Dalai Lama ವಿರುದ್ಧ ಬೇಹುಗಾರಿಕೆ ನಡೆಸುತ್ತಿದೆಯಂತೆ ಚೀನಾ: ವರದಿ

ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದ ಚಾರ್ಲಿ ಲುವೋ ಸಾಂಗ್ (Charlie Peng) ದೆಹಲಿಯಲ್ಲಿ ಕೆಲವು ಲಾಮಾಗಳಿಗೆ ಲಂಚ ನೀಡುವ ಮೂಲಕ ದಲೈ ಲಾಮಾ ಮತ್ತು ಅವರ ಆಪ್ತರ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಿದ್ದಾನೆ ಎಂದು ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಗಂಭೀರ ಮಾಹಿತಿ ಬಹಿರಂಗಪಡಿಸಿದೆ.

Last Updated : Aug 16, 2020, 04:27 PM IST
Dalai Lama ವಿರುದ್ಧ ಬೇಹುಗಾರಿಕೆ ನಡೆಸುತ್ತಿದೆಯಂತೆ ಚೀನಾ: ವರದಿ title=

ನವದೆಹಲಿ: ಬೌದ್ಧ ಧರ್ಮ ಗುರು ದಲೈ ಲಾಮಾ(Dalai Lama) ಬಗ್ಗೆ ಮಾಹಿತಿ ಕಲೆ ಹಾಕಲು ಚೀನಾ ಬೇಹುಗಾರಿಕೆ ಮತ್ತು ಲಂಚ ನೀಡುವಲ್ಲಿ ನಿರತವಾಗಿದೆ ಎಂಬ ಗಂಭೀರ ಮಾಹಿತಿ ಇದೀಗ ಬಹಿರಂಗವಾಗಿದೆ. ಹವಾಲಾ ವ್ಯವಹಾರಕ್ಕೆ ಸಂಬಂಧಿಸಿದ ಚಾರ್ಲಿ ಲುವೋ ಸಾಂಗ್ (Charlie Peng) ದೆಹಲಿಯಲ್ಲಿ ಕೆಲವು ಲಾಮಾಗಳಿಗೆ ಲಂಚ ನೀಡುವ ಮೂಲಕ ದಲೈ ಲಾಮಾ ಮತ್ತು ಅವರ ಆಪ್ತರ ಬಗ್ಗೆ ಮಾಹಿತಿ ಸಂಗ್ರಹಿಸಲು ಯತ್ನಿಸುತ್ತಿದ್ದಾನೆ ಎಂದು ಆದಾಯ ತೆರಿಗೆ ಇಲಾಖೆ (ಐಟಿ ಇಲಾಖೆ) ಗಂಭೀರ ಮಾಹಿತಿ ಬಹಿರಂಗಪಡಿಸಿದೆ.  ಇದಕ್ಕಾಗಿ ದೆಹಲಿಯ ಮಜನು ಕಾ ಟೀಲಾ ಬಳಿ ಪ್ಯಾಕೆಟ್ ನಲ್ಲಿ ಸುಮಾರು 2 ರಿಂದ 3 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ಐಟಿ ಇಲಾಖೆ ತಿಳಿಸಿದೆ. ಐಟಿ ಇಲಾಖೆಯ ಪ್ರಕಾರ, ಚೀನಾದ ಆ್ಯಪ್ WeChat ಲಂಚ ಮತ್ತು ಬೇಹುಗಾರಿಕೆಯ ಕುರಿತು ಚರ್ಚೆ ನಡೆಸಲಾಗಿದೆ ಎಂದಿದೆ. ಚಾರ್ಲಿಯೊಂದಿಗೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗರನ್ನು ಹಣ ತುಂಬಿದ ಪ್ಯಾಕೆಟ್‌ಗಳನ್ನು ನೀಡಲು ಬಳಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ.

ಈ ಕುರಿತು ಸರ್ಕಾರಿ ಏಜೆನ್ಸಿಗಳಿಗೆ ಮಾಹಿತಿ ನೀಡಲಾಗಿದೆ
ದಲೈ ಲಾಮಾ ಅವರ ಬೇಹುಗಾರಿಕೆಯಲ್ಲಿ ಚೀನಾದ ಏಜೆನ್ಸಿಗಳು ಭಾಗಿಯಾಗಿರುವ ಬಗ್ಗೆ  ಇತರ ಸರ್ಕಾರಿ ಸಂಸ್ಥೆಗಳ ಜೊತೆಗೂ ಕೂಡ  ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಇದರಿಂದಾಗಿ ಪ್ರಕರಣಕ್ಕೆ ಸಂಬಂಧಿಸಿದ ಇತರೆ ಅಂಶಗಳನ್ನು ಕೂಡ ಗಮನಿಸಲಾಗುವುದು. ಚಾರ್ಲಿ ಲುವೋ ಸಾಂಗ್ ಹೆಸರಿನ ಈ ಚೀನಾದ ನಾಗರಿಕನನ್ನು ದೆಹಲಿಯ ಪೋಲೀಸರ ವಿಶೇಷ ತಂಡ ಸೆಪ್ಟೆಂಬರ್ 13, 2018 ರಂದು ದೆಹಲಿಯ ಮಜನು ಕಾ ಟೀಲಾ ಪ್ರದೇಶದಿಂದ ಬಂಧಿಸಲಾಗಿತ್ತು. ಆಗ ಆತನ ಮೇಲೆ ನಕಲಿ ಪಾಸ್ಪೋರ್ಟ್ ಆಧಾರದ ಮೇಲೆ ದೆಹಲಿಯಲ್ಲಿ ವಾಸಿಸುವ ಆರೋಪ ಮಾಡಲಾಗಿತ್ತು. ಅದಾದ ಕೆಲ ದಿನಗಳ ಬಳಿಕ ಚಾರ್ಲಿ ಜಾಮೀನಿನ ಮೇಲೆ ಹೊರಬಂದಿದ್ದ.

ಇದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯ ಚಾರ್ಟರ್ಡ್ ಅಕೌಂಟೆಂಟ್ ನನ್ನೂ ಸಹ ಬಂಧಿಸಿದ್ದಾರೆ. ಈತ ಹವಾಲಾ ವಹಿವಾಟಿನಲ್ಲಿ ಚಾರ್ಲಿಗೆ ಸಹಾಯ ಮಾಡಿದ್ದ ಎನ್ನಲಾಗಿದೆ. ಶಂಕಿತ ಸಿಎ ಸುಮಾರು 40 ಬ್ಯಾಂಕ್ ಖಾತೆಗಳನ್ನು ನಿರ್ವಹಿಸುತ್ತಿದ್ದ. ಈ ಖಾತೆಗಳ ಮೂಲಕ ಚೀನಾದ ಕಂಪನಿಗಳೊಂದಿಗೆ ವಹಿವಾಟು ನಡೆಸಲಾಗುತ್ತಿತ್ತು. ಈ ಹವಾಲಾ ದಂಧೆ ಹಾಂಗ್ ಕಾಂಗ್‌ ಜೊತೆಗೂ ಕೂಡ ಸಂಪರ್ಕ ಹೊಂದಿದೆ ಎಂದು ತಿಳಿದುಬಂದಿದೆ. ಈ ಸಂಪೂರ್ಣ ಹವಾಲಾ ವಹಿವಾಟಿನ ಸಿದ್ಧತೆಯನ್ನು WeChat ಮೇಲೆ ನಡೆಸಲಾಗಿದೆ. ಈ ಖಾತೆಗಳ ಮೂಲಕ ಕೋಟ್ಯಂತರ ರೂಪಾಯಿ ಹಣಕಾಸಿನ ವಹಿವಾಟು ನಡೆಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಸದ್ಯ ಇಲಾಖೆ  ಹವಾಲಾ ಮೊತ್ತದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇತರೆ ಕೆಲ ಬ್ಯಾಂಕ್ ಉದ್ಯೋಗಿಗಳು ಸಹ ತಮ್ಮ ರೇಡಾರ್ ನಲ್ಲಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬೀಜಿಂಗ್‌ನ ದೊಡ್ಡ ಕಂಪನಿಗಳೂ ಸಹ ಈ ಕಪ್ಪು ಹಣದ ದಂಧೆಯಲ್ಲಿ ಭಾಗಿಯಾಗಿವೆ ಎಂದು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದೆ. ಈ ಕಂಪನಿಗಳು ಪಿತೂರಿಯನ್ನು ಕಾರ್ಯಗತಗೊಳಿಸಲು ತಮ್ಮದೇ ದೇಶದ ಕೆಲ ಸಣ್ಣ ಚೀನೀ ಕಂಪನಿಗಳಿಗೆ ನಕಲಿ ಪರ್ಚೆಸ್ ಆರ್ಡರ್ ಜಾರಿಗೊಳಿಸುತ್ತಿದ್ದವು ಹಾಗೂ ಬಳಿಕ ಬೋಗಸ್ ಬಿಲ್ ಗಳ ಮೂಲಕ ಕಲೆ ಹಾಕಲಾಗಿರುವ ಹಣವನ್ನು ದಲೈ ಲಾಮಾಗಳಂತಹ ಧರ್ಮಗುರುಗಳ ಕುರಿತು ಮಾಹಿತಿ ಕಲೆಹಾಕಲು ಬಳಸಲಾಗುತ್ತಿತ್ತು ಎಂದು ಇಲಾಖೆ ಹೇಳಿದೆ.

Trending News