IRCTC ಒಂದೇ ಪ್ಯಾಕೇಜ್‌ನಲ್ಲಿ 7 ಜ್ಯೋತಿರ್ಲಿಂಗ ದರ್ಶನ..! ಮಿಸ್‌ ಮಾಡ್ಕೋಬೇಡಿ..

IRCTC 7 Jyotirlinga yatra 2024 : ಹಿಂದೂ ಧರ್ಮದ ಪ್ರಕಾರ ಜ್ಯೋತಿರ್ಲಿಂಗಗಳ ದರ್ಶನ ಪಾಪ ಕರ್ಮಗಳ ಮುಕ್ತಿಗೆ ದಾರಿ ಅಂತ ಹೇಳಲಾಗುತ್ತದೆ.. ಅದಕ್ಕಾಗಿ ಈ ಕ್ಷೇತ್ರಗಳಿಗೆ ಭೇಟಿ ನೀಡಿ ಶಿವನ ದರ್ಶನ ಮಾಡಬೇಕು ಎನ್ನುವುದು ಪ್ರತಿಯೊಬ್ಬರ ಆಸೆಯಾಗಿರುತ್ತದೆ. ವಿಶೇಷವಾಗಿ ಶಿವನ ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಜ್ಯೋತಿರ್ಲಿಂಗಗಳ ದರ್ಶನ ಪಡೆಯಲೇಬೇಕು.. 

Written by - Krishna N K | Last Updated : Jul 30, 2024, 03:47 PM IST
    • ಜ್ಯೋತಿರ್ಲಿಂಗಗಳ ದರ್ಶನ ಪಾಪ ಕರ್ಮಗಳ ಮುಕ್ತಿಗೆ ದಾರಿ
    • ನೀವು ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡುವ ಆಸೆ ಹೊಂದಿದ್ದೀರಾ..?
    • ಶಿವನ ಭಕ್ತರು ಜೀವನದಲ್ಲಿ ಒಮ್ಮೆಯಾದರೂ ಜ್ಯೋತಿರ್ಲಿಂಗಗಳ ದರ್ಶನ ಪಡೆಯಲೇಬೇಕು..
IRCTC ಒಂದೇ ಪ್ಯಾಕೇಜ್‌ನಲ್ಲಿ 7 ಜ್ಯೋತಿರ್ಲಿಂಗ ದರ್ಶನ..! ಮಿಸ್‌ ಮಾಡ್ಕೋಬೇಡಿ.. title=

IRCTC jyotirlinga darshan package : ನೀವು ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡಬೇಕು ಎನ್ನುವ ಆಸೆ ಹೊಂದಿದ್ದರೆ.. ಅಂತಹ ಟೂರ್ ಪ್ಯಾಕೇಜ್‌ ಅನ್ನು IRCTC ನಿಮಗೆ ಒದಗಿಸುತ್ತದೆ.. ಏಕಕಾಲದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡಬೇಕು ಅಂತ ಬಯಸುವ ಬಕ್ತರು, IRCTC ಸಪ್ತ (07) ಭಾರತ್ ಗೌರವ್ ಟೂರಿಸ್ಟ್ ಟ್ರೈನ್ 2 AC, 3 AC, SL ಕ್ಲಾಸ್‌ ಜ್ಯೋತಿರ್ಲಿಂಗ ದರ್ಶನ ಯಾತ್ರೆಯ ಹೆಸರಿನ ಪ್ಯಾಕೆಜ್‌ನ ಲಾಭ ಪಡೆಯಬಹುದು. 

ಈ ಪ್ರವಾಸ ಪ್ಯಾಕೇಜ್‌ ಮೂಲಕ ನೀವು ಉಜ್ಜಯಿನಿ (ಮಹಾಕಾಲೇಶ್ವರ, ಓಂಕಾರೇಶ್ವರ), ದ್ವಾರಕಾ (ನಾಗೇಶ್ವರ), ಸೋಮನಾಥ (ಸೋಮನಾಥೇಶ್ವರ) ಪುಣೆ ಭೀಮಾಶಂಕರ, ನಾಸಿಕ್ (ತ್ರಯಂಬಕೇಶ್ವರ), ಔರಂಗಾಬಾದ್ (ಗ್ರಿಷ್ಣೇಶ್ವರ) ಕ್ಷೇತ್ರಗಳಿಗೆ ಭೇಟಿ ನೀಡಬಹುದು.. ಸಪ್ತ ಜ್ಯೋತಿರ್ಲಿಂಗ ಪ್ರವಾಸ ಪ್ಯಾಕೇಜ್ 12 ದಿನಗಳ ಪ್ರವಾಸವಾಗಿದೆ.

ಇದನ್ನೂ ಓದಿ: ʼಕಾರ್ಗಿಲ್ ವಿಜಯ ದಿವಸʼ 25ನೇ ವಾರ್ಷಿಕೋತ್ಸವ; ಹುತಾತ್ಮರಿಗೆ ಪ್ರಧಾನಿ ಮೋದಿ ಗೌರವ

11 ರಾತ್ರಿಗಳು/12 ದಿನಗಳು. ಪ್ರವಾಸವು 17ನೇ ಆಗಸ್ಟ್ 2024 ರಂದು ಪ್ರಾರಂಭವಾಗುತ್ತದೆ. ಈ ರೈಲಿನಲ್ಲಿ ಲಭ್ಯವಿರುವ ಸೀಟುಗಳು 716 (SL: 460, 3AC: 206, 2AC: 50). ಈ ಪ್ರವಾಸ ಪ್ಯಾಕೇಜ್ ವಿಜಯವಾಡದಿಂದ ಪ್ರಾರಂಭವಾಗುತ್ತದೆ. ಅಲ್ಲಿಂದ ಮಥುರಾ, ಖಮ್ಮಂ, ಡೋರ್ನಕಲ್ ಜಂಕ್ಷನ್, ಮಹಬೂಬಾಬಾದ್, ವಾರಂಗಲ್, ಖಾಜಿಪೇಟ್, ಜನಗಾಂ, ಭುವನಗಿರಿ, ಸಿಕಂದರಾಬಾದ್, ಕಾಮರೆಡ್ಡಿ, ನಿಜಾಮಾಬಾದ್, ಧರ್ಮಾಬಾದ್, ಮುಡ್ಕೇಡ್, ನಾಂದೇಡ್ ಮತ್ತು ಪೂರ್ಣಾ ಮೂಲಕ ಪ್ರವಾಸ ಸಾಗಲಿದೆ.    

ಇಬ್ಬರು ಅಥವಾ ಮೂರು ಜನ ಸಪ್ತ ಟೂರ್ ಪ್ಯಾಕೇಜ್‌ನಲ್ಲಿ ಎಕಾನಮಿಯಲ್ಲಿ ಪ್ರಯಾಣಿಸಿದರೆ 20590 ರೂ. ದರ. 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ ರೂ. 19,255. ಪ್ರಮಾಣಿತ ವರ್ಗದಲ್ಲಿ, ಎರಡು ಅಥವಾ ಮೂರು ಜನರು ಒಟ್ಟಿಗೆ ಪ್ರಯಾಣಿಸಿದರೆ ರೂ. 33,015 ಮತ್ತು ಮಕ್ಕಳಿಗೆ 31,440 ರೂ. ಅದೇ ಕಂಫರ್ಟ್ ಕೆಟಗರಿಯಾದರೆ ಎರಡು ಮೂರು ಜನ ಪ್ರಯಾಣಿಸಿದರೆ ತಲಾ ರೂ. 43,355, ಮಕ್ಕಳಿಗೆ ರೂ. 41,465 ಪಾವತಿಸಬೇಕು.  ಈ ಪ್ಯಾಕೇಜ್ ಬೆಳಗಿನ ಚಹಾ, ಉಪಹಾರ, ಮಧ್ಯಾಹ್ನದ ಊಟ, ರಾತ್ರಿ (ಸಸ್ಯಹಾರಿ) ಮತ್ತು ಪ್ರಯಾಣ ವಿಮೆಯನ್ನು ಸಹ ಪ್ರಯಾಣಿಕರಿಗೆ ನೀಡುತ್ತದೆ. ರೈಲಿಗೆ ಭದ್ರತೆಯೂ ಇರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News