ನಿಮ್ಮ ಮಗಳ ಕನಸುಗಳಿಗೆ ರೆಕ್ಕೆ ನೀಡಲು ಉತ್ತಮ ರಿಟರ್ನ್ಸ್ ನೀಡಲಿವೆ ಈ ಯೋಜನೆಗಳು

ನಿಮ್ಮ ಮಗಳಿಗೆ ದೊಡ್ಡ ನಿಧಿಯನ್ನು ಮಾಡಲು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ದೀರ್ಘಾವಧಿಯ ಹೂಡಿಕೆ ಸಹಕಾರಿಯಾಗಿದೆ.

Written by - Yashaswini V | Last Updated : Apr 21, 2020, 09:30 AM IST
ನಿಮ್ಮ ಮಗಳ ಕನಸುಗಳಿಗೆ ರೆಕ್ಕೆ ನೀಡಲು ಉತ್ತಮ ರಿಟರ್ನ್ಸ್ ನೀಡಲಿವೆ ಈ ಯೋಜನೆಗಳು title=

ನವದೆಹಲಿ : ಇಂದಿನ ಸಮಾಜದಲ್ಲಿ ಹೆಣ್ಣುಮಕ್ಕಳ ಸ್ಥಿತಿಯನ್ನು ಸುಧಾರಿಸಲು ಮತ್ತು ಹೆಣ್ಣು ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪ್ರತಿಯೊಬ್ಬ ಪೋಷಕರು ಉತ್ತಮ ರಿಟರ್ನ್ಸ್ ನೀಡುವ ಯೋಜನೆಯಲ್ಲಿ ಹಣ ಹೂಡಿಕೆ ಮಾಡಲು ಬಯಸುತ್ತಾರೆ. ಇದರ ಮುಖ್ಯ ಉದ್ದೇಶ ಮಕ್ಕಳ ಕನಸನ್ನು ಈಡೇರಿಸುವುದು.

ತಮ್ಮ ಮಗಳ ಕನಸುಗಳನ್ನು ನನಸಾಗಿಸಲು ಪೋಷಕರು ತಮ್ಮ ಬಲವಾದ ಅಡಿಪಾಯಕ್ಕಾಗಿ ಮೊದಲಿನಿಂದಲೂ ಹೂಡಿಕೆ ಮಾಡಲು ಪ್ರಾರಂಭಿಸಬೇಕು. ಇಂದು ಮಾರುಕಟ್ಟೆಯಲ್ಲಿ ಹೆಣ್ಣು ಮಕ್ಕಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅನೇಕ ಉತ್ತಮ ಯೋಜನೆಗಳು (ಹೆಣ್ಣು ಮಕ್ಕಳ ಯೋಜನೆಗಳು) ಬರಲಿವೆ. ಆದರೆ ಮಗಳಿಗಾಗಿ ಹಣವನ್ನು ದೀರ್ಘಾವಧಿಯವರೆಗೆ ಹೂಡಿಕೆ ಮಾಡಬೇಕಾದರೆ ಸುಕನ್ಯಾ ಸಮೃದ್ಧಿ ಯೋಜನೆ, ಮ್ಯೂಚುವಲ್ ಫಂಡ್‌ (Mutual Fund)ಗಳಲ್ಲಿನ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ) ಮತ್ತು ಸಾರ್ವಜನಿಕ ಭವಿಷ್ಯ ನಿಧಿ ಕೆಲವು ಅತ್ಯುತ್ತಮ ಆಯ್ಕೆಗಳಾಗಿವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಮಗಳ ಭವಿಷ್ಯದ ಆರ್ಥಿಕ ವೆಚ್ಚಗಳ ಬಗ್ಗೆ ನೀವು ನೆಮ್ಮದಿಯಾಗಿ ಇರಬಹುದು.

PPF ಸೇರಿದಂತೆ ಈ ಯೋಜನೆಗಳ ಖಾತೆದಾರರಿಗೆ ದೊಡ್ಡ ಪರಿಹಾರ ಪ್ರಕಟಿಸಿದ ಅಂಚೆ ಇಲಾಖೆ

ಎಸ್‌ಐಪಿ ದೀರ್ಘಕಾಲದ ಪಾಲುದಾರ:
ಮ್ಯೂಚುಯಲ್ ಫಂಡ್‌ಗಳನ್ನು ದೀರ್ಘಾವಧಿಯ ಹೂಡಿಕೆ ಮತ್ತು ಉತ್ತಮ ಆದಾಯಕ್ಕಾಗಿ ಉತ್ತಮ ಆಯ್ಕೆ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಅಪಾಯ ಎಷ್ಟಿದೆಯೋ ಆದಾಯವೂ ಅಷ್ಟೇ ಹೆಚ್ಚಿರುತ್ತದೆ. ನೀವು ಸ್ವಲ್ಪ ಅಪಾಯವನ್ನು ತೆಗೆದುಕೊಳ್ಳಬಹುದಾದರೆ ವ್ಯವಸ್ಥಿತ ಹೂಡಿಕೆ ಯೋಜನೆ-ಎಸ್‌ಐಪಿ ಮೂಲಕ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ ಆಯ್ಕೆಯಾಗಿದೆ. ದೀರ್ಘಾವಧಿಯಲ್ಲಿ ಈಕ್ವಿಟಿಗಳು ಉತ್ತಮ ಲಾಭವನ್ನು ನೀಡುತ್ತವೆ ಮತ್ತು ಎಸ್‌ಐಪಿಗಳ ಮೂಲಕ ಹೂಡಿಕೆ ಮಾಡುವುದರಿಂದ ಹೂಡಿಕೆಯ ವೆಚ್ಚವೂ ಕಡಿಮೆಯಾಗುತ್ತದೆ.

ತೆರಿಗೆ ಉಳಿಸಲು ಈ 5 ಮಾರ್ಗ ಅನುಸರಿಸಿ

ಹೆಚ್ಚಿನ ಭದ್ರತೆ ಹೊಂದಿರುವ ಪಿಪಿಎಫ್‌:
ನಿಮ್ಮ ಮಗಳಿಗೆ ದೊಡ್ಡ ನಿಧಿಯನ್ನು ಮಾಡಲು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ದೀರ್ಘಾವಧಿಯ ಹೂಡಿಕೆ ಸಹಕಾರಿಯಾಗಿದೆ. ಪಿಪಿಎಫ್ (PPF) ಮೇಲಿನ ಬಡ್ಡಿ ಕೂಡ ತೆರಿಗೆ ಮುಕ್ತವಾಗಿದೆ. ಅಲ್ಲದೆ ಪಿಪಿಎಫ್‌ನಲ್ಲಿನ ಹೂಡಿಕೆಯ ಮೇಲೆ ನೀವು ಆದಾಯ ತೆರಿಗೆ ರಿಯಾಯಿತಿ ಪಡೆಯುತ್ತೀರಿ. 

ಹೆಣ್ಣು ಮಗುವಿನ ಭವಿಷ್ಯಕ್ಕೆ ಉತ್ತಮ ಹೂಡಿಕೆಯ ಆಯ್ಕೆ; ಇಲ್ಲಿದೆ ಮಾಹಿತಿ!

ಸುಕನ್ಯಾ ಸಮೃದ್ಧಿ ಯೋಜನೆ:
ಹೆಣ್ಣುಮಕ್ಕಳ ಭವಿಷ್ಯವನ್ನು ಬಲಪಡಿಸಲು ಕೇಂದ್ರ ಸರ್ಕಾರ ಸುಕನ್ಯ ಸಮೃದ್ಧಿ ಯೋಜನೆ (Sukanya Samriddhi Yojana) ಯನ್ನು ಪ್ರಾರಂಭಿಸಿದೆ. ಈ ಯೋಜನೆಯು ಪಿಪಿಎಫ್‌ಗಿಂತ ಹೆಚ್ಚಿನ ಬಡ್ಡಿ ಪಡೆಯುತ್ತದೆ. ಪಿಪಿಎಫ್‌ನಂತೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಆದಾಯ ತೆರಿಗೆ ವಿನಾಯಿತಿ ಲಭ್ಯವಿದೆ.

ಏನಿದು ಸುಕನ್ಯಾ ಸಮೃದ್ಧಿ ಯೋಜನೆ!

ನಿಮ್ಮ ಮಗಳಿಗೆ 10 ವರ್ಷ ವಯಸ್ಸಿನವರೆಗೆ ನೀವು ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದು. ನೀವು ಯಾವುದೇ ಅಂಚೆ ಕಚೇರಿ ಅಥವಾ ಬ್ಯಾಂಕುಗಳ ಅಧಿಕೃತ ಶಾಖೆಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದು. ಸಾಮಾನ್ಯವಾಗಿ ಪಿಪಿಎಫ್ ಖಾತೆ ತೆರೆಯುವ ಸೌಲಭ್ಯವನ್ನು ಒದಗಿಸುವ ಬ್ಯಾಂಕುಗಳು ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ಸಹ ತೆರೆಯುತ್ತವೆ.

ಈ ಯೋಜನೆಗಳು ಕೇಂದ್ರ ಸರ್ಕಾರದವು. ಇವುಗಳಲ್ಲದೆ ರಾಜ್ಯ ಮಟ್ಟದಲ್ಲಿ ಅನೇಕ ಯೋಜನೆಗಳನ್ನು ನಡೆಸಲಾಗುತ್ತಿದೆ. ಪ್ರತಿ ರಾಜ್ಯದ ಯೋಜನೆಯಲ್ಲಿ ಹೂಡಿಕೆ ಮತ್ತು ಆದಾಯದ ನಿಯಮಗಳು ಸಹ ವಿಭಿನ್ನವಾಗಿವೆ.

Trending News