಫೋಟಕಗಳನ್ನು ಉಡಾಯಿಸಲು ಪ್ರಯತ್ನಿಸುತ್ತಿವೆ (Terror Attack) ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ನಾರ್ತ್ ಬ್ಲಾಕ್‌ ಅಂದರೆ ರಕ್ಷಣಾ ಸಚಿವಾಲಯವ ಹಿರಿಯ ಅಧಿಕಾರಿಯೊಬ್ಬರು ನೀಡಿರುವ ಮಾಹಿತಿಯ ಪ್ರಕಾರ, ಈ ಹಿಂದೆ ಕನಿಷ್ಠ ಮೂರು ಭಯೋತ್ಪಾದಕ ಪಿತೂರಿ ಪ್ರಯತ್ನಗಳು ವಿಫಲವಾಗಿವೆ ಎಂದು ಹೇಳಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಮತ್ತೋರ್ವ ಅಧಿಕಾರಿ ಐಇಡಿ ಅನ್ನು ಸಾಗಿಸಲು ಡ್ರೋನ್ ಗಳ ಬಳಕೆ ಮಾಡಲಾಗಿದ್ದು, ಕಣಿವೆಯಲ್ಲಿ ಈಗಾಗಲೇ ಇರುವ ಉಗ್ರರು ಅವುಗಳನ್ನು ಅಳವಡಿಸುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಜುಲೈ 23 ರಂದು, ಜಮ್ಮು ಮತ್ತು ಕಾಶ್ಮೀರದ ಕನಚಕ್ ಪ್ರದೇಶದಲ್ಲಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿತ್ತು  ಮತ್ತು ಅದರೊಂದಿಗೆ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಡ್ರೋನ್‌ನಿಂದ ಐದು ಕಿಲೋಗ್ರಾಂ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಯಲ್ಲಿ, ಫೆಬ್ರವರಿಯಲ್ಲಿ ಜಮ್ಮು ನಗರದ ಜನನಿಬಿಡ ಬಸ್ ನಿಲ್ದಾಣದ ಬಳಿ ಏಳು ಕೆಜಿ ಐಇಡಿ ಪತ್ತೆಯಾಗಿದೆ. ಆದರೆ, ಈ ಪ್ರಕರಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ-India-China: ಚೀನಾಕ್ಕೆ ಪಾಠ ಕಲಿಸಲು ಹಸಿಮಾರಾ ಏರ್‌ಬೇಸ್‌ನಲ್ಲಿ ರಫೇಲ್ ನಿಯೋಜಿಸಿದ ಭಾರತ

ಜೂನ್ 27 ರಂದು ಜಮ್ಮು ವಾಯುಪಡೆ ನಿಲ್ದಾಣದ ತಾಂತ್ರಿಕ ಪ್ರದೇಶದಲ್ಲಿ ಡ್ರೋನ್ ಸ್ಫೋಟ ನಡೆಸಲಾಗಿತ್ತು ಹಾಗೂ ಮರುದಿನವೇ, ಕಾಶ್ಮೀರದಲ್ಲಿ ಭದ್ರತಾ ಪಡೆಗಳು ಮತ್ತು ನಾಗರಿಕರ ಮೇಲೆ ನಡೆಸಲಾದ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಲಷ್ಕರ್-ಎ-ತೊಯ್ಬಾ ಕಮಾಂಡರ್ ನದೀಮ್ ಅಬ್ರಾರ್ ಅವರನ್ನು ಪೊಲೀಸರು ಬಂದಿಸಿದ್ದರು. ಆತನ ಬಳಿಯಿಂದ ಒಂದು ಪಿಸ್ತೂಲ್ ಮತ್ತು ಗ್ರೆನೇಡ್ ಅನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ. ಈ ಘಟನೆಯಿಂದಲೂ ಕೂಡ ಉಗ್ರ ದಾಳಿಯ ಸಂಚನ್ನು ಅಂದಾಜಿಸಬಹುದು.

ಇದನ್ನೂ ಓದಿ-Balakot Air Strike: ಪಾಕಿಸ್ತಾನದ ಎದೆ ನಡುಗಿಸಿದ್ದ ಆ ದಾಳಿಗೆ ಇವತ್ತು ಎರಡು ವರ್ಷ..!

ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಪೊಲೀಸರು ಆತನ ಇಬ್ಬರು ಸಹಚರರನ್ನು ಬಂಧಿಸಿದ್ದರು. ಬಂಧಿಸಲಾಗಿರುವ ಇಬ್ಬರನ್ನು ಕಾಶ್ಮೀರದ ನಿವಾಸಿಗಳು ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಜಮ್ಮುವಿನ ಪ್ರಸಿದ್ಧ ರಘುನಾಥ್ ದೇವಸ್ಥಾನದ ಮೇಲೆ ಸಂಭಾವ್ಯ ದಾಳಿಯ ಕುರಿತು ಮಾಹಿತಿ ದೊರೆತಿತ್ತು. ಇದಾದ ಬಳಿಕ ಪೊಲೀಸರು ಅಲರ್ಟ್ ಘೋಷಿಸಿದ್ದರು. ಜಮ್ಮು ನಗರ ಹಾಗೂ ದೇವಸ್ಥಾನಗಳು ಉಗ್ರರ ರೇಡಾರ್ ಮೇಲಿವೆಯೇ? ಎಂಬ ಪ್ರಶ್ನೆಯನ್ನು ಕೂಡ ಅಲ್ಲಗಳೆಯಲು ಪೊಲೀಸರು ನಿರಾಕರಿಸಿದ್ದರು.

ಇದನ್ನೂ ಓದಿ-ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರು – ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News